ಉಯ್ಯಕ್ಕೊಣ್ಡಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ನಾಥಮುನಿಗಳ್ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ಮುಂದೆ ಉಯ್ಯಕ್ಕೊಣ್ಡಾರ್ ಬಗ್ಗೆ ನೊಡೊಣ.(https://acharyas.koyil.org/index.php/2017/07/10/nathamunigal/)

uyyakondar

ಉಯ್ಯಕ್ಕೊಣ್ಡಾರ್ – ತಿರುವೆಳ್ಳರೈ

ಉಯ್ಯಕ್ಕೊಣ್ಡಾರ್ – ಆೞ್ವಾರ್ ತಿರುನಗರಿ

ತಿರು ನಕ್ಷತ್ರ೦: ಚಿತ್ತಿರೈ, ಕಾರ್ತಿಗೈ

ಅವತಾರ ಸ್ಥಳ೦: ತಿರುವೆಳ್ಳರೈ

ಆಚಾರ್ಯರು: ನಾಥಮುನಿಗಳ್

ಶಿಷ್ಯರು: ಮಣಕ್ಕಾಲ್ ನಂಬಿ, ತಿರುವಲ್ಲಿಕ್ಕೇಣಿ ಪಾಣ್ ಪೆರುಮಾಳ್ ಅರೈಯರ್, ಚೇಟ್ಟಲೂರ್ ಶೆಂಡಲಂಗಾರ ದಾಸರ್, ಶ್ರೀ ಪುನ್ಡರೀಕ ದಾಸರ್, ಗೊಮಟಮ್ ತಿರುವಿಣ್ಣಕರಪ್ಪನ್, ಉಲಗಪೆರುಮಾಳ್ ನಂಗೈ.

ಪುಣ್ಡರೀಕಾಕ್ಷರು ತಿರುವೆಳ್ಳರೈ (ಶ್ವೇತ ಗಿರಿ) ಎಂಬ ದಿವ್ಯ ದೇಶದಲ್ಲಿ ಜನಿಸಿದರು ಮತ್ತು ಅವರಿಗೆ ದಿವ್ಯ ದೇಶದ ಎಂಪೆರುಮಾನ್ನಿನ ಹೆಸರನ್ನು ಇಟ್ಟಿದಾರೆ. ಅವರಿಗೆ ಪದ್ಮಾಕ್ಷರ್ ಎಂದೂ ಹೆಸರಿದೆ, ಕೊನೆಗೆ ಉಯ್ಯಕ್ಕೊಣ್ಡಾರ್ ಎಂದು ಜನಪ್ರಿಯರಾದರು.

ಅವರು ನಾಥಮುನಿಗಳರ ಮುಖ್ಯ ಶಿಶ್ಯರು, ಕುರುಗೈ ಕಾವಲಪ್ಪನ್ ಕೂಡ ಅವರ ಜೊತೆ ಅಭ್ಯಾಸಮಾಡಿದರು. ನಾಧಮುನಿಗಳು ನಮ್ಮಾೞ್ವಾರ್ರಿಂದ ಸಕಲ ಅರ್ಥ ವಿಶಷಯಗಳನ್ನು ತಿಳಿದುಕೊಂಡ ಮೇಲೆ, ಅವರು ಕಾಟ್ಟು ಮನ್ನಾರ್ ಕೋಯಿಲ್ಗೆ ಬಂದು ನಮ್ಮ ಸಂಪ್ರದಾಯವನ್ನು ಬೆಳೆಸಲು ಶುರುಮಾಡುತ್ತಾರೆ. ಅವರು ಅಷ್ಟಾಂಗ ಯೋಗವನ್ನು ಕುರುಗೈ ಕಾವಲಪ್ಪನ್ಗೆ ಹೇಳಿಕೊಟ್ಟರು – ಅಷ್ಟಾಂಗ ಯೋಗದ ಮೂಲಕ, ಯರೊಬ್ಬರೂ ತಮ್ಮ ದೇಹದ ಉಬಾಧೆಗಳ ಬಗ್ಗೆ ಯೋಚನೆಮಾಡದೆ, ಯಾವ ತಡೆಗಳಿಲ್ಲದೆ ಎಂಬೆರುಮಾನನನ್ನು ಅನುಭವಿಸಬಹುದು. ನಾಥಮುನಿಗಳು ಉಯ್ಯಕ್ಕೊಂಡಾರನ್ನು ಅಷ್ಟಾಂಗ ಯೋಗವನ್ನು ಕಲಿಯಲು ಬಯಸುವಿಯಾ ಎಂದು ಕೇಳೀದರು. ಉಯ್ಯಕ್ಕೊಂಡಾರ್ರರು “ಪಿನ್ಣಮ್ ಕಿಡಕ್ಕ ಮನ್ಣಮ್ ಪುನ್ಣರಲಾಮೋ”  – “ಈ ಲೊಕದಲ್ಲಿ, ಸಂಸಾರಿಗಳು ಅಜ್ಞಾನದಿಂದ ಕಷ್ಟಪಡುತಿರುವಾಗ,ಹೇಗೆ ಒಬ್ಬನೇ ಭಗವದ್ ಅನುಭವವನ್ನು ಅನುಭವಿಸಲಿ” ಎಂದು ಕೇಳಿದರು. ಈದನ್ನು ಕೇಳಿದ ನಾಥಮುನಿಗಳು ತುಂಬ ಸಂತುಷ್ಟರಾದರು ಹೆಮ್ಮೆಯಿಂದ ಶ್ಲಾಘಿಸುತ್ತಾರೆ. ಅವರು ತಮ್ಮ ಮಗನಾದ ಈಶ್ವರಮುನಿಯ ಮಗನಿಗೆ ಅಷ್ಟಾಂಗ ಯೋಗವನ್ನು ಮತ್ತು ಅರುಳಿಚೆಯಲ್ ಅನ್ನು ಅರ್ಥದ ಜೊತೆಗೆ ಹೇಳಿಕೊಡುವಂತೆ ಕುರುಗೈ ಕಾವಲಪ್ಪನ್ ಮತ್ತು ಉಯ್ಯಕ್ಕೊಂಡಾರ್ರಿಗೆ ಹೇಳಿದರು.

ನಾಥಮುನಿಗಳ ಸಮಯದ ನಂತರ, ಉಯ್ಯಕ್ಕೊಂಡಾರ್ ದರಿಶನ ಪ್ರವರ್ತಕರ್(ಸಂಪ್ರದಾಯವನ್ನು ರಕ್ಷಿಸಲು/ಪ್ರಚಾರ ಮಾಡುವ ಅಧಿಕಾರಿಯಾಗಿದ್ದಾರೆ) ಆಗುತ್ತಾರೆ ಮತ್ತು ತಮ್ಮ ಶಿಷ್ಯರಿಗೆ ಬ್ರಹ್ಮಜ್ಞಾನನವನ್ನು ಬೋಧಿಸುತ್ತಾರೆ. ಅವರು ಪರಮಪದವನ್ನು ಅಡಯುವ ಮುನ್ನ, ಮಣಕ್ಕಾಲ್ ನಂಬಿಯನ್ನು ನಮ್ಮ ಸಂಪ್ರದಾಯವನ್ನು ಮುಂದೆ ನಡೆಸಲು ಹೇಳುತ್ತಾರೇ. ಮತ್ತು ಮಣಕ್ಕಾಲ್ ನಂಬಿಗೆ ಯಾಮುನೈತುರೈವರನ್ನು ಮುಂದಿನ ನಾಯಕನಾಗಲು ಅಣಿಗೊಳಿಸಲು ಹೇಳುತ್ತಾರೆ.

ಅವರು ಆಂಡಾಳ್ರ ತನಿಯನ್ “ಅನ್ನವಯಲ್ ಪುಡುವೈ” ಮತ್ತು “ಶುಡಿಕ್ಕೊಡುತ್ತ ಶುಡರ್ಕೊಡಿಯೇ” ರಚಿಸಿದಾರೆ.

ಉಯ್ಯಕ್ಕೊಣ್ಡಾರ್ ತನಿಯನ್:

ನಮ: ಪಂಕಜ ನೇತ್ರಾಯ ನಾಥ: ಶ್ರೀ ಪಾದ ಪಂಕಜೇ |
ನ್ಯಸ್ತ ಸರ್ವ ಭರಾಯ ಅಸ್ಮತ್ ಕುಲ ನಾಥಾಯ ಧೀಮತೇ ||

நம: பங்கஜ நேத்ராய நாத: ஸ்ரீ பாத பங்கஜே
ந்யஸ்த ஸர்வ பராய அஸ்மத் குல நாதாய தீமதே

ವೇದಾಂತಾಚರ್ಯರ್ ರವರು ತಮ್ಮ ಯತಿರಾಜ ಸಪ್ತತಿಃ ಯಲ್ಲಿ ಉಯ್ಯಕ್ಕೊಣ್ಡಾರ್ ಬಗ್ಗೆ ಶ್ಲೋಕ ರಚಿಸಿದ್ದಾರೆ (ಶ್ಲೋಕ ೬).

ನಮಸ್ಯಾಮ್ಯರವಿಂದಾಕ್ಷಂ ನಾಥ ಭಾವೇ ವ್ಯವಸ್ಥಿತಂ |
ಶುದ್ಧಸತ್ತ್ವ ಮಯಂ ಶೌರೇಃ ಅವತಾರಮಿವಾಪರಂ ||

ಮಣಕ್ಕಾಲ್ ನಂಬಿ ಬಗ್ಗೆ ಮುಂದಿನ ಲೇಖನದಲ್ಲಿ ನೊಡೊಣ.

ಅಡಿಯೇನ್ ರಾಮಾನುಜ ದಾಸನ್

ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಸಂಗ್ರಹ – http://acharyas.koyil.org/index.php/2012/08/24/uyyakkondar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org