ಶ್ರೀವೈಷ್ಣವ ಗುರುಪರಂಪರೆ ತನಿಯನ್ಗಳು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ:

srisailesa-thanian-small

 

‘ತನಿಯನ್’, ಒಬ್ಬ  ಶಿಷ್ಯ ತನ್ನ ಆಚಾರ್ಯರನ್ನು ವೈಭವೀಕರಿಸುವ ಪ್ರಾರ್ಥನಾ  ಪದ್ಯ  . ಕೂರತ್ತಾೞ್ವಾನ್ ಒಂದು ಶ್ಲೋಕದ ಮೂಲಕ (ಈ ಶ್ಲೋಕ ನಮ್ಮ ನಿತ್ಯಾನುಸಂಧಾನದ ಭಾಗವಾಗಿದೆ) ನಮ್ಮ ಗುರುಪರಂಪರೆ ಬಗ್ಗೆ ಸುಂದರವಾಗಿ ಹಾಗು ಸಂಕ್ಷಿಪ್ತವಾಗಿ ತಿಳಿಸುತ್ತಾರೆ.

ಲಕ್ಶ್ಮೀನಾಥ  ಸಮಾರಂಭಾಮ್   ನಾಥ ಯಾಮುನ   ಮಧ್ಯಮಾಮ್ ಅಸ್ಮದಾಚಾರ್ಯ ಪರ್ಯಂತಾಮ್  ವಂದೇ ಗುರು   ಪರಂಪರಾಮ್

ಸರಳ ಅನುವಾದ : ಅಡಿಯೇನ್ (‘ದಾಸನಾದ’ ನಾನು) ನಮ್ಮ ಗುರುಪರಂಪರೆಯನ್ನು ಆರಂಭಿಸಲು ಶ್ರೀಃ ಪತಿಯಾದ ( ಶ್ರೀ ಮಹಾಲಕ್ಶ್ಮಿ ದೇವಿಯ ಪತಿ) ಶ್ರೀಮನ್ನಾರಾಯಣನಿಂದ ಪ್ರಾರಂಭವಾಗಿ ,ನಾಥ ಮುನಿಗಳು ಹಾಗು ಯಾಮುನ ಮುನಿಗಳನ್ನು ನಡುವರನ್ನಾಗಿಟ್ಟುಕೊಂಡು , ಕೊನೆಯದಾಗಿ ನಮ್ಮ ಆಚಾರ್ಯರನ್ನು   ಅಡಿಯೇನ್ ಪ್ರಾರ್ಥಿಸುತ್ತೇನೆ . ನಮ್ಮ ಗುರು ಪರಂಪರೆಯನ್ನು ವೈಭವೀಕರಿಸಲು ಈ ದಿವ್ಯ  ಶ್ಲೋಕವನ್ನು ಕೂರತ್ತಾೞ್ವಾನ್ (ಕೂರೇಸ )  ನಿರೂಪಿಸಿದ್ದಾರೆ. ಅವರ ಪ್ರಕಾರ, ‘ಅಸ್ಮದಾಚಾರ್ಯ’ ಎಂದರೆ  ಎಂಪೆರುಮಾನಾರ್. ಏಕೆಂದರೆ ,ಎಂಪೆರುಮಾನಾರೇ ಅವರ  ಆಚಾರ್ಯ. ಶ್ಲೋಕ ರಚಿಸಿದ ಆೞ್ವಾನ್  ಅವರಿಗೆ ಆಚಾರ್ಯರಾದ ಎಂಪೆರುಮಾನಾರ್  (ಶ್ರೀ ರಾಮಾನುಜರು) ‘ಅಸ್ಮದ್-ಆಚರ್ಯಾ’ಎಂಬ ಪದದಿಂದ ಸೂಚಿಸಲ್ಪಟ್ಟಿದ್ದಾರೆ, ಆದರೆ ನಮ್ಮೆಲ್ಲರಿಗೂ ,ಪಂಚಸಂಸ್ಕಾರವನ್ನು ಮಾಡಿದ ಸಮಾಶ್ರಯಣ-ಆಚಾರ್ಯರನ್ನು ಸೂಚಿಸುತ್ತದೆ.

ನಾವು ಈಗಾ ಪೆರಿಯ ಪೆರುಮಾಳ್ ರಿಂದ ಪ್ರಾರಂಭಿಸಿ ಮಣವಾಳ ಮಾಮುನಿಗಳೊಂದಿಗೆ ಕೊನೆಗೊಳ್ಳುವ ಓರಾಣ್ ವೞಿ ಗುರುಪರಂಪರೆ ಪ್ರಾರಂಭಿಸುತ್ತ ಏಲ್ಲ ಪೂರ್ವಾಚಾರ್ಯರ ತನಿಯನ್ಗಳನ್ನು ನೋಡೋಣ. ತದ ನಂತರ ಆೞ್ವಾರ್ ಹಾಗು ನಮ್ಮ ಸತ್ಸಂಪ್ರದಾಯದ ಮತ್ತೆಲ್ಲಾ  ಪೂರ್ವಾಚಾರ್ಯರ ತನಿಯನ್ಗಳನ್ನು ನೋಡೋಣ.

1.ಪೆರೀಯ ಪೆರುಮಾಳ್ (ಆವಣಿ-ರೋಹಿಣಿ)

ಶ್ರೀ ಸ್ಥನಾಭರಣಮ್ ತೇಜಃ ಶ್ರೀರಂಗೇಶಯಮಾಶ್ರಯೇ
ಚಿಂತಾಮಣಿ ಮಿವೋತ್ವಾಂತಮ್-ಉತ್ಸಂಗೇ ಅನಂತಭೋಗಿನಃ

ಶ್ರೀ ಮಹಾಲಕ್ಷ್ಮೀಯ ಸ್ಥನಗಳಲ್ಲಿ ಸುಂದರವಾದ ಆಭರಣವಾಗಿರುವ, ತಾನೇ ಶ್ರೇಷ್ಠ ತೇಜಸ್ಸಿನಿಂದ ಹೊಳೆಯುತ್ತಿರುವ, ಶ್ರೀರಂಗದಲ್ಲಿ ವಿಶ್ರಾಂತಿಸಿಕೊಂಡಿರುವ ಮತ್ತು ಆದಿಶೇಷನ ಮಡಿಲಿನಲ್ಲಿ ಕಿರೀಟ ಆಭರಣವಾಗಿದ್ದಾನೋ ಆ ಶ್ರೀರಂಗನಾಥನಿಗೆ ಅಡಿಯೆನ್ ಸಮರ್ಪಿಸುವ ಪ್ರಾರ್ಥನೆಗಳು.

2. ಪೆರಿಯ ಪಿರಾಟ್ಟಿ (ಪಂಗುನಿ-ಉತ್ತರಮ್)

ನಮಃ ಶ್ರಿರಂಗ ನಾಯಕ್ಯೈ ಯತ್ ಭ್ರೋ ವಿಭ್ರಮ ಭೇತತಃ
ಈಶೇಶಿತವ್ಯ ವೈಶಮ್ಯ ನಿಮ್ನೋನ್ನತಮ್ ಇದಂ ಜಗತ್

ಕೇವಲ ತಮ್ಮ ಹುಬ್ಬುಗಳ ಸೈಜ್ಞೆಗಳಿಂದ (ಈ ಮೂಲಕ ಅವರು ತಮ್ಮ ಇಚ್ಛೆಗಳನ್ನು ಹಾಗು ಪ್ರತಿಕ್ರಿಯೆಯನ್ನು ಬಹಿರಂಗಪಡಿಸುತ್ತಾರೆ) ಎಲ್ಲಾ ಜೀವಾತ್ಮರ ವಿಧಿಯನ್ನು [ ಶ್ರೀಮಂತಕೆ ಅಥವಾ ಬಡವತನ , ವಿದ್ಯಾವಂತಕೆ (ಅಕ್ಶರಸ್ತ ) ಅಥವಾ ಅನಕ್ಷರಸ್ತ] ನಿರ್ಧರಿಸುವ ಶ್ರೀರಂಗ ನಾಚ್ಚಿಯಾರನ್ನು ಅಡಿಯೆನ್ ಪ್ರಾರ್ಥಿಸುತೇನೆ.

3. ಸೇನೈ ಮುದಲಿಯಾರ್ (ಐಪಸಿ ಪೂರಾಡಂ )

ಶ್ರಿರಂಗಚಂದ್ರಮಸಮ್ ಇಂದಿರಯಾ ವಿಹರ್ತುಮ್
ವಿನ್ಯಸ್ಯ ವಿಸ್ವಚಿಧ ಚಿನ್ನಯನಾದಿಕಾರಮ್
ಯೋ ನಿರ್ವಹತ್ಯ ನಿಸಮಂಗುಳಿ ಮುದ್ರಯೈವ
ಸೇನಾನ್ಯಮ್ ಅನ್ಯ ವಿಮುಕಾಸ್ ತಮಸಿ ಶ್ರಿಯಾಮ

. ವಿಷ್ವಕ್ಸೇನರು , ಶ್ಸುಂರೀರಂಗದ ಸುಂದರವಾದ ಚಂದ್ರನನ್ನು,( ಶ್ರೀ ರಂಗನಾಥನನ್ನು) ಶ್ರೀ ರಂಗನಾಚ್ಚಿಯಾರೊಡನೆ ತಮ್ಮ ದಿವ್ಯ ಲೀಲೆಗಳನ್ನು ಆನಂದದಿಂದ ಅನುಭವಿಸಲು ಏಕಾಂತದಲ್ಲಿ ಬಿಟ್ಟು, ತನಗೆ ಎಂಪೆರುಮಾನ್ ಕೊಟ್ಟಿರುವ ಅಧಿಕಾರದೊಂದಿಗೆ ವಿಶ್ವಕ್ಸೇನರು ಎಲ್ಲಾ ಜೀವಾತ್ಮಗಳನ್ನು ನಿಯಂತ್ರಿಸುತ್ತಾರೆ . ನಾವು ಆ ವಿಷ್ವಕ್ಸೇನರನ್ನು ಏಕೈಕ ಆಶ್ರಯವೆಂದು ಸ್ವೀಕರಿಸುತ್ತೇವೆ .

4.ನಮ್ಮಾಳ್ವಾರ್ (ವೈಕಾಸಿ – ವಿಸಾಖಂ )

ಮಾತಾ ಪಿತಾ ಯುವತಯಸ್-ತನಯಾ ವಿಭೂತಿಃ
ಸರ್ವಮ್ ಯ ದೇವ ನಿಯಮೇನ ಮದ್ ಅನ್ವಯಾನಾಮ್
ಆದ್ಯಸ್ಯನಃ ಕುಲಪತೇರ್ ವಕುಳಾಭಿರಾಮಮ್
ಶ್ರೀಮತ್ತದಂಘ್ರಿ ಯುಗಳಮ್ ಪ್ರಣಮಾಮಿ ಮೂರ್ದ್ನಾ

ಶ್ರೀ ವೈಷ್ಣವರಿಗೆ (ಪ್ರಪ್ಪನ್ನರಿಗೆ ) ನಾಯಕರಾದ ಹಾಗು ನಮ್ಮ ಕುಲದ ಮುಖ್ಯಸ್ಥರಾದ ನಮ್ನಾೞ್ಪಾರಿನ ಪಾದ ಪದ್ಮಗಳಿಗೆ ಅಡಿಯೆನ್ ಶಿರಸ್ಸನ್ನು ಬಾಗಿ ನಮಸ್ಕರಿಸುತ್ತೇನೆ. ನಮ್ ಆಳ್ವಾರ್ ಬಕುಳ ಪುಷ್ಪಗಳ್ಳಿoದ ಅಲಂಕೃತರಾಗಿ, ದಿವ್ಯ ಕಮಲ ಪಾದಗಳನ್ನು ಶ್ರೀ ವೈಷ್ಣವ ಶ್ರೀ (ದಿವ್ಯ ಸಂಪತ್ತು ) ತುಂಬಿಕೊಂಡಿದ್ದಾರೆ . ನಮ್ಮ ಪ್ರಪನ್ನ ಕುಲದವರಿಗೆ ಇವರೆ ತಂದೆ, ತಾಯಿ , ಭರ್ತ , ಸಂಗಾತಿ , ಮಕ್ಕಳು , ನಿಧಿ ಹಾಗು ಸರ್ವಸ್ವವೂ ಇವರೆ .

5. ನಾಥಮುನಿಗಳ್ (ಆನಿ – ಅನುಶಮ್)

ನಮಃ ಅಚಿಂತ್ಯ ಅದ್ಭುತ ಅಕ್ಲಿಶ್ಟ ಜ್ಞಾನ ವೈರಾಗ್ಯ ರಾಶಯೇ
ನಾಥಾಯ ಮುನಯೇ ಅಗಾದ ಭಗವದ್ ಭಕ್ತಿ ಸಿಂಧವೇ

ಭಗವಂತನ ಬಗ್ಗೆ ಜ್ಞಾನದಲ್ಲಿ ಹಾಗು ಲೌಕಿಕ ವಿಷಯಗಳ ಬಗ್ಗೆ ವೈರಾಗ್ಯದಲ್ಲಿ ಪೂರ್ಣರಾಗಿರುವ, ಅವರ ಮೌಲ್ಯ ಗ್ರಹಣೆಯನ್ನು ಮೀರಿರುವ, ಅಸಾಮಾನ್ಯರಾದ , ಭಗವಂತನ ಧ್ಯಾನದಲ್ಲೇ ಸದಾ ಮಗ್ನರಾಗಿರುವ ,ಹಾಗು ಭಗವಂತನ ಬಗ್ಗೆ ಅಗಾಡ ಭಕ್ತಿಯ ಸಾಗರರಾಗಿರುವ ನಾಥಮುನಿಗಳಿಗೆ  ಅಡಿಯೇನ್ ನಮಸ್ಕರಿಸುತ್ತೇನೆ.

6. ಉಯ್ಯಕ್ಕೊಂಡಾರ್ (ಚಿತ್ತಿರೈ – ಕಾರ್ತಿಗೈ)

ನಮಃ ಪಂಕಜ ನೇತ್ರಾಯ ನಾಥಃ ಶ್ರೀ ಪಾದ ಪಂಕಜೇ
ನ್ಯಸ್ತ ಸರ್ವ ಭಾರಾಯ ಅಸ್ಮತ್ ಕುಲ ನಾಥಾಯ ಧೀಮತೇ

ಅಡಿಯೇನ್, ನಾಥಮುನಿಗಳ ಪಾದಗಳಲ್ಲಿ ಸಂಪೂರ್ಣವಾಗಿ ಶರಣಾಗಿ , ಪ್ರಪ್ಪನ್ನರ ಕುಲಕ್ಕೆ ನಾಯಕರಾದ  ಹಾಗು ಶ್ರೇಷ್ಟ  ಜ್ಞಾನಿಯಾದ ಪುಂಡರೀಕಾಕ್ಷರಿಗೆ (ಉಯ್ಯಕ್ಕೊಂಡಾರ್) ನಮಸ್ಕರಿಸುತ್ತೇನೆ.

7. ಮಣಕ್ಕಾಲ್ ನಂಬಿ (ಮಾಸಿ – ಮಖಂ)

ಅಯತ್ನಥೋ ಯಾಮುನಮ್ ಆತ್ಮ ದಾಸಮ್ ಅಲರ್ಕ್ಕ ಪತ್ರಾರ್ಪ್ಪಣ ನಿಶ್ಕ್ರಯೇಣ
ಯಃ ಕೃತ್ವಾನಾಸ್ತಿತ ಯೌವರಾಜ್ಯಮ್ ನಮಾಮಿದಮ್ ರಾಮಮೇಯ ಸತ್ವಮ್

ತಮ್ಮ ಜಾಣ್ಮೆಯಿಂದ ಯುವರಾಜರಾಗಿದ್ದ ಯಾಮುನರನ್ನು (ಆಳವಂದಾರ್) ಕೇವಲ ಅಲರ್ಕ (ಕನ್ನಡದಲ್ಲಿ ಅಂಬುಸೊಂಡೆಬಳ್ಳಿಯ) ಪತ್ರಗಳಿಂದ(ಏಲೆಗಳು) ತಿದ್ದಿದ ಶ್ರೀ ರಾಮ ಮಿಶ್ರರಿಗೆ (ಮಣಕ್ಕಾಲ್ ನಂಬಿಗಳಿಗೆ) ಅಡಿಯೇನ್ ನಮಸ್ಕರಿಸುತ್ತೇನೆ.

8. ಆಳವಂದಾರ್ (ಆಡಿ –  ಉತ್ತರಾಡಮ್ )

ಯತ್ ಪದಾಮ್ಭೋರುಹಧ್ಯಾನ ವಿದ್ವಸ್ಥಾಶೇಶ ಕಲ್ಮಶಃ.
ವಸ್ತುಥಾಮುಪಯಾ ತೋಹಮ್ ಯಾಮುನೇಯಮ್ ನಮಾಮಿತಮ್

ಯಾರ ಪಾದಗಳ ಧ್ಯಾನದಿಂದ  ‘ಅಸತ್’ ಆಗಿ  ಲೋಪ ಭರಿತನಾದ ನಾನು ತಿದ್ದಲ್ಪಟ್ಟು, ನಾನು ಒಬ್ಬ ಸತ್ ಎಂದು (ಜ್ಞಾನವನ್ನು ಉಳ್ಳವ)    ಅರಿತೆನೋ ಅಂತಃ ಯಾಮುನಾಚಾರ್ಯರಿಗೆ ಅಡಿಯೇನ್  ನಮಸ್ಕರಿಸುತ್ತೇನೆ.

9. ಪೆರಿಯ ನಂಬಿ (ಮಾರ್ಘೞಿ ಕೇಟ್ಟೈ)

10. ಎಂಪೆರುಮಾನಾರ್  (ಚಿತ್ತಿರೈ – ತಿರುವಾದಿರೈ)

ಯೋನಿತ್ಯಮಚ್ಯುತ ಪದಾಂಬುಜ ಯುಗ್ಮ ರುಕ್ಮ
ವ್ಯಾಮೋಹತಸ್ ತದಿತರಾಣಿ ತೃಣಾಯ ಮೇನೇ
ಅಸ್ಮದ್ಗುರೋರ್ ಭಗವತೋಸ್ಯ ದಯೈಕಸಿಂಧೋಃ
ರಾಮಾನುಜಸ್ಯ ಚರಣೌ ಶರಣಮ್ ಪ್ರಪದ್ಯೇ

ಕರುಣಾಸಾಗರನಾದ, ಭಕ್ತಿ, ಜ್ಞಾನ ಇತ್ಯಾದಿ ಕಲ್ಯಾಣ ಗುಣಗಳಲ್ಲಿ ಸಂಪೂರ್ಣರಾದ , ಅಚ್ಯುತನ ಚಿನ್ನದ ಪಾದಕಮಲಗಳ ಮೇಲಿರುವ ಪ್ರೇಮದ ಬಾಂಧವ್ಯ ಬಿಟ್ಟರೆ ಮಿಕ್ಕಿದ್ದೆಲ್ಲಾ ಅನರ್ಹ ಎಂದು ಪರಿಗಣಿಸುವ, ನನ್ನ ಆಚಾರ್ಯರಾದ ರಾಮಾನುಜರ ಕಮಲ ಚರಣಗಳಲ್ಲಿ ನಾನು ಆಶ್ರಯಗೊಳ್ಳುತ್ತೇನೆ!

10. ಎಂಬಾರ್ (ತೈ – ಪುನರ್ಪೂಸಮ್)

ಶ್ರೀ ಪರಾಶರ ಭಟ್ಟಾರ್ಯ ಶ್ರೀರಂಗೇಶ ಪುರೋಹಿತಃ
ಶ್ರೀವತ್ಸಾಂಕ ಸುತಃ ಶ್ರೀಮಾನ್ ಶ್ರೇಯಸೇ ಮೇಸ್ತು ಭೂಯಸೇ.

ಎಂಬಾರ್(ಗೋವಿಂದ ಭಟ್ಟರ್) ತಮ್ಮ ನಿಜ ಸ್ವರೂಪವನ್ನರಿತು, ಶ್ರೀರಾಮಾನುಜರ ಪಾದಗಳಲ್ಲಿ ಶರಣು ಕೋರಿದರು, ಹಾಗು ಶ್ರೀ ರಾಮಾನುಜರ ಪಾದ ಛಾಯೆಯಂತೆ ಅವರಿಂದ ಬೇರುಪಡಿಸಲಾಗದಂತೆ ಇದ್ದರು, ಇಂತಃ ಎಂಬಾರಿನ ಪಾದಗಳು ನಮಗೆ (ದುಖಃ ದಿಂದ ಕಾಪಾಡುವ) ನೆರಳಿನಂತೆ ಇರುವ ಆಶ್ರಯ. ಇಂತಃ ಎಂಬಾರಿಗೆ ಜಯವಾಗಲಿ.

11. ಭಟ್ಟರ್ (ವೈಕಾಸಿ – ಅನುಶಮ್)

ಶ್ರೀ ಪರಾಶರ ಭಟ್ಟಾರ್ಯ ಶ್ರೀರಂಗೇಶ ಪುರೋಹಿತಃ
ಶ್ರೀವತ್ಸಾಂಕ ಸುತಃ ಶ್ರೀಮಾನ್ ಶ್ರೇಯಸೇ ಮೇಸ್ತು ಭೂಯಸೇ.

ಶ್ರೀ ರಂಗನಾಥನ ಪುರೋಹಿತರಾದ , ಕೂರತ್ತಾೞ್ತಾನಿನ ಮಗನಾದ ಹಾಗು ಕೈಂಕರ್ಯ ({ಭಗವತ್/ಭಾಗವತ} ಸೇವೆ) ಶ್ರೀಯಿನ ನಿಧಿಯಲ್ಲಿ ಪೂರ್ಣರಾಗಿರುವ ಭಟ್ಟರ್,  ಅಡಿಯೇನಿಗೆ ಸಖಲ ಶುಭಗಳನ್ನು ಅನುಗ್ರಹಿಸಲ್ಲಿ.

12. ನಂಜೀಯರ್ (ಪಂಗುನಿ – ಉತ್ತರo)

ನಮೋ ವೇದಾಂತ ವೇದ್ಯಾಯ ಜಗನ್ ಮಂಗಳ ಹೇತವೇ
ಯಸ್ಯ ವಾಗಾಮೃತಾಸಾರ ಪೂರಿತಮ್ ಭುವನತ್ರಯಮ್

ಅಮೃತದ ವಾಕ್ ನಿಂದ ಭರಿತ ವೇದಾಂತಿ ನಂಜಿಯರ್ ಮೂರೂ ಲೋಕಗಳಲ್ಲಿಯೂ ವ್ಯಾಪಿಸಿ ಹಾಗು ಆ ಮೂರೂ ಲೋಕಗಳಿಗೆ ಶುಭವನ್ನೇ ತರುವ ನಂಜೀಯರಿಗೆ ಪ್ರಣಾಮಗಳು.

13. ನಂಪಿಳ್ಳೈ (ಕಾರ್ತಿಗೈ – ಕಾರ್ತಿಗೈ)

ವೇದಾಂತ ವೇದ್ಯ ಅಮೃತ ವಾರಿರಾಸೇರ್
ವೇದಾರ್ಥ ಸಾರ ಅಮೃತ ಪೂರಮಗ್ರ್ಯಮ್
ಆದಾಯ ವರ್ಶಂತಮ್ ಅಹo ಪ್ರಪದ್ಯೇ
ಕಾರುಣ್ಯ ಪೂರ್ಣಮ್ ಕಲಿವೈರಿದಾಸಮ್

ತತ್ವಗಳ ಸಾಗರವಾಗಿದ್ದ ವೇದಾಂತೀ ಜೀಯರಿಂದ ಅಮೃತಮಯ ವೇದದ ಸಾರವನ್ನರಿತು ಉಪದೇಶಿಸುವ ಕಲಿವೈರಿದಾಸರ್ (ನಂಪಿಳ್ಳೈ) ಅವರ ಪಾದಗಳ್ಳಲ್ಲಿ ಅಡಿಯೇನ್ ಆಶ್ರಯಿಸುತ್ತೇನೆ

14. ವಡಕ್ಕು ತಿರುವೀದಿ ಪಿಳ್ಳೈ (ಆನಿ – ಸ್ವಾತಿ)

ಶ್ರೀ ಕೃಷ್ಣ ಪಾದ ಪಾದಾಬ್ಜೆ ನಮಾಮಿ ಶಿರಸಾ ಸದಾ
ಯತ್ ಪ್ರಸಾದ ಪ್ರಭಾವೇನ ಸರ್ವ ಸಿದ್ಧಿರಭೂನ್ಮಮ

ಯಾರ ದಯೆಯಿಂದ ಜ್ಞಾನ ,ಭಕ್ತಿ  , ವೈರಾಗ್ಯಗಳನ್ನು  ಇತ್ಯಾದಿ  ಪಡೆದೆನೋ  ಅಂತಹ  , ಶ್ರೀ ಕೃಷ್ಣರ (ವಡಕ್ಕು ತಿರುವೀದಿ ಪಿಳ್ಳೈ) ಪಾದಪದ್ಮಗಳಲ್ಲಿ ಸತತವಾಗಿ  ಅಡಿಯೇನ್  ತಲೆ ಬಾಗುತ್ತೇನೆ .

15. ಪಿಳ್ಳೈ ಲೋಕಾಚಾರ್ಯರ್ (ಐಪ್ಪಸಿ – ತಿರುವೋಣಮ್)

ಲೋಕಾಚಾರ್ಯ ಗುರವೇ ಕೃಷ್ಣ ಪಾದಸ್ಯ ಸೂನವೇ
ಸಂಸಾರ ಭೋಗಿ ಸಂಧಷ್ಟ ಸಂತಶ್ಟ ಜೀವ ಜೀವಾತವೇ ನಮಃ

ಶ್ರೀ ಕೃಷ್ಣ ( ವಡಕ್ಕು ತಿರುವೀದಿ ಪಿಳ್ಳೈ ) ಅವರ ತಿರುಕುಮಾರರಾದ , ಆಚಾರ್ಯ ಸ್ಥಾನಕ್ಕೆ ಸಂಪೂರ್ಣವಾಗಿ ಅರ್ಹರಾದ , ಸಂಸಾರವೆಂಬ ನಂಜುಳ್ಳ ಸರ್ಪದಿಂದ ಕಡಿತ ಜೀವಾತ್ಮರಿಗೆ ಔಷಧವಾಗಿರುವ ಪಿಳ್ಳೈ ಲೋಕಾಚಾರ್ಯರರಿಗೆ ಅಡಿಯೆನ್ ಸಪರ್ಪಿಸುವ ವಂದನೆಗಳು.

16. ತಿರುವಾಯ್ಮೊೞಿ ಪಿಳ್ಳೈ ( ವೈಕಾಸಿ ವಿಸಾಕಮ್)

ನಮಃ ಶ್ರೀಶೈಲನಾಥಯ ಕುಂತೀ ನಗರ ಜನ್ಮನೇ
ಪ್ರಸಾಧಲಬ್ಧ ಪರಮ ಪ್ರಾಪ್ಯ ಕೈಂಕರ್ಯಶಾಲಿನೇ

ಕುಂತಿನಗರದಲ್ಲಿ ಅವತರಿಸಿದ ಶ್ರೀ ಶೈಲನಾಥರು (ತಿರುಮಲೈ ಆೞ್ವಾರ್ ) , ತಮ್ಮ ಆಚಾರ್ಯರ ಅನುಗ್ರಹದಿಂದ ಪರಮ ಪ್ರಾಪ್ಯವಾದ ಕೈಂಕರ್ಯವನ್ನು ಸಾಧಿಸಿದ  ತಿರುವಾಯ್ಮೊೞಿ ಪಿಳ್ಳೈಗೆ ಅಡಿಯೇನ್ ಮಾಡುವ ವಂದನೆಗಳು.

17. ಅೞಗೀಯಾ ಮಣವಾಳ ಮಾಮುನಿಗಳ್ (ಐಪ್ಪಸಿ – ತಿರುಮೂಲಮ್)

ಶ್ರೀ ಶೈಲೇಶ ದಯಾ ಪಾತ್ರಮ್ ದೀಭಕ್ತ್ಯಾದಿ ಗುಣಾರ್ಣವಮ್
ಯತೀoದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್

ತಿರುಮಲೈ ಆೞ್ವಾರಿನ ಕರುಣೆಗೆ ಪಾತ್ರರಾದ , ಶ್ರೀ ರಾಮಾನುಜರ ಬಗ್ಗೆ ತುಂಬಾ ಪ್ರೀತಿಯಿರುವ ಹಾಗು ಜ್ಞಾನ-ಭಕ್ತಿಗಳಂತಃ ಸದ್ಗುಣಗಳ ಸಮುದ್ರರಾಗಿರುವ, ಶ್ರೀ ಅೞಗೀಯ ಮಣವಾಳ ಮಾಮುನಿಗಳನ್ನು ಅಡಿಯೇನ್  ಸ್ತುತಿಸುತ್ತೇನೆ .

ಈಗ ನಾವು ಆೞ್ವಾರರ ತನಿಯನ್ ಗಳನ್ನು ಅನುಭವಿಸೋಣ

1. ಪೊಯ್ಗೈ  ಆೞ್ವಾರ್ (ಐಪ್ಪಸಿ – ತಿರುವೋಣಂ)

ಕಾಂಚ್ಯಾಮ್ ಸರಸಿ ಹೇಮಾಬ್ಜೇ ಜಾತಮ್ ಕಾಸಾರ ಯೋಗಿಣಮ್
ಕಲಯೇ ಯಃ ಶ್ರೀಯಃ ಪಥ್ಯೆ ರವಿಂ ಧೀಪಂ ಅಕಲ್ಪಯತ್

ತಿರುವೆಕ್ಕಾ  ದಿವ್ಯದೇಶದಲ್ಲಿ (ಕಾಂಚಿಪುರಂ) ಒಂದು ಕೊಳದಲ್ಲಿ  ಚಿನ್ನ ಕಮಲದಲ್ಲಿ ಅವತರಿಸಿದ ,ತೇಜೋಮಯನಾದ, ಸೂರ್ಯನಿಂದ ಶ್ರೀಮನ್ನಾರಾಯಣನ   ದಿವ್ಯ ದರ್ಶನವನ್ನು   ಕಾಣಲು ದೀಪವನ್ನು   ಬೆಳಗಿಸಿದ ಪೊಯ್ಗೈ ಆೞ್ವಾರನ್ನು ಕುರಿತು ಅಡಿಯೇನ್ ಏಕಾಗ್ರಚಿಂತೆಯಿಂದ ಧ್ಯಾನಿಸುತ್ತೇನೆ .

2. ಭೂದತ್ತಾೞ್ವಾರ್ (ಐಪ್ಪಸಿ – ಅವ್ವಿಟ್ಟಂ)

ಮಲ್ಲಾಪುರ ವರಾದೀಶಮ್ ಮಾದವೀ ಕುಸುಮೋದ್ಭವಮ್
ಭೂತಮ್ ನಮಾಮಿ ಯೋ ವಿಷ್ಣೋರ್ ಜ್ಞಾನದೀಪಮ್ ಅಕಲ್ಪಯತ್

ತಿರುಕ್ಕಡಲ್ಮಲ್ಲೈಯ (ಮಾಮಲ್ಲಪುರಂ) ನಾಯಕರಾಗಿ , ಮಾಧವೀ(ವಸಂತ) ಪುಷ್ಪದಲ್ಲಿ ಅವತರಿಸಿದ ಪರಮ ಪುರುಷನ್ನನ್ನು( ಶ್ರೀಮನ್ನಾರಾಯಣ) ದರ್ಶಿಸಲು ಜ್ಞಾನದ ದೀಪ ಬೆಳಗಿದ ಭೂದ ತ್ತಾೞ್ವಾರನ್ನು  ಅಡಿಯೇನ್ ಪೂಜಿಸುತ್ತೇನೆ.

3. ಪೇಯಾೞ್ವಾರ್(ಐಪ್ಪಸಿ – ಸದಯಂ )

ದ್ರುಷ್ಟ್ವಾ ಹೃಷ್ಟಮ್ ತದಾ ವಿಷ್ಣುಮ್ ರಮಯಾ ಮಯಿಲಾದೀಪಂ.
ಕೂಪೇ ರಕ್ತೋತ್ಫಲಂ ಜಾತಂ ಮಹತಾಹ್ವಯಂ ಆಶ್ರಯೇ

ಮೈಲಾಪುರದ ನಾಯಕರಾಗಿ ಒಂದು ಬಾವಿಯಲ್ಲಿ ಕೆಂಪು ಪುಷ್ಪದಲ್ಲಿ ಅವತರಿಸಿದ , ಶ್ರೀ ಪತಿಯಾದ ಶ್ರೀಮನ್ನಾರಾಯಣನನ್ನು ಶ್ರೀಮಹಾಲಕ್ಶ್ಮಿಯೊಂದಿಗೆ ದರ್ಶಿಸಿ ಅತ್ಯಂತ ಆನಂದವನ್ನು  ಅನುಭವಿಸಿದ ಪೇಯಾೞ್ವಾರವರ ಪಾದಗಳಲ್ಲಿ  ಅಡಿಯೇನ್  ಶರಣಾಗುತ್ತೇನೆ.

4. ತಿರುಮೞಿಸೈ ಆೞ್ವಾರ್ (ತೈ – ಮಗಮ್)

ಶಕ್ತಿ ಪಂಚಮಯ ವಿಗ್ರಹಾತಿಮಣೇ ಸೂಕ್ತಿಕಾರಜತ ಚಿತ್ತ ಹಾರಿಣೇ.
ಮುಕ್ತಿದಾಯಕ ಮುರಾರೀ ಪಾದಯೋರ್ ಭಕ್ತಿಸಾರ ಮುನಯೇ ನಮೋ ನಮಃ

ಮುರಾರಿಯ(ಮುರ ಎಂಬ ಅಸುರನನ್ನು ಕೋಂದವನು ) ಪಾದಗಳಲ್ಲಿ ಭಕ್ತಿಯ ಸದೃಶವಾಗಿ, ಸರ್ವರಿಗೂ ಮೋಕ್ಷವನ್ನು ಅನುಗ್ರಹಿಸಬಲ್ಲ ತರುಮೞಿಸೈ ಆೞ್ವಾರ್ ಅವರಿಗೆ  ಅಡಿಯೇನ್ ನಮಸ್ಕರಿಸುತ್ತೇನೆ .ವೀಕ್ಷಿಸಲು ಆಕರ್ಷಕವಾಗಿರುವ ದೈವಿಕ ರೂಪವನ್ನು ಹೊಂದು , ದಿವ್ಯ ವಸ್ತುಗಳಿಂದ ಸೃಷ್ಟಿಸಲ್ಪಟ್ಟು ಎಂಪೆರುಮಾನ್ ಅವರ ಹೃದಯದಲ್ಲಿ ನೆಲಸಿದ್ದಾರೆ. (ಭೌತಿಕ ಪ್ರಪಂಚದಲ್ಲಿ ನಮ್ಮ ಶರೀರವು ಪಂಚಭೂತಗಳಿಂದ-ಆಕಾಶ,ವಾಯು, ತೇಜಃ, ಅಪ್ಪು ಹಾಗು ಪೃಥ್ವೀ ಗಳಿಂದ ಶರೀರ ನಿರ್ಮಿತವಾಗಿದ್ದೆ ; ಅದರೇ ಭಗವಾನಿನ ದಿವ್ಯ ಸ್ವರೂಪವೂ ಪಂಚ ಉಪನಿಷದ್ ಗಳಿಂದ ಸೃಷ್ಟಿಸಲಾಗಿದೆ- ವಿಶ್ವಮ್, ನಿವ್ರುತ್ತಃ , ಸರ್ವಃ , ಪರಮೇಷ್ಠಿ , ಪುಮಾನ್ ). ಮತ್ತೊಂದು ವ್ಯಾಖ್ಯಾನ , ರಾಜ ‘ಸೂಕ್ತಿ ಹಾರನ್’ ನ್ನು ಗೆದ್ದು , ಹಾರವನ್ನು ಧರಿಸಿದವರು

5.ಮಧುರಕವಿ ಆೞ್ವಾರ್ (ಚಿತ್ತಿರೈ – ಚಿತ್ತಿರೈ)

ಅವಿಧಿತ ವಿಷಯಾಂತರಸ್ ಶಠಾರೇರ್ ಉಪನಿಷದಾಮ್  ಉಪಗಾನ ಮಾತ್ರ ಭೋಗಃ .
ಅಪಿ ಚ ಗುಣ ವಷಾತ್ ತದೇಕ ಶೇಷಿ. ಮಧುರಕವಿ ಹೃದಯೇ ಮಮಾವಿರಸ್ತು

ಅವರ ಆಚಾರ್ಯರಾದ ನಮ್ಮಾೞ್ವಾರನ್ನು ಬಿಟ್ಟು ಇನ್ನೊಬ್ಬರನ್ನು ತಿಳಿಯದೆ,ಸ್ವಾಭಾವಿಕವಾಗಿ ನಮ್ಮಾೞ್ವಾರನ್ನೇ ಅವರ ಸ್ವಾಮಿ(ಶೇಷಿ ) ಎಂಬ ಭಾವನೆಯಿಂದ ಪರಿಗಣಿಸಿದರು . ಅವರು ರಚಿಸಿದ ಪಾಸುರಗಳ ಅನುಸಂಧಾನವನ್ನೆ ಭೋಗ್ಯವಾಗಿ ಕಂಡ ಮಧುರಕವಿ ಆೞ್ವಾರ್ ಅಡಿಯೆನಿನ  ಹೃದಯದಲ್ಲಿ ಸದಾ ಧೃಡವಾಗಿ ನೆಲೆಸಿರಲ್ಲಿ  .

6. ನಮ್ಮಾೞ್ವಾರ್ ( ವೈಕಾಸಿ ವಿಶಾಖಂ )

ಮಾತಾ ಪಿತಾ ಯುವತಯಸ್-ತನಯಾ ವಿಭೂತಿಃ
ಸರ್ವಮ್ ಯ ದೇವ ನಿಯಮೇನ ಮದ್ ಅನ್ವಯಾನಾಮ್
ಆದ್ಯಸ್ಯನಃ ಕುಲಪತೇರ್ ವಕುಳಾಭಿರಾಮಮ್
ಶ್ರೀಮತ್ ತದಂಘ್ರಿ ಯುಗಳಂ ಪ್ರಣಮಾಮಿ ಮೂರ್ಧ್ನಾ

ಬಕುಳ ಪುಷ್ಪಗಳಿಂದ ಅಲಂಕೃತರಾಗಿ , ತಮ್ಮ ಪಾದಪದ್ಮಗಳಲ್ಲಿ ಶ್ರೀ ವೈಷ್ಣವಶ್ರೀ ತುಂಬಿರುವ, ಏಲ್ಲಾ ಶ್ರೀವೈಷ್ಣವರ(ಪ್ರಪ್ಪನ್ನರ) ನಾಯಕರಾದ, ಹಾಗು ನಮ್ಮ ಕುಲದ ನಾಯಕರೂ ಆಗಿರುವ ನಮ್ಮಾೞ್ವಾರಿನ ಪಾದಕಮಲಗಳಿಗೆ  ಅಡಿಯೇನ್ ಶಿರಸ್ಸನ್ನು ಬಾಗುತ್ತೇನೆ. ನಮ್ಮ ಕುಲದವರಿಗೆ ಇವರೆ ತಾಯಿ, ತಂದೆ, ಭರ್ತ , ಮಕ್ಕಳು, ನಿಧಿ , ಹಾಗು ಎಲ್ಲವೂ ಇವರೇ.

7. ಕುಲಶೇಖರ್ ಆೞ್ವಾರ್ (ಮಾಸಿ – ಪುನರ್ಪೂಸಂ )

ಘುಷ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ
ತಮಹಮ್ ಶಿರಸಾ ವಂದೇ ರಾಜನಾಮ್ ಕುಲಶೇಖರಂ

ಯಾರ ರಾಜಧಾನಿಯಲ್ಲಿ ಸದಾ ಶ್ರೀರಂಗ ಯಾತ್ರೆಯ ಬಗ್ಗೆ ಸ್ತುತಿಸುವರೋ ಅಂತಹ ನಾಡಿನ ರಾಜರಾಗಿದ್ದ ಕುಲಶೇಖರಾೞ್ವಾರರಿಗೆ ಅಡಿಯೇನ್ ತಲೆಬಾಗಿ ನಮಸ್ಕರಿಸುತ್ತೇನೆ.

8. ಪೆರಿಯಾೞ್ವಾರ್ (ಆನಿ – ಸ್ವಾತಿ)

ಗುರುಮುಖಂ ಅನದೀತ್ಯ ಪ್ರಾಹವೇದಾನ್ ಅಸೇಷಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮಾಧಾತು ಕಾಮಃ ಸ್ವಸುರಂ
ಅಮರ ವಂದ್ಯಮ್ ರಂಗನಾಥಸ್ಯ ಸಾಕ್ಷಾತ್
ದ್ವಿಜ ಕುಲ ತಿಲಕಂ ವಿಷ್ಣುಚಿತ್ತಂ ನಮಾಮಿ

ಅಡಿಯೇನ್, ವೇದದ ಸಾರವನ್ನು (ಸಾಮಾನ್ಯವಾಗಿ ವೇದವನ್ನು ಒಬ್ಬ ಗುರುವಿನಿಂದ ಕಲಿಯುತ್ತೇವೆ ಆದರೆ, ಒಬ್ಬ ಗುರುವಿನಿಂದ ಅಲ್ಲದೆ ಭಗವಂತನ ಅನುಗ್ರಹದಿಂದಲೇ ನಿರ್ದೋಷ ಜ್ಞಾನವನ್ನು ಪಡೆದರು ) ಪಾಂಡ್ಯ ರಾಜನ ಆಸ್ಥಾನದಲ್ಲಿ ಘೋಷಿಸಿ ಭಗವಂತನ ಅನುಗ್ರಹದಂದ ಚಿನ್ನದ ಚೀಲವನ್ನು ಗೆದ್ದ, ಶ್ರೀರಂಗನಾಥನಿಗೇ ಮಾವರಾಗಿದ್ದ(ಏಕೆಂದರೆ ಇವರು {ಗೋದ} ಆಂಡಾಳ್ ನಾಚ್ಚಿಯಾರಿನ ತಂದೆ) ಹಾಗು ಬ್ರಾಹ್ಮಣರ ನಾಯಕರಾಗಿದ್ದ ಪೆರಿಯಾೞ್ವಾರನ್ನು ಪೂಜಿಸುತ್ತೇನೆ.

9. ಆಂಡಾಳ್ (ಆಡಿ – ಪೂರಮ್)

ಗುರುಮುಖಂ ಅನದೀತ್ಯ ಪ್ರಾಹವೇದಾನ್ ಅಸೇಷಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮಾಧಾತು ಕಾಮಃ ಸ್ವಸುರಂ
ಅಮರ ವಂದ್ಯಮ್ ರಂಗನಾಥಸ್ಯ ಸಾಕ್ಷಾತ್
ದ್ವಿಜ ಕುಲ ತಿಲಕಂ ವಿಷ್ಣುಚಿತ್ತಂ ನಮಾಮಿ

ಅಡಿಯೇನ್, ನೀಳಾದೇವಿಯ ಸ್ಥನಗಳ ಮೇಲೆ ಮಲಗಿದ್ದ ಶ್ರೀ ಕೃಷ್ಣನನ್ನು ಎಬ್ಬಿಸಿ, ತನ್ನ ಪಾರತಂತ್ರ್ಯವನ್ನು(  ವೇದವನ್ನು ಅಂತಿಮ ಪ್ರಧಾನವೆಂದು ಎತ್ತಿತೋರಿಸುವುದು  ) ಅವನಿಗೆ ತಿಳಿಸಿ ತಾನು ಧರಿಸಿದ ಹೂ ಮಾಲೆಯಿಂದ ಅಲಂಕೃತನಾದ ಭಗವಂತನನ್ನು ಅನುಭವಿಸಿದ ಗೋದಾ ದೇವಿಗೆ ಮತ್ತೆ ಮತ್ತೆ ನನ್ನ ವಂದನೆಗಳು.

10. ತೊಂಡರಡಿಪ್ಪೊಡಿ ಆೞ್ವಾರ್ (ಮಾರ್ಗೞಿ – ಕೇಟ್ಟೈ)

ತಮೇವ ಮತ್ವಾ ಪರವಾಸುದೇವಮ್ ರಂಗೇಶಯಂ ರಾಜವದರ್ಹಣೀಯಮ್
ಪ್ರಾಭೋದಿಕೀಮ್ ಯೋಕೃತ ಸೂಕ್ತಿಮಾಲಾಂ ಭಕ್ತಾಂಘ್ರಿ ರೇಣುಮ್ ಭಗವಂತಮೀಡೇ

ಶ್ರೀರಂಗನಾಥನನ್ನೇ ಪರವಾಸುದೇವನೆಂದು ಭಾವಿಸುತ್ತಾ, ಅವನನ್ನು ರಾಜನಂತೆ ಮುದ್ದಾಡಿ, ಶಯನದಿಂದ ಎಚ್ಚರಗೊಳಿಸಲು ತಿರುಪಳ್ಳಿಯೆೞುಚ್ಚಿಯನ್ನು ಹಾಡಿದ ತೊಂಡರಡಿಪೊಡ್ಡಿಯಾೞ್ವಾರನ್ನು ಅಡಿಯೇನ್, ಸ್ತುತಿಸುತ್ತೇನೆ.

11. ತಿರುಪ್ಪಾಣಾೞ್ವಾರ್ (ಕಾರ್ತಿಗೈ – ರೋಹಿಣಿ)

ಆಪಾದ ಚೂಡಂ ಅನುಭೂಯ ಹರಿಂ ಶಯಾನಂ
ಮಧ್ಯೆ ಕವೇರ ದುಹಿತುರ್ ಮುದಿತಾಂತರಾತ್ಮಾ.
ಅದೃಷ್ಟ್ರತಾಂ ನಯನಯೋರ್ ವಿಷಯಾಂತರಾಣಾಂ
ಯೋ ನಿಶ್ಚಿಕಾಯ ಮನವೈ ಮುನಿವಾಹನಂ ತಮ್

ಎರಡು ನದಿಗಳ ನಡುವೆ  (ಕಾವೆರಿ-ಕೊಳ್ಳಿಡ೦ )   ನೆಲಸಿರುವ ಶ್ರೀರಂಗನಾಥನನ್ನು ದರ್ಶಿಸಿ ಪರಮಭೋಗವನ್ನು ಅನುಭವಿಸಿ ಹಾಗು ತನ್ನ ಕಣ್ಣುಗಳುನಿಂದ ಏನನ್ನೂ ನೋಡುವುದಿಲ್ಲ ಎಂದು ಘೋಷಿಸಿದ   ಮುನಿವಾಹನರಾದ (ಲೋಕ ಸಾರಂಗ ಮುನಿಗಳು ಇವರನ್ನು ಹೊತ್ತ ಕಾರಣದಿಂದ ಇವರಿಗೆ ಈ ಹೆಸರು) ತಿರುಪ್ಪಾಣಾೞ್ವಾರನ್ನು ಅಡಿಯೇನ್  ಧ್ಯಾನಿಸುತ್ತೇನೆ.

12. ತಿರುಮಂಗೈ ಆೞ್ವಾರ್ (ಕಾರ್ತಿಗೈ – ಕಾರ್ತಿಗೈ)

ಕಲಯಾಮಿ ಕಲಿಧ್ವಂಸಮ್ ಕವಿಂ ಲೋಕ ದಿವಾಕರಂ
ಯಸ್ಯ ಗೋಭಿಃ ಪ್ರಕಾಶಾಭಿರ್ ಅವಿದ್ಯಂ ನಿಹತಂ ತಮಃ

ಕವಿಗಳ ಲೋಕದಲ್ಲಿ ತೇಜೋವಂತ ಸೂರ್ಯರಾದ  ಹಾಗು  ಪ್ರಕಾಶವುಳ್ಳ ವಚನದಿಂದ ಮನಸ್ಸಿನಲ್ಲಿರುವ ಅಜ್ಞಾನವನ್ನು  ಸಂಪೂರ್ಣವಾಗಿ ನಾಶಮಾಡುವ, ಅಂತಹ ‘ಕಲಿಕನ್ರಿ’ಯೆಂದು ಕರೆಯಲ್ಪಡುವ ತಿರುಮಂಗೈ ಆೞ್ವಾರನ್ನು   ಅಡಿಯೇನ್,  ಏಕಾಗ್ರತೆಯಿಂದ ಮನನಿಸುತ್ತೇನೆ .

 

ಓರಾಣ್ವೞಿ ಗುರುಪರಂಪರೈಯಲ್ಲಿ ಇಲ್ಲದ ಕೆಲವು ಆಚಾರ್ಯರ (ಇನ್ನು ಹಲವಾರು ಆಚಾರ್ಯರು ಉಂಟು-  ಆದರೆ ಇವರಿಗೇ ಸೀಮಿತವಾಗಿಲ್ಲ  )

1. ಕುರುಗೈ ಕಾವಲಪ್ಪನ್ (ತೈ –  ವಿಸಾಖಂ )

ನಾಥಮೌನಿ ಪದಾಸಕ್ತಮ್ ಜ್ಞಾನಯೋಗಾದಿ ಸಂಪದಮ್
ಕುರುಕಾಧಿಪ ಯೋಗೀಂದ್ರಮ್ ನಮಾಮಿ ಶಿರಸಾ ಸದಾ

ಜ್ಞಾನ ಯೋಗ-ಭಕ್ತಿ ಯೋಗಗಳ ಐಶ್ವರ್ಯವನ್ನು ಹೊಂದಿರುವ ನಾಥಮುನಿಗಳ ಪಾದಗಳಲ್ಲಿ ಅತ್ಯಂತ ಭಕ್ತಿ ಉಳ್ಳ ಹಾಗು ಅತ್ಯುತ್ತಮ ಯೋಗಿಯಾಗಿದ್ದ ಕುರುಗೈ ಕಾವಲಪ್ಪನ್ ರವರ ಪಾದಗಳಿಗೆ ಅಡಿಯೇನ್ ನಿರಂತರವಾಗಿ ನಮಸ್ಕರಿಸಿತ್ತೇನೆ .

2. ತಿರುವರಂಗಪ್ಪೆರುಮಾಳ್ ಅರೈಯರ್ (ವೈಕಾಸಿ, ಕೇಟ್ಟೈ)

ಶ್ರೀರಾಮಮಿಶ್ರ ಪದ ಪಂಕಜ ಸಂಚರೀಕಂ ಶ್ರೀಯಾಮುನಾರ್ಯ ವರ ಪುತ್ರಂ ಅಹಂ ಗುಣಾಭ್ಯಂ
ಶ್ರೀರಂಗರಾಜ ಕರುಣಾ ಪರಿಣಾಮ ದತ್ತಂ ಶ್ರೀಭಾಷ್ಯಕಾರ ಶರಣಂ ವರರಂಗಮಿಡೇ

ಮಣಕ್ಕಾಲ್ ನಂಬಿಗಳ ಪಾದಪಂಕಜಗಳಲ್ಲಿ ದುಂಬಿಯಂತೆ ಇದ್ದ ,ಶ್ರೀ ಯಾಮುನಾಚರ್ಯರ ದಿವ್ಯ ಕುಮಾರರಾದ ಹಾಗು ಸದ್ಗುಣಗಳ್ಳನ್ನು ಹೊಂದಿರುವ, ಶ್ರೀರಂಗನಾಥನ ದಿವ್ಯಾನುಗ್ರಹದಿಂದ ಅವತರಿಸಿ ಶ್ರೀಭಾಷ್ಯಕಾರರನ್ನೇ ತಮ್ಮ ಶಿಷ್ಯರಾಗಿ ಹೊಂದಿದ ತಿರುವರಂಗಪ್ಪೆರುಮಾಳ್  ಅರಯರ್ ಅವರನ್ನು ಅಡಿಯೇನ್ ಶ್ಲಾಘಿಸುತ್ತೇನೆ .

3.  ತಿರುಕ್ಕೋಷ್ಠಿಯೂರ್ ನಂಬಿ (ವೈಕಾಸಿ, ರೋಹಿಣಿ)

ಶ್ರೀವಲ್ಲಭ ಪದಾಂಭೋಜ ದೀಭಕ್ತ್ಯಾಮೃತ ಸಾಗರಂ
ಶ್ರೀಮದ್ಗೋಷ್ಠಿಪುರೀಪೂರ್ಣಮ್ ದೇಶೀಕೇಂದ್ರಂ ಭಜಾಮಹೇ

ಶ್ರೀಮಹಾಲಕ್ಷ್ಮಿಯ ವಲ್ಲಭನಾದ(ಪತಿ) ಶ್ರೀಮನ್ನಾರಯಣನ  ಕಮಲದ ಪಾದಗಳಲ್ಲಿ ಸದಾ ನೆಲಸಿರುವ, ಆಚಾರ್ಯರಲ್ಲಿ ಉತ್ತಮರಾದ,    ಜ್ಞಾನ ವೈರಾಗ್ಯಕ್ಕೆ ಮಕರಂದದ ಸಾಗರದಂತಿರುವ  ತಿರುಕ್ಕೋಷ್ಠಿಯೂರ್  ನಂಬಿಗಳ ಪಾದದಲ್ಲಿ ಅಡಿಯೇನ್ ಆಶ್ರಯ ಪಡೆಯುತ್ತೇನೆ.

3. ಪೆರಿಯ ತಿರುಮಲೈ ನಂಬಿ (ವೈಕಾಸಿ, ಸ್ವಾತೀ)

ಪಿತಾಮಹಸ್ಯಾಪಿ ಪಿತಾಮಹಾಯ ಪ್ರಾಚೇತಸಾದೇಶಫಲಪ್ರದಾಯ
ಶ್ರೀಭಾಷ್ಯಕಾರೋತ್ತಮ ದೇಶಿಕಾಯ ಶ್ರೀಶೈಲಪೂರ್ಣಾಯ ನಮೋ ನಮಃ ಸ್ತಾತ್

ಅಡಿಯೇನ್,  ಎಲ್ಲಾ  (ಜೀವಿಗಳಿಗು) ಸೃಷ್ಟಿಗು ಪಿತಾಮಹ (ತಾತ)ಯೆಂದೆನಿಸುವ ಬ್ರಹ್ಮರಿಗೇ ಪಿತಾಮಹರಾದಂತಹ ,(ಇದಕ್ಕೆ ಕಾರಣ ಬ್ರಹ್ಮರಿಗೇ ತಂದೆಯ ಸ್ಥಾನದಲ್ಲಿದ್ದ ತಿರುಮಲೈಯ ಶ್ರೀನಿವಾಸನೇ ಇವರನ್ನು ‘ತಾತ’ ಯೆಂದು ಕರೆದರು) ಶ್ರೀಭಾಷ್ಯಕಾರರಿಗೇ ಉತ್ತಮ ಆಚಾರ್ಯರಾಗಿ ವಾಲ್ಮೀಕೀ ರಾಮಾಯಣದ ಆಳವಾದ ಅರ್ಥವನ್ನು ಭೋದಿಸಿದ ಪೆರಿಯ ತಿರುಮಲೈ ನಂಬಿಗಳನ್ನು ಪುನಃಪುನಃ  ಪೂಜಿಸುತ್ತೇನೆ.

4. ತಿರುಮಲೈ ಆಂಡಾನ್ (ಮಾಸಿ,  ಮಖಂ )

ರಾಮಾನುಜ ಮುನೀಂದ್ರಾಯ ದ್ರಾಮಿಡೀ ಸಮ್ಹಿತಾರ್ತ್ತದಮ್
ಮಾಲಾಧಾರ ಗುರುಮ್ ವಂದೇ ವಾವಧೂಕಂ ವಿಪಶ್ಚಿತಂ

ದ್ರಾವಿಡವೇದವೆಂದು ಕರೆಯಲ್ಪಡುವ ತಿರು‌‍ವಾಯ್ಮೊೞಿಯನ್ನು ಬುದ್ಧಿವಂತರಾಗಿದ್ದ ಶ್ರೀ ರಾಮಾನುಜರಿಗೆ  ಭೋದಿಸಿದ  , ಆಚಾರ್ಯರಾದ ತಿರುಮಾಲೈ ಆಂಡಾನನ್ನು ಅಡಿಯೇನ್ ಪ್ರಾರ್ಥಿಸುತ್ತೇನೆ.

5. ತಿರುಕ್ಕಚ್ಚಿ ನಂಬಿ (ಮಾಸಿ, ಮೃಗಶೀರ್ಷಮ್)

ದೇವರಾಜ ದಯಾಪಾತ್ರಂ ಶ್ರೀ ಕಾಂಚೀ ಪೂರ್ಣಮ್ ಉತ್ತಮಮ್
ರಾಮಾನುಜ ಮುನೇರ್ ಮಾನ್ಯಮ್ ವಂದೇಹಂ ಸಜ್ಜನಾಶ್ರಯಂ .

ಅನೇಕ ಶ್ರೀವೈಷ್ಣವರಿಂದ ಆರ್ಥಿಸಲ್ಪಟ್ಟಂತಹ ; ಶ್ರೀ ರಾಮಾನುಜ ಮುನಿಗಳಿಂದ ಅತ್ಯಂತ ಗೌರವಿಸಲ್ಪಟ್ಟಂತಹ ವೈಷ್ಣವರಲ್ಲಿ ಉತ್ತಮರಾದ  ಹಾಗು ಶ್ರೀ ವರದರಾಜರ ಕರುಣೆಗೆ ಪಾತ್ರರಾಗಿದ್ದಂತಹ  ತಿರುಕ್ಕಚ್ಚಿ ನಂಬಿಗಳನ್ನು ಅಡಿಯೇನ್ ಪೂಜಿಸುತ್ತೇನೆ.

6. ಮಾರನೇರಿ ನಂಬಿ (ಆನಿ, ಆಯಿಲ್ಯಂ )

ದೇವರಾಜ ದಯಾಪಾತ್ರಂ ಶ್ರೀ ಕಾಂಚೀ ಪೂರ್ಣಮ್ ಉತ್ತಮಮ್
ರಾಮಾನುಜ ಮುನೇರ್ ಮಾನ್ಯಮ್ ವಂದೇಹಂ ಸಜ್ಜನಾಶ್ರಯಂ .

ಶ್ರೀರಂಗದಲ್ಲಿ(ಪೆರಿಯ ಕೋಯಿಲ್) ವಾಸಿಸುವ, ಜ್ಞಾನ ಭಕ್ತಿಯ ಸಾಗರವಾಗಿರುವ ಹಾಗು ಯಾಮುನಾಚಾರ್ಯರ ಪ್ರಿಯ ಶಿಷ್ಯರಾದಂತಹ ಮಾರನೇರಿ ನಂಬಿಗಳಿಗೆ ಅಡಿಯೇನ್ ಉಪಾಸನೆ ಮಾಡುತ್ತೇನೆ.

7. ಕೂರತ್ತಾೞ್ವಾನ್ (ತೈ – ಹಸ್ತಮ್)

ಶ್ರೀವತ್ಸ ಚಿನ್ಹ ಮಿಶ್ರೇಭ್ಯೋ ನಮ ಉಕ್ತಿಮ ದೀಮಹೇಃ
ಯದುಕ್ತಯಸ್ ತ್ರಯಿ ಗಂಟೇ ಯಾಂತಿ ಮಂಗಳ ಸೂತ್ರತಾಮ

ಯಾರ ದಿವ್ಯ ಸ್ತೋತ್ರಗಳು ವೇದಗಳಿಗೆ ಮಂಗಳ ಸೂತ್ರದಂತೆ ಇದೆಯೋ (ಶ್ರೀಮನ್ನಾರಾಯಣನೇ ಪರದೇವತೆಯೆಂದು ಸ್ಪಷ್ಟವಾಗಿತೋರುತ್ತವೆ) ಅಂತಹ ಶ್ರೀವತ್ಸಾಂಕ ಮಿಶ್ರರಿಗೆ  ಅಡಿಯೇನ್ ನಮಸ್ಕರಿಸುತ್ತೇನೆ.

8. ಮುದಲಿಯಾಂಡಾನ್ (ಚಿತ್ರೈ – ಪುನರ್ಪೂಸಮ್)

ಪಾದುಕೇ ಯತಿರಾಜಸ್ಯ ಕಥಯಂತಿ ಯಧಖ್ಯಯ
ತಸ್ಯ ದಾಶರಥೇಃ ಪಾದೌ ಶಿರಸಾ ಧಾರಯಾಮ್ಯಹಮ್

ಯಾರ ಹೆಸರಿನಿಂದ ಶ್ರೀ ರಾಮಾನುಜರ ಪಾದುಕೆಗಳು ಅರಿಯಲ್ಪಡುತ್ತವೆಯೋ ಅಂತಃ ದಾಶರಥಿಯಾದ ಮುದಲಿಯಾಂಡಾನಿನ ಪಾದ ಕಮಲಗಳಿಂದ , ಅಡಿಯೇನಿನ ಶಿರಸ್ಸನ್ನು ಅಲಂಕರಿಸುತ್ತೇನೆ.

9.  ಅರುಳಾಳ  ಪೆರುಮಾಳ್ ಎಂಪೆರುಮಾನಾರ್ (ಕಾರ್ತಿಗೈ – ಭರಣಿ)

ರಾಮಾನುಜಾರ್ಯ ಸಚ್ಚಿಶ್ಯಮ್ ವೇದಶಾಸ್ತ್ರಾರ್ಥ ಸಂಪಾದಂ
ಚತುರ್ಥಾಶ್ರಮ ಸಂಪನ್ನಂ ದೇವರಾಜ ಮುನಿಂ ಭಜೇ

ಅಡಿಯೇನ್,ಸನ್ಯಾಸಾಶ್ರಮವನ್ನು ಸ್ವೀಕರಿಸಿರುವ, ವೇದದ ಆಳವಾದ ಅರ್ಥವನ್ನು  ಅರಿತಿರುವ, ಸಂಪತ್ತನ್ನು ಹೊಂದಿರುವ, ಶ್ರೀ ರಾಮಾನುಜರ ಪ್ರಿಯ ಶಿಷ್ಯರಾದ ದೇವರಾಜ ಮುನಿಗಳ ಪಾದಗಳಲ್ಲಿ (ಅರುಳಾಳ ಪೆರುಮಾಳ್ ಎಂಪೆರುಮಾನಾರಿಗೆ )  ಆಶ್ರಯಿಸುತ್ತೇನೆ.

10. ಕೋಯಿಲ್ ಕೊಮಾಂಡೂರ್ ಇಳಯವಿಲ್ಲಿ ಆಚ್ಚಾನ್ (ಚಿತ್ರೈ – ಆಯಿಲ್ಯಮ್)

ಶ್ರೀ ಕೌಶಿಕಾನ್ವಯ ಮಹಾಂಭುತಿ ಪೂರ್ಣಚಂದ್ರಂ
ಶ್ರೀ ಭಾಷ್ಯಕಾರ ಜನನೀ ಸಹಜಾ ತನುಜಂ
ಶ್ರೀಶೈಲಪೂರ್ಣ ಪದ ಪಂಕಜ ಸಕ್ತ ಚಿತ್ತಂ
ಶ್ರೀಬಾಲಧನ್ವೀ ಗುರುವರ್ಯಮ್ ಅಹಂ ಭಜಾಮಿ

ಅಡಿಯೇನ್, ಶ್ರೀ ಭಾಷ್ಯಕಾರರ ತಾಯಿಯ ಸಹೋದರಿಯ ಪುತ್ರರಾದ   ,ಚಂದ್ರನಂತೆ ಕೌಶಿಕಕುಲ ಸಾಗರದ ಮೇಲೆ ಪ್ರಕಾಶಿಸುವ, ಶ್ರೀಶೈಲ ಪೂರ್ಣರ ಪದ ಪಂಕಜಗಳನ್ನೇ ಮನಸಿನಲ್ಲಿ ಧ್ಯಾನಿಸುತ್ತಿದ್ದ ಶ್ರೀ ಬಾಲಧನ್ವೀ  ಗುರುಗಳ ನ್ನು ನಮಸ್ಕರಿಸುತ್ತೇನೆ

11. ಕಿಡಾಂಬಿ ಆಚ್ಚಾನ್ (ಚಿತ್ರಿರೈ – ಹಸ್ತಮ್)

ರಾಮಾನುಜ ಪದಾಂಭೋಜಯುಗಳೀ ಯಸ್ಯ ದೀಮತಃ.
ಪ್ರಾಪ್ಯಮ್ ಚ ಪ್ರಾಪಕಮ್ ವಂದೇ ಪ್ರಣತಾರ್ಥಿ ಹರಂ ಗುರುಮ್

ಅಡಿಯೇನ್, ಶ್ರೀ ರಾಮಾನುಜರ ಪಾದಪಂಕಜಗಳನ್ನೇ ತಮ್ಮ ಉಪಾಯವಾಗಿ  ಹಾಗು ಅವುಗಳನ್ನೇ  ತಮ್ಮ ಉಪೇಯವಾಗಿಯು ಕಂಡ ವಿವೇಕಿಯರಾಗಿದ್ದ  ಪ್ರಣತಾರ್ಥಿಹರ ಗುರುಗಳಿಗೆ ನನ್ನ ವಂದನೆಗಳು.

12. ವಡುಗ ನಂಬಿ (ಚಿತ್ತಿರೈ – ಅಶ್ವಿನಿ)

ರಾಮಾನುಜಾರ್ಯ ಸಚ್ಚಿಶ್ಯಮ್ ಸಾಳಗ್ರಾಮ ನಿವಾಸಿನಮ್
ಪಂಚಮೋಪಾಯ ಸಂಪನ್ನಮ್ ಸಾಳಗ್ರಾಮಾರ್ಯಮ್ ಆಶ್ರಯೇ

ರಾಮಾನುಜರ ಪ್ರಿಯ ಶಿಷ್ಯರಾದ, ಸಾಳಗ್ರಾಮದಲ್ಲಿ ನೆಲೆಸಿದ್ದ , ಪಂಚಮೋಪಾಯದಲ್ಲಿ (ಆಚಾರ್ಯ ನಿಷ್ಟೈ) ಪ್ರವೀಣರಾಗಿದ್ದಂತಹ ವಡುಗ ನಂಬಿಗಳ ಪಾದಗಳಿಗೆ ಅಡಿಯೇನ್ ನಮಸ್ಕರಿಸುತ್ತೇನೆ.

13. ವಂಗಿ ಪುರತು ನಂಬಿ

ಭಾರದ್ವಾಜ ಕುಲೋದ್ಭೂತಂ ಲಕ್ಷ್ಮಣಾರ್ಯ ಪಧಾಶ್ರೀತಂ
ವಂದೇ ವಂಗಿಪುರಾಧೀಶಮ್ ಸಂಪೂರ್ಣಾಯಮ್ ಕೃಪಾನಿಧಿಮ್

ಕೃಪೆಯಿಂದ ತುಂಬಿರುವ ಶ್ರೀ ರಾಮಾನುಜರನ್ನು ಆಶ್ರಯಿಸಿದ, ಭಾರದ್ವಾಜ ಕುಲದಲ್ಲಿ ಅವತರಿಸಿದ ಹಾಗು ,ವಂಗಿ ಪುರದ ನಾಯಕರಾಗಿದ್ದ, ವಂಗಿಪುರತ್ತು ನಂಬಿಗಳಿಗೆ ಅಡಿಯೇನ್ ನಮಸ್ಕರಿಸುತ್ತೇನೆ.

14. ಸೋಮಾಸಿ ಆಂಡಾನ್ (ಚಿತ್ತಿರೈ , ತಿರುವಾದಿರೈ)

ನೌಮಿ ಲಕ್ಷ್ಮಣ ಯೋಗೀಂದ್ರ ಪಾದಸೇವೈಕ ದಾರಕಂ
ಶ್ರೀ ರಾಮಕ್ರತುನಾಥಾರ್ಯಮ್ ಶ್ರೀಭಾಷ್ಯಾಮೃತ ಸಾಗರಂ

ಅಡಿಯೇನ್, ಶ್ರೀರಾಮ ಎಂಬ ಹೆಸರುಳ್ಳ , ವಿನಮ್ರತೆಯಿಂದ ಶ್ರೀ ರಾಮಾನುಜರಿಗೆ ಸಂತೋಷದಿಂದ ಸೇವೆ ಮಾಡಿ ಹಾಗು , ಶ್ರೀಭಾಷ್ಯದ ಜ್ಞಾನ ಸಾಗರವಾಗಿದ್ದ ಸೊಮಾಸಿ ಆಂಡಾನವರ ದೈವಿಕ ಪಾದಗಳಿಗೆ ನನ್ನ ವಂದನೆಗಳು.

15. ಪಿಳ್ಳೈ ಉರಂಗಾವಿಲ್ಲಿ ದಾಸರ್ (ಮಾಸಿ – ಆಯಿಲ್ಯಮ್)

ಜಾಗರೂಗ ಧನುಶ್ಪಾಣಿಮ್ ಪಾಣೌ ಕಡ್ಗಸಮನ್ವಿದಮ್
ರಾಮಾನುಜಸ್ಪರ್ಶವೇದಿಮ್ ರಾಧ್ದಾಂತಾರ್ಥ ಪ್ರಕಾಶಕಮ್
ಭಾಗಿನೇಯದ್ವಯಯುತಮ್ ಭಾಷ್ಯಕಾರ ಭರಮ್ವಹಮ್
ರಂಗೇಶಮಂಗಳಕರಮ್ ಧನುರ್ದಾಸಮ್ ಅಹಂ ಭಜೇ

ಶಯನಿಸದೆ, ಒಂದು ಕೈಯಲ್ಲಿ ಧನುಶನ್ನು ,ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದು  ,  ಒಂದು ಮಂತ್ರ ಮಾತ್ರೆಯಂತೆ (ಕಬ್ಬಿಣವನ್ನು ಒಂದು ಸ್ವರ್ಶದಲ್ಲು ಚಿನ್ನವಾಗಿ ಬದಲಾಯಿಸುವ ) ಹಲವಾರು ಮುಖ್ಯ ಪ್ರಮುಖವಾದ  ಸಿದ್ಧಾಂತಗಳನ್ನು  ತಿಳಿಯ ಪಡಿಸದವರ, ಪರಮಭಕ್ತರಾದ ಇಬ್ಬರು ಸೋದರ ಅಳಿಯಂದಿರಿರುವ , ಭಕ್ತರಾದ ಶ್ರೀ ರಾಮಾನುಜರ ಮಠವನ್ನು ನಿರ್ವಹಿಸುತ್ತಿದ ಹಾಗು ಶ್ರೀ ರಂಗನಾಥನಿಗೆ ಮಂಗಳಾಶಾಸನವನ್ನು ಮಾಡುತ್ತಿದ ಶ್ರೀ ಪಿಳ್ಳೈ ಉರಂಗಾವಿಲ್ಲಿ ದಾಸರಲ್ಲಿ   ಅಡಿಯೇನ್  ಆಶ್ರಯ ಪಡೆಯುತ್ತೇನೆ.

16. ತಿರುಕ್ಕುರುಕೈಪ್ಪಿರಾನ್ ಪಿಳ್ಳಾನ್ (ಐಪ್ಪಸಿ – ಪೂರಾಡಂ)

ದ್ರಾವಿಡಾಗಮ ಸಾರಗ್ಯಮ್ ರಾಮಾನುಜ ಪದಾಶ್ರಯಮ್
ಸುಧೀಯಂ ಕುರುಕೇಶಾರ್ಯಮ್ ನಮಾಮಿ ಶಿರಸಾನ್ಹವಂ .

ಅಡಿಯೇನ್  , ಪ್ರತಿ ದಿನ, ಶ್ರೀ ರಾಮಾನುಜರ ಪಾದಗಳನ್ನು ಆಶ್ರಯಿಸಿದ, ದ್ರಾವಿಡ ವೇದಾರ್ಥದಲ್ಲಿ ಪಾರಂಗತರಾದ, ಹಾಗು ಜ್ಞಾನಿಯಾದ ಕುರುಗೇಶಾಚಾರ್ಯರಿಗೆ ಪ್ರಾರ್ಥಿಸುತ್ತೇನೆ.

17. ಎಂಗಳಾೞ್ವಾನ್ (ಚಿತ್ರಿರೈ – ರೋಹಿಣಿ)

ಶ್ರೀವಿಷ್ಣುಚಿತ್ತ ಪದ ಪಂಕಜ ಸಮ್ಶ್ರಯಾಯ
ಚೇತೋ ಮಮ ಸ್ಪ್ರುಹಯತೇ ಕಿಮತಃ ಪರೇಣ
ನೋಚೇನ್ ಮಮಾಪಿ ಯತಿಶೇಖರಭಾರತೀನಾಮ್
ಭಾವಃ ಕಥಮ್ ಭವಿತುಮರ್ಹತಿ ವಾಗ್ವಿದೇಯಃ

ಅಡಿಯೇನಿನ ಹೃದಯ ಶ್ರೀ ವಿಷ್ಣುಚಿತ್ತರಿಗೆ ಪ್ರೇಮದಿಂದ ಭಕ್ತಿ ಸಲ್ಲಿಸಲು ಆಶಿಸುತ್ತಿದೆ, ಆ ಪಾದ-ಕಮಲಗಳನ್ನು ಬಿಟ್ಟು ಇನ್ನೋಂದು ವಸ್ತುವಿನ ಉಪಯೋಗವೇನು?! ಅವರ ಪಾದಪಂಕಜಗಳಲ್ಲಿ ಅಶ್ರಯಿಸದಿಲ್ಲದಿದ್ದರೆ, ಅಡಿಯೇನ್ ಯತಿರಾಜರ ದಿವ್ಯ ವಚನಗಳಲ್ಲಿ ಹೇಗೆ ಪ್ರವೀಣನಾಗುತ್ತಿದ್ದೆ?

18. ಅನಂತಾೞ್ವಾನ್ (ಚಿತ್ರಿರೈ – ಚಿತ್ರಿರೈ)

ಅಖಿಲಾತ್ಮ ಗುಣಾವಾಸಮ್ ಅಜ್ಞಾನ ತಿಮಿರಾಪಹಮ್
ಆಶ್ರಿತಾನಾಮ್ ಸುಶರಣಮ್ ವಂದೇ ಅನಂತಾರ್ಯ ದೇಶಿಕಮ್

ಅಡಿಯೇನ್, ಎಲ್ಲಾ ಸದ್ಗುಣಗಳ ಆಶ್ರಯವಾದ, ಅಜ್ಞಾನದ ಅಂದಕಾರವನ್ನು ದೂರಮಾಡುವ, ತಮ್ಮಲ್ಲಿ ಆಶ್ರಯಗೊಂಡವರಿಗೆ ಉಪಾಯವಾದ ಅನಂೞ್ವಾನಿಗೆ ನಮಸ್ಕರಿಸುತ್ತೇನೆ.

19. ತಿರುವರಂಗತ್ತು ಅಮುದನಾರ್ (ಪಂಗುನಿ – ಹಸ್ತಮ್)

ಶ್ರೀರಂಗೇ ಮೀನಹಸ್ತೇ ಚ ಜಾತಮ್ ರಂಗಾರ್ಯನಂದನಮ್
ರಾಮಾನುಜಪದಾಸ್ಕಂದಮ್ ರಂಗನಾಥಗುರುಮ್ ಭಜೇ

ಅಡಿಯೇನ್, ಪಂಗುನಿ ಹಸ್ತಾ ನಕ್ಷತ್ರದಲ್ಲಿ ರಂಗಾರ್ಯರ(ಅಣಿ ಅರಂಗತ್ತುಮುದನಾರಿನ) ಸುಪುತ್ರರಾಗಿ ಅವತರಿಸಿ ಶ್ರೀ ರಾಮಾನುಜರ ಪಾದ ಕಮಲಗಳಲ್ಲಿ ಆಶ್ರಯಿಸಿದ ಶ್ರೀರಂಗನಥ ಗುರುಗಳನ್ನು (ಅಮುದನಾರನ್ನು)ನಮಸ್ಕರಿಸುತ್ತೇನೆ .

20. ನಡಾತುರ್ ಅಮ್ಮಳ್ (ಚಿತ್ತಿರೈ – ಚಿತ್ರಿರೈ)

ವಂದೇಹಮ್ ವರದಾರ್ಯಮ್ ತಮ್ ವತ್ಸಾಬಿ ಜನಭೂಷಣಮ್
ಭಾಷ್ಯಾಮೃತ ಪ್ರದಾನಾದ್ಯ ಸಂಜೀವಯತಿ ಮಾಮಪಿ

ಅಡಿಯೇನಿನ ನಿಜ ಸ್ವರೂಪವನ್ನು ಅಡಿಯೇನಲ್ಲಿ ಅರಿವುಮಾಡಿದ, ಶ್ರೀವತ್ಸ ಕುಲದ, ರತ್ನದಂತೆ ಪ್ರಕಾಶಿಸುವ ವರದಾಚಾರ್ಯರಿಗೆ ಅಡಿಯೇನಿನ ವಂದನೆಗಳು.

21. ವೇದ ವ್ಯಾಸ ಭಟ್ಟರ್ (ವೈಕಾಸಿ – ಅನುಷಮ್)

ಪೌತ್ರಮ್ ಶ್ರೀರಾಮಮಿಶ್ರಸ್ಯ ಶ್ರೀವತ್ಸಾಂಕಸ್ಯ ನಂದನಮ್
ರಾಮಸೂರಿಮ್ ಭಜೇ ಭಟ್ಟಪರಾಶರವರಾನುಜಮ್

ಅಡಿಯೇನ್ ಶ್ರೀರಾಮಮಿಶ್ರರ(ಕೂರತಾೞಿವಾರ್-ಕೂರತ್ತಾೞ್ವಾನಿನವರ ತಂದೆಯವರು) ಮೊಮ್ಮಗರಾದ, ಶ್ರೀವತ್ಸಾಂಕರ ಪುತ್ರರಾದ, ಶ್ರೀ ಪರಾಶರ ಭಟ್ಟರ ತಮ್ಮರಾಗಿದ್ದ ಶ್ರೀ ರಾಮ ಪಿಳ್ಳೈ (ವೇದ ವ್ಯಾಸ ಭಟ್ಟರನ್ನು) ನಮಸ್ಕರಿಸುತ್ತೇನೆ

22. ಕೂರ ನಾರಾಯಣ ಜೀಯರ್ (ಮಾರ್ಗೞಿ – ಕೇಟ್ಟೈ)

ಶ್ರೀಪರಾಶರಭಟ್ಟಾರ್ಯ ಶಿಷ್ಯಮ್ ಶ್ರೀರಂಗಪಾಲಕಮ್
ನಾರಾಯಣಮುನಿಮ್ ವಂದೇ ಜ್ಞಾನಾದಿಗುಣಸಾಗರಮ್

ಶ್ರೀ ಪರಾಶರ ಭಟ್ಟರ ಶಿಷ್ಯರಾದ, ಜ್ಞಾನ ಭಕ್ತಿ ವೈರಾಗ್ಯದ ಸಾಗರವಾದ ಹಾಗು, ಶ್ರೀರಂಗಮ್ ನಗರವನ್ನು ರಕ್ಷಿಸುವವರಾದ ಶ್ರೀ ನಾರಾಯಣ ಮುನಿಗಳಿಗೆ ಅಡಿಯೇನಿನ ವಂದನೆಗಳು.

23. ಶ್ರುತ ಪ್ರಕಾಶಿಕಾ ಭಟ್ಟರ್ (ಸುದರ್ಶನ ಸೂರಿ)

ಯತೀಂದ್ರ ಕೃತ ಭಾಷ್ಯಾರ್ಥಾ ಯದ್ ವ್ಯಾಖ್ಯಾನೇನ ದರ್ಶಿತಾಃ
ವರಮ್ ಸುದರ್ಶನಾರ್ಯಮ್ ತಮ್ ವಂದೇ ಕೂರ ಕುಲಾದಿಪಮ್

ಅಡಿಯೇನ್, ಕೂರತ್ತಾೞ್ವಾನವರ ಕುಲದವರಲ್ಲಿ ನಾಯಕರೆಂದೇ ಪ್ರಸಿದ್ಧರಾಗಿದ್ದು ಹಾಗು, ಯತಿರಾಜರು ಬರೆದ ಶ್ರೀ ಭಾಷ್ಯದ ಪೂರ್ಣ ಅರ್ಥಗಳನ್ನು ತಿಳಿಸುವ ವ್ಯಾಖ್ಯಾನವನ್ನು ರಚಿಸಿದ ಕೀರ್ತಿಯನ್ನು ಹೊಂದಿದ್ದ ಸುದರ್ಶನ ಭಟ್ಟರನ್ನು ಪ್ರಾರ್ಥಿಸುತ್ತೇನೆ.

24. ಪೆರಿಯವಾಚ್ಚಾನ್ ಪಿಳ್ಳೈ (ಆವಣಿ – ರೋಹಿಣಿ)

ಶ್ರೀಮತ್ ಕೃಷ್ಣ ಸಮಾಹ್ವಾಯ ನಮೋ ಯಾಮುನ ಶೂನವೇ
ಯತ್ ಕಟಾಕ್ಷೈಕ ಲಕ್ಶ್ಯಾಣಮ್ ಸುಲಭಃ ಶ್ರೀಧರಸ್ಸದಾ

ಅಡಿಯೇನ್, ಯಾಮುನಾಚಾರ್ಯರ ಪುತ್ರರಾದ ,ಯಾರ ಕೃಪೆಯಿಂದ ಶ್ರೀಮನ್ನಾರಾಯಣನನ್ನು ಸುಲಭವಾಗಿ ಪಡೆಯಬಹುದೋ, ಅಂತಹ ಶ್ರೀ ಕೃಷ್ಣರಿಗೆ(ಪೆರಿಯಾವಾಚ್ಚಾನ್ ಪಿಳ್ಳೈಯವರಿಗೆ) ವಂದನೆಗಳು.

25. ಈಯುಣ್ಣಿ ಮಾಧವ ಪೆರುಮಾಳ್ (ಕಾರ್ತಿಗೈ – ಭರಣಿ)

ಲೋಕಾಚಾರ್ಯ ಪದಾಂಭೋಜ ಸಮ್ಶ್ರಯಮ್ ಕರುಣಾಂಭುದಿಮ್
ವೇದಾಂತ ದ್ವಯ ಸಂಪನ್ನಮ್ ಮಾಧವಾರ್ಯಮ್ ಅಹಮ್ ಭಜೇ

ಅಡಿಯೇನ್ ಕರುಣೆಯ ಸಾಗರ ಮತ್ತು ಸಂಸ್ಕೃತ ಹಾಗು ದ್ರಾವಿಡ ವೇದಗಳ ಸಿರಿಯನ್ನು ಹೊಂದಿರುವ ನಂಪಿಳ್ಳೈಯವರ ಪಾದಗಳಲ್ಲೇ ಆಶ್ರಯಿಸಿದ ಈಯುಣ್ಣಿ ಮಾಧವ ಪೆರುಮಾಳನ್ನು ಪ್ರಾರ್ಥಿಸುತ್ತೆನೆ.

26. ಈಯುಣ್ಣಿ ಪದ್ಮನಾಭ ಪೆರುಮಾಳ್ (ಸ್ವಾತಿ)

ಮಾಧವಾಚಾರ್ಯ ಸತ್ಪುತ್ರಮ್ ತತ್ಪಾದಕಮಲಾಶ್ರಿತಮ್
ವಾತ್ಸಲ್ಯಾಧಿ ಗುಣೈರ್ ಯುಕ್ತಮ್ ಪದ್ಮನಾಭ ಗುರುಮ್ ಭಜೇ

ಅಡಿಯೇನ್ ಮಾಧವಾಚರ್ಯ ಪದಗಳ್ಳನ್ನೇ ಆಶ್ರಯವಾಗಿ ಕಂಡ ಅವರ ಸತ್ಪುತ್ರರಾದ ಹಾಗು ವಾತ್ಸಲ್ಯಾಧಿ ಗುಣಗಳಲ್ಲಿ ಪೂರ್ಣರಾಗಿರುವ (ಈಯುಣ್ಣಿ) ಪದ್ಮನಾಭಾಚಾರ್ಯರನ್ನು ಪ್ರಾರ್ಥಿಸುತ್ತೆನೆ.

27. ನಾಲೂರ್ ಪಿಳ್ಳೈ (ಪೂಸಮ್)

ಚತುರ್ಗ್ರಾಮ ಕುಲೋದ್ಭೂತಮ್ ದ್ರಾವಿಡ ಬ್ರಹ್ಮ ವೇದಿನಮ್
ಯಗ್ಯಾರ್ಯ ವಮ್ಶತಿಲಕಮ್ ಶ್ರೀವರಾಹಮಹಮ್ ಭಜೇ

ಅಡಿಯೇನ್, ನಾಲೂರಾನಿನ ವಮ್ಶಸ್ಥರಾದ ,ಎಚ್ಚಾನ್( ಶ್ರೀ ರಾಮಾನುಜರ ಶಿಶ್ಯರು)ಅವರ ಕುಲದಲ್ಲಿ ಆಭಾರಣದಂತೇ ಇರುವ, ದ್ರಾವಿಡ ವೇದದ ಸಾರವನ್ನು ಅರಿತ ನಾಲೂರ್ ಪಿಳ್ಳೈಯವರನ್ನು ಪ್ರಾರ್ಥಿಸುತ್ತೆನೆ.

28. ನಾಲೂರಾಚಾನ್ ಪಿಳ್ಳೈ (ಮಾರ್ಗೞಿ – ಭರಣಿ)

ನಮೋಸ್ತು ದೇವರಾಜಾಯ ಚತುರ್ಗ್ರಾಮ ನಿವಾಸಿನೇ
ರಾಮಾನುಜಾರ್ಯ ದಾಸಸ್ಯ ಸುತಾಯ ಗುಣಶಾಲಿನೇ

ಅಡಿಯೇನ್, ಚತುರ್ಗ್ರಾಮದಲ್ಲಿ (ನಾಲೂರ್) ನೆಲಿಸಿರುವ, ರಾಮಾನುಜಾರ್ಯರ (ನಾಲೂರ್ ಪಿಳ್ಳೈಯವರ ಇನ್ನೊಂದು ಹೆಸರು) ಪುತ್ರರಾದ, ಸದ್ಗುಣಗಳ ಆಶ್ರಯವಾದ ದೇವರಾಜರನ್ನು (ನಾಲೂರಾಚ್ಚಾನ್ ಪಿಳ್ಳೈಯವರನ್ನು) ಪ್ರಾರ್ಥಿಸುತ್ತೆನೆ.

29. ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್ (ಐಪ್ಪಸಿ – ಅವಿಟ್ಟಮ್)

ಲೋಕಾಚಾರ್ಯ ಪದಾಸಕ್ತಮ್ ಮದ್ಯವೀದಿ ನಿವಾಸಿನಮ್
ಶ್ರೀವತ್ಸಚಿಹ್ನವಮ್ಶಾಬ್ದಿಸೋಮಮ್ ಭಟ್ಟಾರ್ಯಮಾಶ್ರಯೇ

ಅಡಿಯೇನ್ ಕೂರತ್ತಾೞ್ವಾನವರ ಕುಲದ ಸಾಗರದ ಮೇಲೆ ಚಂದ್ರದಂತೆ ಪ್ರಕಾಶಿಸುವ, ನಡುವಿಲ್ ತಿರುವೀದಿಯಲ್ಲಿರುವ (ಶ್ರೀರಂಗದಲ್ಲಿ ಒಂದು ಬೀದಿಯ ಹೆಸರು), ಶ್ರೀ ನಂಪಿಳ್ಳೈಯವರ ಪಾದಪಂಕಜಗಳ ಬಳಿ ಅತ್ಯಂತ ಪ್ರೀತಿ ಹೊಂದಿರುವ ವಿಲ್ ತಿರುವೀದಿ ಪಿಳ್ಳೈ ಭಟ್ಟರನ್ನು ಪ್ರಾರ್ಥಿಸುತ್ತೆನೆ.

30. ಪಿನ್ಭಳಗಿಯ ಪೆರುಮಾಳ್ ಜೀಯರ್ (ಐಪ್ಪಸಿ – ಸತಯಮ್)

ಜ್ಞಾನ ವೈರಾಗ್ಯ ಸಂಪೂರ್ಣಮ್ ಪಸ್ಚಾತ್ ಸುಂದರ ದೇಶಿಕಮ್
ದ್ರವಿಡೋಪನಿಶದ್ ಭಾಷ್ಯತಾಯಿನಮ್ ಮದ್ ಗುರುಮ್ ಭಜೇ

ಅಡಿಯೇನಿನ ಆಚಾರ್ಯರಾದ,ಜ್ಞಾನ ಹಾಗು ಸಾಂಸಾರಿಕ ವಿಶಯಗಳಲ್ಲಿ ವೈರಾಗ್ಯದಿಂದ ತುಂಬಿರುವ, ದ್ರಾವಿಡ ವೇದವೆಂದೇ ಕರಯಲ್ಪಡುವ ತಿರುವಾಯ್ಮೊೞಿಯನ್ನು ಭೋದಿಸಿದ ಪಶ್ಚಾತ್ ಸುಂದರ ದೇಶಿಕರಿಗೆ ವಂದನೆಗಳು.

31. ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ (ಮಾರ್ಗೞಿ ಅವಿಟ್ಟಮ್)

ದ್ರಾವಿಡಾಮ್ನಾಯ ಹೃದಯಮ್ ಗುರುಪರ್ವಕ್ರಮಾಗತಮ್
ರಮ್ಯಜಾಮಾತ್ರುದೇವೇನ ದರ್ಶಿತಮ್ ಕೃಷ್ಣಸೂನುನಾ

ಅಡಿಯೇನ್,ಶ್ರೀ ಕೃಷ್ಣರ (ವಡಕ್ಕು ತಿರುವೀದಿ ಪಿಳ್ಳೈ ಯವರ) ಪುತ್ರರಾದ,ಆಚಾರ್ಯ ಪರಂಪರೈಯಿಂದ ಲಭಿಸಿದ ತಿರುವಾಯ್ಮೊೞಿಯ ದಿವ್ಯಾರ್ಥಗಳನ್ನು( ಶ್ರೀ ನಮ್ಮಾೞ್ವಾರಿನ ಹೃದಯ) ಭೋದಿಸಿದ ಅೞಗಿಯ ಮಣವಾಳ ಪೆರುಮಾಳ್ ನಾಯಾನಾರನ್ನು ಪ್ರಾರ್ಥಿಸುತ್ತೆನೆ.

32. ನಾಯನಾರಾಚ್ಚಾನ್ ಪಿಳ್ಳೈ (ಆವಣಿ – ರೋಹಿಣಿ)

ಶ್ರುತ್ಯರ್ಥಸಾರಜನಕಮ್ ಸ್ಮೃತಿಬಾಲಮಿತ್ರಮ್
ಪದ್ಮೋಲ್ಲಸದ್ ಭಗವದಂಘ್ರಿ ಪುರಾಣಬಂಧುಮ್
ಜ್ಞಾನಾದಿರಾಜಮ್ ಅಭಯಪ್ರದರಾಜ ಸೂನುಮ್
ಅಸ್ಮತ್ ಗುರುಮ್ ಪರಮಕಾರುಣಿಕಮ್ ನಮಾಮಿ

ಅಡಿಯೇನ್ ಅಭಯಪ್ರದ ರಾಜರ್ (ಪೆರಿಯವಾಚ್ಚಾನ್ ಪಿಳ್ಳೈ ),ಅವರ ಪುತ್ರರಾದ, ತಾವರೆಯಂತೆ ಇರುವ, ಸ್ಮೃತಿಗೆ ಸೂರ್ಯನಂತಿರುವ, ವೇದದ ಸಾರವನ್ನು ಹೋರೆತಗೆಯುವ, ಜ್ಞಾನದ ರಾಜನಂತಿರುವ, ಅತ್ಯಂತ ಕರುಣೆಯಿರುವ ಶ್ರೀ ನಾಯಾನಾರಾಚಾನ್ ಪಿಳ್ಳಯವರನ್ನು ಪ್ರಾರ್ಥಿಸುತ್ತೆನೆ.

33. ವಾದಿ ಕೇಸರಿ ಅೞಗಿಯ ಮಣವಾಳ ಜೀಯರ್ (ಆನಿ – ಸ್ವಾತಿ)

ಸುಂದರಜಾಮಾತೃಮುನೇಃ ಪ್ರಪದ್ಯೇ ಚರಣಾಮಂಬುಜಮ್
ಸಮ್ಸಾರಾರ್ಣವ ಸಮ್ಮಗ್ನ ಜಂತು ಸಂತಾರಪೋತಕಮ್

ಅಡಿಯೇನ್, ಯಾರ ಪಾದಪದ್ಮಗಳು ಸಂಸಾರ ಸಾಗರದಲ್ಲಿ ಮುಳುಗುತ್ತಿರುವ ಜೀವಾತ್ಮರಿಗೆ ದೋಣಿಯಂತೆ ಇರುವ ವಾದಿ ಕೇಸರಿ ಅೞಗಿಯ ಮಣವಾಳ ಜೀಯರನ್ನು ಪ್ರಾರ್ಥಿಸುತ್ತೇನೆ

34. ಕೂರ ಕುಲೋತ್ತಮ ದಾಸರ್ (ಐಪ್ಪಸಿ – ತಿರುವಾದಿರೈ)

ಲೋಕಾಚಾರ್ಯ ಕೃಪಾಪಾತ್ರಮ್ ಕೌಂಡಿನ್ಯ ಕುಲ ಭೂಶಣಮ್
ಸಮಸ್ತಾತ್ಮ ಗುಣಾವಾಸಮ್ ವಂದೇ ಕೂರ ಕುಲೋತಮಮ್

ಅಡಿಯೇನ್, ಪಿಳ್ಳೈ ಲೋಕಾಚಾರ್ಯರ ಕೃಪೆಗೆ ಪಾತ್ರರಾಗಿರುವ, ಕೌಂಡಿನ್ಯ ಕುಲವನ್ನು ಅಲಂಕರಿಸುವ ರತ್ನದಂತೆ, ಸದ್ಗುಣಗಳ ಆಶ್ರಯವಾಗಿರುವ ಕೂರ ಕುಲೋತ್ತಮ ದಾಸರಗನ್ನು ಪ್ರಾರ್ಥಿಸುತ್ತೆನೆ.

35. ವಿಳಾನ್ ಚೋಲೈ ಪಿಲ್ಲೈ (ಐಪ್ಪಸಿ – ಉತ್ರಟ್ಟಾದಿ)

ತುಲಾಹಿರ್ಬುಧ್ನ್ಯ ಸಮ್ಭೂತಮ್ ಶ್ರೀಲೋಕಾರ್ಯ ಪದಾಶ್ರಿತಮ್
ಸಪ್ತಗಾಥಾ ಪ್ರವಕ್ತಾರಮ್ ನಾರಾಯಣಮಹಮ್ ಭಜೇ

ಅಡಿಯೇನ್, ತುಲಾ ಮಾಸದ (ಐಪ್ಪಸಿ ಮಾಸ) ಅಹಿರ್ಬುದನ್ಯ (ಉತ್ತರಟ್ಟಾದಿ) ನಕ್ಷತ್ರದಲ್ಲಿ ಅವತರಿಸಿದ , ಪಿಳ್ಳೈ ಲೋಕಾಚಾರ್ಯರ ಪಾದಗಳಲ್ಲಿ ಆಶ್ರಯಿಸಿದ , ಸಪ್ತ ಕಾಥೈಯನ್ನು (ಶ್ರೀ ವಚನ ಭೂಶಣದ ಸಾರವಾಗಿರುವ) ರಚಿಸಿದ ನಾರಾಯಣರಿಗೆ (ವಿಳಾನ್ ಚೋಲೈ ಪಿಳ್ಳೈಯವರಗನ್ನು) ಪ್ರಾರ್ಥಿಸುತ್ತೆನೆ.

36. ವೆದಾಂತಾಚಾರ್ಯರ್ (ಪುರಟ್ಟಾಸಿ – ತಿರುವೋಣಮ್)

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕ್ಕಿಕ ಕೇಸರೀ
ವೇದಾಂತಾಚಾರ್ಯವರ್ಯೋ ಮೇ ಸನ್ನಿದತ್ತಾಮ್ ಸದಾ ಹೃದಿ

ಕವಿಗಳು ಹಾಗು ವಾದಚತುರರ ( ವಿರೋಧಿ) ಎದುರು ಸಿಂಹದಂತೆ ಇದ್ದ, ಭಕ್ತಿ ಹಾಗು (ಲೌಕೀಕ ವಿಶಯಗಳಲ್ಲಿ) ವೈರಾಗ್ಯವುಳ್ಳರಾದ ಮತ್ತು ವೇಂಕಟನಾಥರೆಂದೂ ಹೆಸರುಳ್ಳ ವೇದಾಂತಾಚಾರ್ಯರು ( ವೇದಾಂತ ದೇಶಿಕರು)ಅಡಿಯೇನಿನ ಹೃದಯದಲ್ಲಿ ಸದಾ ನೆಲಸಿರಲಿ.

37. ತಿರುನಾರಾಯಣಪುರತ್ತು ಆಯಿ ಜನನ್ಯಾಚಾರ್ಯರ್ (ಐಪ್ಪಸಿ – ಪೂರಾಡಮ್)

ಆಚಾರ್ಯ ಹೃದಯಸ್ಯಾರ್ಥ್ತಾಃ ಸಕಲಾ ಯೇನ ದರ್ಶಿತಾಃ
ಶ್ರೀಸಾನುದಾಸಮ್ ಅಮಲಮ್ ದೇವರಾಜಮ್ ತಮಾಶ್ರಯೇ

ಅಡಿಯೇನ್ ಆಚಾರ್ಯ ಹೃದಯಮ್ ಇನ ಎಲ್ಲಾ ವಿಶೇಷಾರ್ಥಗಳನ್ನು ನಮಗೆ ನೀಡಿದ , ಒಂದೂ ದೋಷವಿಲ್ಲದವರಾದ (ಅಮಲರು), ಶ್ರೀಶಾನು ರೇಣು ಎಂದು ಹಾಗು ದೇವರಾಜರೆಂದು ಕರಯಲ್ಪಡುವ ಆಯಿ ಜನನ್ಯಾಚಾರ್ಯರನ್ನು ಪ್ರಾರ್ಥಿಸುತ್ತೆನೆ.

 

ಮಣವಾಳ ಮಾಮುನಿಗಳ ಕಾಲದಲ್ಲಿ ಹಾಗು ಅವರ ಕಾಲದ ನಂತರವೂ ಹಲವಾರು ಆಚಾರ್ಯರು ನಮ್ಮ ಸಂಪ್ರದಾಯವನ್ನು ಅಲಂಕರಿಸಿದರು. ಅಂತಹ ಕೆಲವು ಆಚಾರ್ಯರನ್ನು ನಾವು ನೋಡೋಣ (ಇವರಿಗೇ ಸೀಮೀತಗೊಂಡಿಲ್ಲ)

1. ಪೊನ್ನಡಿಕ್ಕಾಲ್ ಜೀಯರ್ (ಪುರಟ್ಟಾಸಿ ಪುನರ್ಪೂಸಮ್)

ರಮ್ಯ ಜಾಮಾತೃ ಯೋಗೀಂದ್ರ ಪಾದರೇಖಾ ಮಯಮ್ ಸದಾ
ತಥಾ ಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ.

ಅಡಿಯೇನ್ ಮಣವಾಳ ಮಾಮುನಿಗಳ ಪಾದಗಳ ಅಚ್ಚಿನಂತೆ ಇರುತ್ತಿದ್ದ, ತಾನು (ಮಾಮುನಿಗಳ ದಾಸನೆಂಬ) ನಿಜ ಸ್ವರೂಪವನ್ನು ಸ್ಥಾಪಿಸಲು, ಧಾರಕವಾಗಿಯು ಹಾಗು ಅವರ ಕಾರ್ಯಗಳಲ್ಲೂ ಮಾಮುನಿಗಳನ್ನೇ ಅವಲಂಬಿಸುತ್ತಿದ್ದ ವಾನಮಾಮಲೈ ಜೀಯರನ್ನು ಪ್ರಾರ್ಥಿಸುತ್ತೆನೆ.

2. ಪತಂಗಿ ಪರವಸ್ತು ಪಟ್ಟರ್ಪಿರಾನ್ ಜೀಯರ್ (ಕಾರ್ತಿಗೈ – ಪುನರ್ಪೂಸಮ್)

ರಮ್ಯ ಜಾಮಾತ್ರು ಯೋಗೀಂದ್ರ ಪಾದ ಸೇವೈಕ ಧಾರಕಮ್
ಭಟ್ಟನಾಥ ಮುನಿಮ್ ವಂದೇ ವಾತ್ಸಲ್ಯಾದಿ ಗುಣಾರ್ಣವಮ್.

ಅಡಿಯೇನ್, ಮಣವಾಳ ಮಾಮುನಿಗಳ ಪಾದಗಳ್ಳನ್ನೇ ಧಾರಕವಾಗಿ ಕಂಡ ಹಾಗು ವಾತ್ಸಲ್ಯಾದಿ ಗುಣಗಳ ಸಾಗರವಾದ ಶ್ರೀ ಭಟ್ಟನಾತ ಮುನಿಗಳನ್ನು (ಪರವಸ್ತು ಪಟ್ಟರ್ಪಿರನ್ ಜೀಯರನ್ನು) ಪ್ರಾರ್ಥಿಸುತ್ತೆನೆ

3. ಕೋಯಿಲ್ ಕಂದಾಡೈ ಅಣ್ಣನ್ (ಪುರಟ್ಟಾಸಿ – ಪೂರಟ್ಟಾದಿ)

ಸಖಲ ವೇದಾಂತ ಸಾರಾರ್ಥ ಪೂರ್ಣಾಸಯಮ್
ವಿಪುಲ ವಾದೂಲ ಗೋತ್ರೋದ್ಭವಾನಾಮ್
ವರಮ್ ರುಚಿರ ಜಾಮಾತ್ರು ಯೋಗೀಂದ್ರ ಪಾದಾಶ್ರಯಮ್
ವರದ ನಾರಾಯಣಮ್ ಮದ್ ಗುರುಮ್ ಸಂಶ್ರಯೇ

ಎಲ್ಲ ವೇದಾಂತ ಅರ್ಥಗಳನ್ನು ತಮ್ಮ ಹೃದಯದಲ್ಲೇ ಕಂಡ, ಉತ್ತಮವಾದ ವಾದುಲ ಕುಲದವರಲ್ಲಿ ಉತ್ತಮರಾದ ಹಾಗು ಮಾಮುನಿಗಳ ಪದಗಳಲ್ಲಿ ಆಶ್ರಯಿಸಿದ ಆಚಾರ್ಯರಾದ ಶ್ರೀ ವರದ ನರಾಯಣ ಜೀಯರಿಗೆ (ಕೋಯಿಲ್ ಕಂದಾಡೈ ಅಣ್ಣನ್) ಅಡಿಯೇನಿನ ವಂದನೆಗಳು.

4. ಪ್ರತಿವಾದಿ ಭಯಂಕರಮ್ ಅಣ್ಣನ್ (ಆಡಿ – ಪೂಸಮ್)

ವೇದಾಂತ ದೇಶಿಕ ಕಟಾಕ್ಷ ವಿವ್ರುದ್ದಭೋದಮ್
ಕಾಂತೋಪಯಂತ್ರು ಯಮಿನಃ ಕರುಣೈಕ ಪಾತ್ರಮ್
ವತ್ಸಾನ್ವವಾಯಮನವದ್ಯ ಗುಣೈರುಪೇತಮ್
ಭಕ್ತ್ಯಾ ಭಜಾಮಿ ಪರವಾತಿ ಭಯಂಕರಾರ್ಯಮ್

ಅಡಿಯೇನ್ ಭಕ್ತಿಯಿಂದ, ವೇದಾಂತ ದೇಶಿಕರ ಕೃಪೆಯಿಂದ ಜ್ಞಾನ ಅರಳಿಸಲ್ಪಟ್ಟ, ಮಣವಾಳ ಮಾಮುನಿಗಳ ಕೃಪೆಗೆ ಪಾತ್ರರಾದ, ಶ್ರೀವತ್ಸ ಕುಲದಲ್ಲಿ ಅವತರಿಸಿದ, ನಿಶ್ಕಳಂಕರು ಹಾಗು ಸದ್ಗುಣಗಳನ್ನು ಹೊಂದಿರುವ ಪ್ರತಿವಾದಿ ಭಯಂಕರಮ್ ಅಣ್ಣನ್ ರವರನ್ನು ಪ್ರಾರ್ಥಿಸುತ್ತೆನೆ.

5. ಎರುಂಬಿಅಪ್ಪಾ (ಐಪ್ಪಸಿ – ರೇವತಿ)

ಸೌಮ್ಯ ಜಾಮಾತ್ರು ಯೋಗೀಂದ್ರ ಶರಣಾಂಬುಜ ಶಟ್ಪದಮ್
ದೇವರಾಜ ಗುರುಮ್ ವಂದೇ ದಿವ್ಯ ಜ್ಞಾನ ಪ್ರದಮ್ ಶುಭಂ

ಅಡಿಯೇನ್, ದುಂಬಿಯಂತೆ ಮಣವಾಳ ಮಾಮುನಿಗಳ ಪಾದಪಂಕಜಗಳಲ್ಲಿ ಆಶ್ರಯಿಸಿದ, ದಿವ್ಯ ಜ್ಞಾನವನ್ನು ನಮಗೆ ಅನುಗ್ರಹಿಸುವ ಹಾಗು ಶುಭ ಸ್ವರೂಪ ಹೊಂದಿರುವ ದೇವರಾಜ ಗುರುಗಳನ್ನು ಪ್ರಾರ್ಥಿಸುತ್ತೆನೆ.

6. ಅಪ್ಪಿಳ್ಳೈ

ಕಾಂತೋಪಯಂತೃ ಯೋಗೀಂದ್ರ ಸರ್ವ ಕೈಂಕರ್ಯದೂರ್ವಹಮ್
ತದೇಕ ದೈವತಮ್ ಸೌಮ್ಯಮ್ ರಾಮಾನುಜ ಗುರುಮ್ ಭಜೇ

ಅಡಿಯೇನ್,ಶ್ರೀವತ್ಸ ಕುಲದಲ್ಲಿ ಅವತರಿಸಿದ , ಮಣವಾಳ ಮಾಮುನಿಗಳನ್ನೆ ಅವರ ಭಗವಂತನಾಗಿಯೂ, ಹಾಗು ಸ್ವಾಮಿಯಾಗಿಯೂ ಕಂಡು, ಹಲವಾರು ಕೈಂಕರ್ಯಗಳನ್ನು ಮಾಡಿದ ರಾಮಾನುಜರನ್ನು ( ಅಪ್ಪಿಳ್ಳಾರನ್ನು) ಪ್ರಾರ್ಥಿಸುತ್ತೇನೆ.

7. ಕೋಯಿಲ್ ಕಂದಾಡೈ ಅಪ್ಪನ್ (ಪುರಟ್ಟಾಸಿ (ಕನ್ನಿ) –

ವರವರದಗುರು ಚರಣಮ್ ವರವರಮುನಿವರ್ಯ ಗನಕ್ರುಪಾ ಪಾತ್ರಮ್
ಪ್ರವರಗುಣ ರತ್ನ ಜಲಧಿಮ್ ಪ್ರಣಮಾಮಿ ಶ್ರೀನಿವಾಸ ಗುರುವರ್ಯಮ್

ಅಡಿಯೇನ್ ವರದ ನರಾಯಣ ಗುರುಗಳ ಪಾದಗಳನ್ನೇ ಉಪಾಯವಾಗಿ ಕಂಡ, ಮಾಮುನಿಗಳ ಅತ್ಯಂತ ಕೃಪೆಗೆ ಪಾತ್ರರಾದ, ರತ್ನಗಳಂತಹ ಮಂಗಳ ಗುಣಗಳನ್ನು ಹೊಂದಿರುವ ಶ್ರೀನಿವಾಸಾಚಾರ್ಯರನ್ನು ಪ್ರಾರ್ಥಿಸುತ್ತೆನೆ.

8. ಶ್ರೀಪೆರುಂಬೂದೂರ್ ಆದಿ ಯತಿರಾಜ ಜೀಯರ್ (ಐಪ್ಪಸಿ – ಪೂಸಮ್)

ಶ್ರೀಮತ್ ರಾಮಾನುಜಾಂಘ್ರಿ ಪ್ರವಣ ವರಮುನೇಃ ಪಾದುಕಮ್ ಜಾತಬ್ರುಂಗಮ್
ಶ್ರೀಮತ್ ವಾನಾದ್ರಿ ರಾಮಾನುಜ ಗಣಗುರು ಸತ್ವೈಭವ ಸ್ತೋತ್ರ ದೀಕ್ಷಮ್
ವಾದೂಲ ಶ್ರೀನಿವಾಸಾರ್ಯ ಚರಣಶರಣಮ್ ತತ್ ಕೃಪಾ ಲಭ್ದ ಭಾಷ್ಯಮ್
ವಂದೇ ಪ್ರಾಗ್ಯಮ್ ಯತೀಂದ್ರಮ್ ವರವರದಗುರೋಃ ಪ್ರಾಪ್ತ ಭಕ್ತಾಮೃತಾರ್ತ್ತಮ್

ಅಡಿಯೇನ್, ಯತೀಂದ್ರ ಪ್ರವಣರ (ಮಣವಾಳ ಮಾಮುನಿಗಳ) ಪಾದಗಳಲ್ಲಿ ದುಂಬಿಯಂತೆ ಇದ್ದ ,ವಾನಮಾಮಮಲೈ ಜೀಯರಿನ ಮಹಿಮೆಯನ್ನು ಸತತವಾಗಿ ಪ್ರಶಂಸಿಸುತ್ತಿದ, ವಾದುಲ ಶ್ರೀನಿವಾಸಾಚರ್ಯರ ಕೃಪೆಯಿಂದ ಶ್ರೀ ಭಾಷ್ಯವನ್ನು ಕಲೆತ, ತಿರುವಾಯ್ಮೊೞಿಯನ್ನು ವಾದುಲ ವರದಾಚರ್ಯರಿಂದ ಕಲೆತ ಬುದ್ಧಿವಂತರಾಗಿದ್ದು ,ಆದಿ ಯತಿರಾಜ ಜೀಯರನ್ನು ಪ್ರಾರ್ಥಿಸುತ್ತೆನೆ.

9. ಅಪ್ಪಾಚಿಯಾರಣ್ಣಾ (ಆವಣಿ – ಹಸ್ತಮ್)

ಶ್ರೀಮತ್ ವಾನಮಹಾಶೈಲ ರಾಮಾನುಜ ಮುನಿಪಿರ್ಯಮ್
ವಾದೂಲ ವರದಾಚಾರ್ಯಮ್ ವಂದೇ ವಾತ್ಸಲ್ಯ ಸಾಗರಮ್

ಅಡಿಯೇನ್, ವಾನಮಾಮಲೈ ಜೀಯರಿಗೆ ಅತ್ಯಂತ ಪ್ರಿಯರಾದ, ವಾತ್ಸಲ್ಯದ ಸಾಗರವಾದ ವಾದುಲ ವರದಾಚರ್ಯರನ್ನು ಪ್ರಾರ್ಥಿಸುತ್ತೆನೆ.

10. ಪಿಳ್ಳೈ ಲೋಕಮ್ ಜೀಯರ್ (ಚಿತ್ತಿರೈ – ತಿರುವೋಣಮ್)

ಶ್ರೀಶಠಾರಿ ಗುರೋರ್ದಿವ್ಯ ಶ್ರೀಪಾದಾಭ್ಜ ಮಧುವ್ರತಮ್
ಶ್ರೀಮತ್ಯತೀಂದ್ರಪ್ರವಣಮ್ ಶ್ರೀ ಲೋಕಾರ್ಯ ಮುನಿಮ್ ಭಜೇ

ಅಡಿಯೇನ್, ಶ್ರೀ ಶಠಗೋಪ ಗುರುಗಳ ಪಾದಗಳಲ್ಲಿ ದುಂಬಿಯಂತೆ ಇದ್ದ, (ಮಣವಾಳ ಮಾಮುನಿಗಳ ಜೀವನವನ್ನು ವಿವರಿಸುವ) ಯತೀಂದ್ರ ಪ್ರವಣ ಪ್ರಭಾವವನ್ನು ರಚಿಸಿದ ಪಿಳ್ಳೈ ಲೋಕಾಚಾರ್ಯ ಜೀಯರನ್ನು ಪ್ರಾರ್ಥಿಸುತ್ತೆನೆ.

11. ತಿರುಮೞಿಸೈ ಅಣ್ಣಾವಪ್ಪಂಗಾರ್ (ಆನಿ – ಅವಿಟ್ಟಮ್)

ಶ್ರೀಮದ್ ವಾದುಲ ನರಸಿಂಹ ಗುರೋಸ್ತನೂಜಮ್
ಶ್ರೀಮತ್ ತದೀಯ ಪದಪಂಕಜ ಭೃಂಗರಾಜಮ್
ಶ್ರೀರಂಗರಾಜ ವರದಾರ್ಯ ಕೃಪಾತ್ತ ಭಾಶ್ಯಮ್
ಸೇವೇ ಸದಾ ರಘುವರಾರ್ಯಮ್ ಉದಾರಚರ್ಯಮ್

ಅಡಿಯೇನ್, ಶ್ರೀ ವಾದುಲ ನರಸಿಂಹಾಚಾರ್ಯರ ಪುತ್ರರು, ಹಾಗು ಅವರ ಪಾದಪಂಕಜಗಳನ್ನೆ ದುಂಬಿಯಂತೆ ಸತತವಾಗಿ ಚಿಂತಿಸುವವರಾದ ,ಶ್ರೀರಂಗರಾಜಾಚಾರ್ಯರು ಹಾಗು ವರದಾಚಾರ್ಯರ್ರಿಬ್ಬರಿಂದಲುೂ ಶ್ರೀ ಭಾಷ್ಯವನ್ನು ಕಲೆತ, ಔದಾರ್ಯದಿಂದ ತುಂಬಿರುವ ಶ್ರೀ ರಘುವರಾರ್ಯರನ್ನು (ವಾದೂಲ ವೀರ ರಾಘವಚಾರ್ಯರ್ – ಅಣ್ಣಾವಪ್ಪನ್ಗಾರ್) ಪ್ರಾರ್ಥಿಸುತ್ತೆನೆ.

12. ಅಪ್ಪನ್ ತಿರುವೇಂಕಟ ರಾಮಾನುಜ ಎಂಬಾರ್ ಜೀಯರ್

ಶ್ರೀವಾದೂಲ ರಮಾಪ್ರವಾಳ ರುಚಿರ ಸ್ರಕ್ಶೈನ್ಯ ನಾತಾಮ್ಚಜ ಶ್ರೀಕುರ್ವೀಂದ್ರಮ್
ಮಹಾರ್ಯ ಲಭ್ದ ನಿಜಸತ್ ಸತ್ತಮ್ ಚ್ರುತಾ ಭೀಶ್ಟತಮ್
ಶ್ರೀರಾಮಾನುಜ ಮುಖ್ಯ ದೇಸಿಕಲಸತ್ ಕೈಂಕರ್ಯ ಸಂಸ್ತಾಪಕಮ್
ಶ್ರೀಮತ್ವೇಂಕಟಲಕ್ಷ್ಮಣಾರ್ಯ ಯಮಿನಮ್ ತಮ್ಸತ್ಗುಣಮ್ ಭಾವಯೇ

ಅಡಿಯೇನ್ , ವಿಶ್ವಕ್ಸೇನರ ಅಂಶದಿಂದ ಅವತರಿಸಿದ, ವಾದುಲ ಕುಲದ ಹಾರದಲ್ಲಿ ಸುಂದರ ಮುತ್ತಿನಂತೆ(ರತ್ನ) ಇರುವ, ತಮ್ಮಲ್ಲಿ ಬೇಡಿದ ಯಾವುದೇ ಆಸೆಯನ್ನು ಪೂರೈಸುವ, ನಮ್ಮ ಆಚಾರ್ಯಾ ಶಿಕಾಮಣಿಗಳಾದ ಶ್ರೀ ರಾಮಾನುಜರಿಗೆ (ತಿರುಮಂಜನ ಕೈಂಕರ್ಯ, ಚಿತ್ತಿರೈ ತಿರುವಾದಿರೈ ಉತ್ಸವದಲ್ಲಿ ನಿತ್ಯ/ಲೀಲ ವಿಭೂತಿಯ ಘೋಷಣಗಳಂತಹ ಕೈಂಕರ್ಯಗಳು) ಕೈಂಕರ್ಯಗಳನ್ನು ಸ್ಥಿರವಾಗಿ ಸ್ತಾಪಿಸಿದ ಅಪ್ಪನ್ ತಿರುವೇಂಕಟ ರಾಮಾನುಜ ಜೀಯರಿನ ಸದ್ಗುಣಗಳನ್ನು ಅಡಿಯೇನ್ ಮನಸ್ಸಿನಲ್ಲಿ ಸವಿಯುತ್ತೇನೆ.

 (ಭಗವದ್ವಿಶಯ ಕಾಲಕ್ಷೇಪದಲ್ಲಿ ಪಟಿಸುವ) ಭಗವದ್ವಿಶಯ ತನಿಯನ್ ಗಳನ್ನು http://divyaprabandham.koyil.org/?p=1779ನಲ್ಲಿ ನೋಡಬಹುದು

ಅಡಿಯೇನ್ ಆಳವಂದಾರ್ ರಾಮಾನುಜ ದಾಸನ್

ಸಂಗ್ರಹ – https://acharyas.koyil.org/index.php/thanians/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org ಪ್ರಮಾತಾ (ಭೋಧಕರು) – https://acharyas.koyil.org ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org