ಸೇನೈ ಮುದಲಿಯಾರ್ (ವಿಶ್ವಕ್ಸೇನರ್)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ ನಾವು ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿಯ ಬಗ್ಗೆ ಚರ್ಚೆ ಮಾಡಿದ್ದೇವೆ.

ಸೇನೈ ಮುದಲಿಯಾರ್ (ವಿಶ್ವಕ್ಸೇನರ್)

ಸೇನೈ ಮುದಲಿಯಾರ್ – ತಿರುವಲ್ಲಿಕ್ಕೇಣಿ

ತಿರುನಕ್ಷತ್ರ: ಐಪ್ಪಿಶಿ, ಪೂರಾಡಂ. 

ರಚನೆ: ವಿಷ್ವಕ್ಸೇನ ಸಂಹಿತ

ಇವರು ನಿತ್ಯಸೂರಿಗಳಲ್ಲಿ ಒಬ್ಬರು. ಪ್ರಧಾನ ನಾಯಕರಾಗಿ, ಇವರು ಸ್ವತಃ ಎಂಪೆರುಮಾನಿಂದ ಬರುವ ಆಜ್ಞೆಯನ್ನು ಪರಿಪಾಲಿಸುತ್ತಾರೆ. ನಿತ್ಯವಿಭೂತಿ ಮತ್ತು ಲೀಲಾವಿಭೂತಿಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಇವರು ನೋಡಿಕೊಳ್ಳುತ್ತಾರೆ. ಸೇನೈ ಮುದಲ್ವರ್, ಸೇನಾಧಿಪತಿ, ವೇತ್ರಧಾರರ್ ಮತ್ತು ವೇತ್ರಹಸ್ತರ್ ಎಂಬ ಇತರ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಸೂತ್ರಾವತಿ ಇವರ ದಿವ್ಯ ಪತ್ನಿ.  ಎಂಪೆರುಮಾನಿಂದ ಶೇಷ ಪ್ರಸಾದ ಇವರಿಗೆ ಮೊದಲು ದೊರಕುವ ಕಾರಣದಿಂದ ಇವರಿಗೆ “ಶೇಷ ಆಸನರ್” ಎಂದೂ ಸಹ ಹೆಸರು.

ಪೂರ್ವಾಚಾರ್ಯರ ಪ್ರಕಾರ ಪೆರಿಯ ಪಿರಾಟ್ಟಿಯವರು ಸೇನೈ ಮುದಲಿಯಾರವರ ಆಚಾರ್ಯರು. ಎಲ್ಲಾ ಆಳ್ವಾರುಗಳು ಇವರ ಶಿಷ್ಯರೆಂದು ಪರಿಗಣಿಸಲಾಗುತ್ತದೆ. ಪೂರ್ವಾಚಾರ್ಯರುಗಳು ವಿವರಿಸಿದಂತೆ ಎಂಪೆರುಮಾನ್ ನಿತ್ಯ ಮತ್ತು ಲೀಲಾ ವಿಭೂತಿಯ ಚಟುವಟಿಕೆ ನಿಯಂತ್ರಣ ಜವಾಬ್ದಾರಿಯನ್ನು ಸೇನೈ ಮುದಲಿಯಾರವರಿಗೆ ವಹಿಸಿದ್ದಾರೆ. ಸೇನೈ ಮುದಲಿಯಾರವರನ್ನು ಹಿರಿಯ ಮಂತ್ರಿಯಾಗಿ ಮತ್ತು ಎಂಪೆರುಮಾನನ್ನು ರಾಜಕುಮಾರನಾಗಿ ಕಲ್ಪಿಸುತ್ತಾರೆ. ಸ್ತೋತ್ರ ರತ್ನದ ೪೨ಡನೆ ಶ್ಲೋಕದಲ್ಲಿ ಎಂಪೆರುಮಾನ್ ಮತ್ತು ಸೇನೈ ಮುದಲಿಯಾರವರ ಸಂಬಂಧವನ್ನು ಪ್ರಕಟಿಸಲಾಗಿದೆ.

ತ್ವಧೀಯಭುಕ್ತೋಜ್ಝಿತಶೇಷಭೋಜಿನಾ
ತ್ವಯಾ ನಿಸೃಷ್ಟಾತ್ಮಭರೇಣ ಯದ್ಯಥಾ |
ಪ್ರಿಯೇಣ ಸೇನಾಪತಿನಾ ನ್ಯವೇದಿ ತತ್
ತಥಾಽನುಜಾನಂತಮುದಾರವೀಕ್ಷಣೈಃ ||

ಈ ಶ್ಲೋಕದಲ್ಲಿ ಆಳವಂದಾರ್ ಎಂಪೆರುಮಾನನ್ನು ಸಂಭೋಧಿಸಿ ಅವರ ಉಭಯ ವಿಭೂತಿ ಸಾಮ್ರಾಜ್ಯವನ್ನು ನಿಯಂತ್ರಿಸುವ ವಿಶ್ವಕ್ಸೇನರನ್ನು ವೈಭವೀಕರಿಸುತ್ತಾರೆ.

ಸರಳ ಅನುವಾದ: ವಿಶ್ವಕ್ಸೇನರು ನಿನ್ನ ಶೇಷ ಪ್ರಸಾದವನ್ನು ಸ್ವೇಕರಿಸಿ, ನಿತ್ಯ ವಿಭೂತಿ ಮತ್ತು ಲೀಲಾವಿಭೂತಿಯನ್ನು ನಡೆಸುವ ಜವಾಬ್ದಾರಿ ಹೊಂದಿರುವವರು. ಇವರನ್ನು ಎಲ್ಲರು ಇಷ್ಟ ಪಡುತ್ತಾರೆ. ಅವರು ಎಂಪೆರುಮಾನ್ ಕೊಡುವ ಎಲ್ಲಾ ಕೆಲಸ ಕಾರ್ಯಗಳನ್ನು ಅವನ ಕೃಪಾಕಟಾಕ್ಷದಿಂದ ಸಾಧಿಸಬಲ್ಲರು. ಎಂಪೆರುಮಾನ್ ಮಾತನಾಡುವ ಅವಶ್ಯವೇ ಇಲ್ಲ. ವಿಶ್ವಕ್ಸೇನರು ಕೇವಲ ಎಂಪೆರುಮಾನಿನ ಕಣ್ಣನ್ನು ನೋಡಿಯೇ ತಿಳಿದುಕೊಂಡು ನಿಖರತೆಯಿಂದ ಅದನ್ನು ನೆರವೇರಿಸುತ್ತಾರೆ.

ಸೇನೈ ಮುದಲಿಯಾರವರ ತನಿಯನ್:

ಶ್ರೀರಂಗ ಚಂದ್ರಮಸಂ ಇನ್ದ್ರಿಯಾವಿಹರ್ತುಂ
ವಿನಯ್ಸ್ಯ ವಿಶ್ವಚಿದ ಚಿನ್ನಯನಾಧಿಕಾರಂ |
ಯೋನಿರ್ವಹತ್ಯ ನಿಷಮಙ್‍ಗುಳಿ ಮುದ್ರಯೈವ
ಸೇನಾನ್ಯಂ ಅನ್ಯ ವಿಮುಖಾಸ್ತಮಸಿ ಶ್ರಿಯಾಮಃ ||

ಎಂಪೆರುಮಾನಿನ ವಿಷಯದಲ್ಲಿ ಶುದ್ಧ ಭಕ್ತಿ ಇರಲ್ಲಿ ಎಂದು ಸೇನೈ ಮುದಲಿಯಾರನ್ನು ಪ್ರಾರ್ಥಿಸೋಣ.

ಮುಂದಿನ ಲೇಖನದಲ್ಲಿ ಪ್ರಪನ್ನಜನ ಕೂಟಸ್ಥರ್ – ನಮ್ಮಾಳ್ವಾರರ ಬಗ್ಗೆ ಚರ್ಚೆ ಮಾಡೋಣಾ.

ಅಡಿಯೇನ್ ರಾಮಾನುಜನ್ ಮಧುರಕವಿ ರಾಮಾನುಜ ದಾಸನ್

ಮೂಲ: http://acharyas.koyil.org/index.php/2012/08/18/senai-mudhaliar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – https://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

1 thought on “ಸೇನೈ ಮುದಲಿಯಾರ್ (ವಿಶ್ವಕ್ಸೇನರ್)”

Comments are closed.