ನಮ್ಪಿಳ್ಳೈ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:


ಹಿಂದಿನ ಲೇಖನದಲ್ಲಿ ( https://acharyas.koyil.org/index.php/2021/01/31/nanjiyar-kannada/ ) ಸ್ವಾಮಿ ನನ್ಜೀಯರ್ ಅವರ ಬಗ್ಗೆ ನಾವು ಚರ್ಚಿಸಿದ್ದೇವೆ. ಈಗ ಓರಾಣ್ ವಳಿ ಗುರು ಪರಂಪರೆಯ ಮುಂದಿನ ಆಚಾರ್ಯರ ಬಗ್ಗೆ ನೋಡೋಣ.

ನಂಪಿಳ್ಳೈ -ತಿರುವಳ್ಳಿ ಕ್ಕೇನಿ


ತಿರುನಕ್ಷತ್ರಮ್ : ಕಾರ್ತಿಕೈ ಕಾರ್ತಿಕೈ

ಅವತಾರ ಸ್ಥಳ: ನಮ್ಬೂರ್

ಆಚಾರ್ಯನ್ : ನನ್ಜೀಯರ್

ಪರಮಪದ ಪಡೆದ ಸ್ಥಳ: ಶ್ರೀರಂಗಮ್

ಕೃತಿಗಳು: ತಿರುವಾಯ್ಮೊಳಿ ೩೬೦೦೦ ಪಡಿ ಈಡು ವ್ಯಾಖ್ಯಾನ ,ಕಣ್ಣಿನುನ್ ಸಿರುತ್ತಾಮ್ಬು ವ್ಯಾಖ್ಯಾನ,ತಿರುವನ್ದಾದಿಗಳ ಮತ್ತು ತಿರುವಿರುತ್ತಮ್ ವ್ಯಾಖ್ಯಾನ.

ವರದರಾಜನ್ ಎನ್ನುವ ಹೆಸರುಗೂಂಡು ನಮ್ಬೂರಿನಲ್ಲಿ ಜನಿಸಿ, ನಮ್ಪಿಳ್ಳೈ ಎನ್ನುವ ಹೆಸರು ಪಡೆದು ಪ್ರಸಿದ್ಧರಾದರು.
ತಿರುಕ್ಕಲಿಕನ್ರಿ ದಾಸರ್, ಕಲಿವೈರಿ ದಾಸಿರ್, ಲೋಕಾಚಾರ್ಯರ್, ಸೂಕ್ತಿ ಮಹಾರ್ಣವರ್, ಜಗತಾಚಾರ್ಯ ಮತ್ತು ಉಲಗಾಸಿರಿಯರ್ ಎಂಬುವ ಹೆಸರುಗಳನ್ನೂ ಪಡೆದಿದ್ದಾರೆ.

ಪೆರಿಯ ತಿರುಮೊಳಿ ೭.೧೦.೧೦ ನಲ್ಲಿ ಹೇಳಿದಂತೆ, ತಿರುಕ್ಕಣ್ಣಮಂಗೈ ಎಂಪೆರುಮಾನ್ ತಿರುಮಂಗೈ ಆಳ್ವಾರ್ ಅವರ ಪಾಸುರಗಳನ್ನು ಕಲಿಯನಿಂದಲೇ ತಿಳಿದುಕೊಳ್ಳಲು ಬಯಸಿದ ಕಾರಣ, ಕಲಿಯನ್ ನಮ್ಪಿಳ್ಳೈಯಾಗಿ ಹಾಗು ಎಂಪೆರುಮಾನ್ ಪೆರಿಯವಾಚ್ಚಾನ್ ಪಿಳ್ಳೈಯಾಗಿ ಅವತರಿಸಿ, ನಮ್ಪಿಳ್ಳೈಯಿಂದ ಅರುಳಿಚ್ಚೆಯಲ್ ಅರ್ಥಗಳನ್ನು ತಿಳಿದುಕೊಂಡರು.

ನನ್ಜೀಯರ್ ತಮ್ಮ ೯೦೦೦ಪಡಿ ವ್ಯಾಖ್ಯಾನದ ಅನುಕರಣೆ ಮಾಡಲು ಶ್ರೀ ವೈಷ್ಣವರಲ್ಲಿ ವಿಚಾರಿಸಿದಾಗ, ನಮ್ಬೂರ್ ವರದರಾಜನ್ ಅವರನ್ನು ಪ್ರಸ್ತಾಪಿಸಲಾಯಿತು. ವರದರಾಜನ್ ವ್ಯಾಖ್ಯಾನವನ್ನು ನಮ್ಪಿಳ್ಳೈಯವರ ಇಚ್ಛೆಯಂತೆಯೇ ಅವರು ಸಂಪೂರ್ಣ ತೃಪ್ತಿಗೊಳ್ಳುವಂತೆ ಬರೆದು ಸಮರ್ಪಿಸುವುದಾಗಿ ತಿಳಿಸುತ್ತಾರೆ. ನನ್ಜೀಯರ್ ವರದರಾಜನಿಗೆ ಇಡೀ ೯೦೦೦ ಪಡಿಯ ಕಾಲಕ್ಷೇಪವನ್ನು ನೀಡಿ,ನಂತರ ಅವರಿಗೆ ೯೦೦೦ಪಡಿಯ ಮೂಲ ಅನುಕರಣವನ್ನು ಕೊಟ್ಟರು.ನಮ್ಪಿಳ್ಳೈ ಕಾವೇರಿ ದಾಟಿ ತಮ್ಮ ಸ್ಥಳೀಯ ಊರಿಗೆ ಹೋಗಿ,ಅಲ್ಲಿ ವ್ಯಾಖ್ಯಾನದ ಮೇಲೆ ಪೂರ್ತಿ ಗಮನವನ್ನು ಸಲ್ಲಿಸಿ ಆದಷ್ಟು ತ್ವರಿತವಾಗಿ ಬರೆದು ಸಮರ್ಪಿಸಬೇಕೆಂದು ತೊಡಗಿದರು. ಕಾವೇರಿಯನ್ನು ದಾಟುವಾಗ,ಇದ್ದಿಕ್ಕಿದ್ದಂತೆ ಪ್ರವಾಹ ಶುರುವಾಯಿತು. ವರದರಾಜನ್ ಪ್ರವಾಹದಲ್ಲಿ ಈಜುವಾಗ ಮೂಲ ಗ್ರಂಥವು ಕೈಜಾರಿ ಕಳೆದು ಹೋಯಿತು. ವರದರಾಜನ್ ಅತಿ ದುಃಖವನ್ನು ಅನುಭವಿಸಿದರು. ಊರನ್ನು ತಲುಪಿದ ನಂತರ ತಮ್ಮ ಆಚಾರ್ಯರನ್ನು ಮತ್ತು ಅವರು ಕೊಟ್ಟ ಅರ್ಥಗಳನ್ನು ಧ್ಯಾನಿಸಿ ,೯೦೦೦ಪಡಿ ವ್ಯಾಖ್ಯಾನವನ್ನು ಪುನಃ ಬರೆಯಲು ಪ್ರಾರಂಭಿಸಿದರು.ಅವರು ತಮಿಳು ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ನಿಪುಣರಾದ ಕಾರಣ, ಅಲ್ಲಲ್ಲಿ ತಕ್ಕಂತೆ ಅದ್ಭುತವಾಗಿ ಅರ್ಥಗಳನ್ನು ಬರೆದು ಹಿಂದಿರುಗಿ, ನಂಜೀಯರಿಗೆ ಸಮರ್ಪಿಸಿದರು.ವ್ಯಾಖ್ಯಾನವನ್ನು ಓದಿದ ನಂಜೀಯರ್ ಅದರಲ್ಲಿ ಮೂಲ ಗ್ರಂಥದಲ್ಲಿ ಇಲ್ಲದ ಕೆಲವು ಬದಲಾವಣೆಗಳನ್ನು ಗಮನಿಸಿ,ವಿಚಾರಿಸಿದಾಗ,ವರದರಾಜನ್ ನಡೆದ ಎಲ್ಲಾ ಘಟನೆಯನ್ನು ವಿವರಿಸಿದರು.ಆಗ ನಾಂಜೀಯರ್ ಬಹಳ ತೃಪ್ತಿ ಪಟ್ಟು ವರದರಾಜನ್ ಅವರ ವೈಭವವನ್ನು ಪ್ರಶಂಸಿಸಿ ಅವರಿಗೆ ‘ನಮ್ಪಿಳ್ಳೈ’ ಮತ್ತು ‘ತಿರುಕ್ಕಲಿಕಂಡ್ರಿ ದಾಸರ’ ಎಂದು ಹೆಸರುಗಳನ್ನು ಮುಡಿಸಿದರು.

ಭಟ್ಟರ – ನಂಜೀಯರ ಸಂಬಂಧ ಮತ್ತು ಸಂಭಾಷಣೆಯಂತೆಯೇ ನಂಜೀಯರ್– ನಮ್ಪಿಳ್ಳೈ ಸಂಬಂಧ ಮತ್ತು ಸಂಭಾಷಣೆ ಕೂಡ ಆಹ್ಲಾದಿಸಬಹುದಾದ ಅತ್ಯುತ್ತಮವಾದ ಅರ್ಥಗಳೊಂದಿಗೆ ಕೂಡಿ ಇರುತ್ತಿದ್ದೆವು.ಅಂತಹ ಕೆಲವು ಸಂಭಾಷಣೆಗಳನ್ನು ಈಗ ನೋಡೋಣ:

• ಉಪಾಯಾಂತರಗಳಿಗೆ ಅನೇಕ ಪ್ರಮಾಣಗಳು ಇರುವಾಗ,ಶರಣಾಗತಿಗೆ ಅಷ್ಟೊಂದು ಪ್ರಮಾಣಗಳು ಇಲ್ಲದಿರುವುದಕ್ಕೆ ಏನು ಕಾರಣ ಎಂದು ನನ್ಜೀಯರ್ ನಮ್ಪಿಳ್ಳೈಯನ್ನು ಕೇಳಿದಾಗ,ನಮ್ಪಿಳ್ಳೈ ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ಸಾಧ್ಯವಾಗಿರುವ ವಿಷಯಗಳಿಗೆ ಪ್ರಮಾಣಗಳ ಅವಶ್ಯಕತೆ ಇಲ್ಲ ಎಂದು ಹೇಳಿ,ಒಂದು ಉದಾಹರಣೆ ಕೊಡುತ್ತಾರೆ.ಒಬ್ಬನು ನದಿಯಲ್ಲಿ ಮುಳುಗುತ್ತಿರುವ ಸಮಯ ಮುಳುಗದೇ ಇರುವ ,ಕಾಪಾಡುವ ವ್ಯಕ್ತಿಗೆ ಶರಣನಾಗುತ್ತಾನೆ.ಸಂಸಾರ ಸಾಗರದಲ್ಲಿ ಮುಳುಗುತ್ತಿರುವ ನಮಗೆ ಸಂಸಾರ ಸಂಬಂಧವೇ ಇಲ್ಲದಿರುವ ಎಂಪೆರುಮಾನ್ ಮಾತ್ರವೇ ತಕ್ಕ ಉಪಾಯ ಎಂದು ಹೇಳಿ,ನಂತರ ಕೆಲವು ಪ್ರಮಾಣಗಳನ್ನು ಕೂಡ ಗುರುತಿಸಿ,ಶರಣಾಗತಿಯ ಸಿಂಧುತ್ವವನ್ನು ತೋರಿಸುತ್ತಾರೆ. ಒಂದು ಪ್ರತಿಕ್ರಿಯೆಯ ಸಿಂದುತ್ವವನ್ನು ಪ್ರಮಾಣಗಳ ಸಂಖ್ಯೆಗಳ(ಹೆಚ್ಚು ಅಥವಾ ಕಡಮೆ ) ಆಧಾರಿತ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.ಉದಾಹರಣೆಗೆ, ಈ ಜಗತ್ತಿನಲ್ಲಿ ಸಂಸಾರಿಗಳು ಅನೇಕ ,ಸನ್ಯಾಸಿಗಳು ಕೇವಲ. ಆದುದರಿಂದ, ಸಂಸಾರಿಗಳಾಗಿರುವುದೇ ಉತ್ತಮ ಎಂದು ಹೇಳಲು ಆಗುವುದಿಲ್ಲ ಎಂದು ನಮ್ಪಿಳ್ಳೈ ವಿವರಿಸಿದಾಗ, ನನ್ಜೀಯರ್ ಬಹಳ ತೃಪ್ತಿ ಪಟ್ಟರು.

• ಒಬ್ಬನಿಗೆ ತನ್ನಲ್ಲಿರುವ ಶ್ರೀ ವೈಷ್ಣವತ್ವವನ್ನು ಯಾವಾಗ ಅರಿಯುವನು ಎಂದು ನಮ್ಪಿಳ್ಳೈ ನನ್ಜೀಯರನ್ನು ಕೇಳುತ್ತಾರೆ.ಆಗ ನನ್ಜೀಯರ್ ಹೇಳುತ್ತಾರೆ, ಅರ್ಚಾವತಾರದಲ್ಲಿ ಪರತ್ವವನ್ನು ಕಾಣುವವರು, ಇತರ ಶ್ರೀವೈಷ್ಣವರ ಮೇಲೆ ತನ್ನ ಕುಟುಂಬದವರ ಮೇಲೆ ತೋರಿಸುವ ಅದೇ ಅಭಿಮಾನವನ್ನು ತೋರಿಸುವವರು ಹಾಗು ತನ್ನನ್ನು ಇತರ ಶ್ರೀವೈಷ್ಣವರು ನಿಂದಿಸಿದರು ಕೂಡ ಅವರನ್ನು ಸಂತೋಷದಿಂದ ಸ್ವೀಕರಿಸುವವರೇ ಶ್ರೀ ವೈಷ್ಣವತ್ವವನ್ನು ತಮ್ಮಲಿ ಅರಿಯುತ್ತಾರೆ .

• ನಮ್ಪಿಳ್ಳೈ ನನ್ಜೀಯರಿಂದ ಶ್ರೀ ಭಾಷ್ಯಂ ಕಲಿಯುತ್ತಿದ್ದ ಸಮಯ, ನನ್ಜೀಯರ್ ನಮ್ಪಿಳ್ಳೈಯನ್ನು ಅವರ ಎಂಪೆರುಮಾನಿಗೆ ತಿರುವಾರಾಧನೆ ಮಾಡಲು ಹೇಳಿದರು.ಆಗ, ನಮ್ಪಿಳ್ಳೈ ತಿರುವಾರಾಧನೆ ಸರಿಯಾಗಿ ಮಾಡಲು ಗೊತ್ತಿಲ್ಲವೆಂದು ಹೇಳಿದರು.ಆಗ ನನ್ಜೀಯರ್ ನಮ್ಪಿಳ್ಳೈಯನ್ನು ದ್ವಯ ಮಹಾ ಮಂತ್ರವನ್ನು ಪಠಿಸಲು( ದ್ವಯ ಮಂತ್ರದ ಪೂರ್ವ ಭಾಗ ಮತ್ತು ಉತ್ತರ ಭಾಗದ ನಡುವೆ “ಸರ್ವ ಮಂಗಳ ವಿಗ್ರಹಾಯ”)ಎಂದು ಹೇಳಿ ಎಂಪರುಮಾನ್ ಎಲ್ಲೆಲ್ಲೂ ಅರ್ಚಾ ರೂಪದಲ್ಲಿ ಇದ್ದಾನೆಂದು ಅವನ ಸೌಲಭ್ಯವನ್ನು ಪ್ರಶಂಸಿಸಿ ಅವನಿಗೆ ಭೋಗವನ್ನು ಸಮರ್ಪಿಸಲು ಹೇಳುತ್ತಾರೆ.ನಮ್ಮ ಪೂರ್ವಾಚಾರ್ಯರು ಎಲ್ಲದಿಕ್ಕೂ ದ್ವಯ ಮಹಾ ಮಂತ್ರದ ಮೇಲೆ ಸಂಪೂರ್ಣವಾಗಿ ಪರಾಧೀನರಾಗಿದ್ದರು ಎಂದು ಸ್ಪಷ್ಟವಾಗಿ ಕಾಣಬಹುದು.

• “ಎಂಪೆರುಮಾನಿನ ಅವತಾರಗಳಿಗೆ ಕಾರಣವೇನು?” ಎಂದು ನಮ್ಪಿಳ್ಳೈ ನನ್ಜೀಯರನ್ನು ಕೇಳಿದಾಗ, ತನ್ನ ಭಕ್ತರಿಗೆ ಅಪಚಾರವನ್ನು ಮಾಡುವವರಿಗೆ ತಕ್ಕ ಶಿಕ್ಷೆ ಕೊಡುವುದನ್ನು ಖಚಿತ ಪಡಿಸಲು ಎಂಪೆರುಮಾನ್ ಆ ದೊಡ್ಡ ಕಾರ್ಯವನ್ನು ಕೈಗೊಂಡನು. ಉದಾಹರಣೆಗಾಗಿ, ಕಣ್ಣನ್ ಎಂಪೆರುಮಾನ್ ಅತಿ ನೋವು ಅನುಭವಿಸಿ, ತನ್ನ ಭಕ್ತರಲ್ಲಿ ಅನೇಕ ಅಪಚಾರಗಳನ್ನು ಮಾಡಿದ ದುರ್ಯೋಧನನು ಅಂತಿಮವಾಗಿ ಮರಣ ಹೊಂದುವಂತೆ ಮಾಡಿದನು ಎಂದು ನನ್ಜೀಯರ್ ಹೇಳಿದರು.

• “ಭಾಗವತ ಅಪಚಾರ ಎಂದರೇನು?” ಎಂದು ನಮ್ಪಿಳ್ಳೈ ನನ್ಜೀಯರನ್ನು ಕೇಳಿದಾಗ ನನ್ಜೀಯರ್ ನಾವು ಶ್ರೀವೈಷ್ಣವರನ್ನು ಅವರ ಜನನ ಹಾಗು ಜ್ಞಾನವನ್ನು ಪರಿಗಣಿಸದೆ, ನಮಗಿಂತಲೂ ಹೆಚ್ಚಾಗಿ ಭಾವಿಸಬೇಕು ಭಾಗವತರ ಶ್ರೇಷ್ಟತೆಯನ್ನು ಆ‌‌ழ்ವಾರ್ ಹಲವಾರು ಪಾಸುರಗಳಲ್ಲಿ ಹೇಳಿರುವುದನ್ನು ನನ್ಜೀಯರ್ ಉಲ್ಲೇಖಿಸಿ, ಅವುಗಳನ್ನು ಆಧಾರವಾಗಿಟ್ಟುಕೊಂಡು ಆಳ್ವಾರರು ಪೂರ್ವಾಚಾರ್ಯಾರ ಹಾಗೆ ನಾವು ಕೂಡ ಭಾಗವತರನ್ನು ಸದಾ ಹೊಗಳಬೇಕು ಎಂದು ಹೇಳುತ್ತಾರೆ.

• ಭಗವತ್ ವಿಷಯ ಅನುಭವದಲ್ಲಿ ಮುಳುಗಿರುವವರು ಬೇರೆ ಲೌಕಿಕ ವಿಷಯ ಅನುಭವಗಳಾದ ಐಶ್ವರ್ಯ ಅರ್ಥ ಕಾಮ, ಇತ್ಯಾದಿಗಳನ್ನುಸಂಪೂರ್ಣವಾಗಿ ತ್ಯಜಿಸಬೇಕು ಎಂದು ನನ್ಜೀಯರ್ ಆழ்ವಾರಿನ ಹಲವಾರು ಪಾಸುರಗಳನ್ನು ಉಪಯೋಗಿಸಿ ನಮ್ಪಿಳ್ಳೈ ಗೆ ವಿವರಿಸುತ್ತಾರೆ. ತಿರುಮಂಗೈ ಆಳ್ವಾರ್ ಹೇಗೆ ಎಂಪೆರುಮಾನಿನ ವೈಭವವನ್ನು ಅರಿತ ತಕ್ಷಣವೇ ಎಲ್ಲಾ ಲಗತ್ತನ್ನ
ತ್ಯಜಿಸಿ ಕೂಡಲೇ “ವಾಡಿನೇನ್ ವಾಡಿ …. ನಾರಾಯಣ ಎನ್ನುಮ್ ನಾಮಂ” ಎನ್ನುವ ಪ್ರಬಂಧವನ್ನು ರಚಿಸಲು ತೊಡಗಿದರು ಎಂದು ಹೇಳುತ್ತಾರೆ.ಇದನ್ನು ಕೇಳಿ ನಮ್ಪಿಳ್ಳೈ ಬಹಳ ಸಂತೋಷ ಪಟ್ಟರು.ಅದಾದಮೇಲೆ ,ಅವರು ಸದಾ ನನ್ಜೀಯರೊಂದಿಗೆ ಇದ್ದುಕೊಂಡು ಅವರ ಕಾಲಕ್ಷೇಪಗಳ ಮೂಲಕ ಪೂರ್ವಾಚಾರ್ಯರ ಅರ್ಥಗಳನ್ನು ಕಲಿತುಕೊಂಡರು.

• ನನ್ಜೀಯರ್ ಅವರು ೧೦೦ ಬಾರಿ ತಿರುವಾಯ್ಮೊಳಿ ಕಾಲಕ್ಷೇಪ ಮಾಡಿದರು. ಆಗ ನಮ್ಪಿಳ್ಳೈ ನನ್ಜೀಯರಿಗೆ ಶತಾಭಿಷೇಕ ಮಹೋತ್ಸವವನ್ನು ನಡೆಸಿದರು.

ನಮ್ಪಿಳ್ಳೈಯವರು ಅನೇಕ ಅನನ್ಯ ಗುಣಗಳನ್ನು ಹೊಂದಿದ್ದರು .ಅವರ ಶ್ರೇಷ್ಠತೆ ಅಗಾಧ. ಅವರು ತಮಿಳು ಮತ್ತು ಸಂಸ್ಕೃತ ಭಾಷೆಗಳು ಮತ್ತು ಸಾಹಿತ್ಯದ ಮೇಲೆ ಅದ್ಭುತವಾದ ಆಜ್ಞೆ ಹೊಂದಿದ್ದರು. ಅವರ ಉಪನ್ಯಾಸಗಳಲ್ಲಿ ತಿರುಕ್ಕುರಳ್,ನನ್ನೂಲ್,ಕಂಬ ರಾಮಾಯಣ,ವೇದಾಂತ, ವಿಷ್ಣು ಪುರಾಣ,ವಾಲ್ಮೀಕಿ ರಾಮಾಯಣ ಇತ್ಯಾದಿಗಳನ್ನು ಕೂಡ ಮುಕ್ತವಾಗಿ ಉಲ್ಲೇಖಿಸುತ್ತದ್ದರು.

ಜನರಿಗೆ ಆಳ್ವಾರ್ ಅರುಳಿಚೆಯಲ್ಗಳ ಬಗ್ಗೆ ಯಾವುದಾದರೂ ಸಂಶಯ ಉಂಟಾದರೆ, ನಮ್ಪಿಳ್ಳೈ ಅವರಿಗೆ,ವಾಲ್ಮೀಕಿ ರಾಮಾಯಣದಿಂದ ತೃಪ್ತಿಕರವಾದ ತರ್ಕ ನೀಡಿ ಸಂಶಯಗಳನ್ನುತೀರಿಸುತಿದ್ದರು,ಕಾರಣ, ವಾಲ್ಮೀಕಿ ರಾಮಾಯಣವನ್ನು ಸಾರ್ವತ್ರಿಕವಾಗಿ ವೈದಿಕರು ಸ್ವೀಕರಿಸಿದ್ದಾರೆ.
ನಮ್ಪಿಳ್ಳೈ ಅವರ ಶ್ರೇಷ್ಠತೆ ಮತ್ತು ನಮ್ರತೆಯನ್ನು ತಿಳಿದುಕೊಳ್ಳಲು ಕೆಲವು ಘಟನೆಗಳನ್ನು ನೋಡೋಣ.

• ‘ಪೆರಿಯ ಕೋಯಿಲ್ ‘ ಇನ ಮುಖ್ಯ. ಗರ್ಭಗುಡಿಯ ಪ್ರದಕ್ಷಿಣದ ಪೂರ್ವ ಭಾಗದಲ್ಲಿ( ಪೆರಿಯ ಪೆರುಮಾಳ್ ತಿರುವಡಿ ದಿಕ್ಕು) ನಮ್ಪಿಳ್ಳೈ ಉಪನ್ಯಾಸ ನಡೆಸುತ್ತಿದ್ದರು.ಉಪನ್ಯಾಸವನ್ನು ಕೇಳಲು,ಶಯನದಲ್ಲಿದ್ದ ಪೆರಿಯ ಪೆರುಮಾಳ್ ಎದ್ದು ನಿಂತರು! ಪೆರಿಯ ಪೆರುಮಾಳ್ ಸನ್ನಿಧಿಯಲ್ಲಿ ದೀಪ ಕೈಂಕರ್ಯವನ್ನು ಮಾಡುತಿದ್ದ ತಿರುವಿಳಕ್ಕುಪಿಚ್ಚನ್ ಎನ್ನುವ ಶ್ರೀವೈಷ್ಣರು ಪೆರುಮಾಳ್ ನಿಂತಿದನ್ನು ನೋಡಿ,ಅವರನ್ನು “ಅರ್ಚಾವತಾರದಲ್ಲಿ ನೀವು ಜರುಗಬಾರದು!” ಎಂದು ಹೇಳಿ ಪುನಃ ಶಯನಾಂಗ ವಿನ್ಯಾಸಕ್ಕೆ ನೂಕಿದರು! ಪೆರುಮಾಳ್ ತನ್ನ ಅರ್ಚಾಸಮಾಧಿಯನ್ನು ಕೂಡ ಒಡೆದು ಬಂದು ನಮ್ಪಿಳ್ಳೈ ಅವರ ಉಪನ್ಯಾಸವನ್ನು ಕೇಳಿದರು ಎಂದು ಚರಿತ್ರ.

• ನಮ್ಪಿಳ್ಳೈ ಅವರ ಉಪನ್ಯಾಸಗಳು ಎಷ್ಟು ಪ್ರಸಿದ್ಧವಾದವು ಎಂದರೆ, ಎಲ್ಲರೂ “ಇದು ನಂಪೆರುಮಾಳ್ ಘೋಷ್ಟಿಯೋ ಅಥವಾ ನಮ್ಪಿಳ್ಳೈ ಘೋಷ್ಠಿಯೋ ?!” ಎಂದು ಕೇಳುತ್ತಿದ್ದರು.ಏಕೆಂದರೆ, ನಂಪೆರುಮಾಳ್ ಭಕ್ತರನ್ನು ತನ್ನ ಉತ್ಸವಕ್ಕೆ ಆಕರ್ಷಿಸುವಂತೆ, ನಮ್ಪಿಳ್ಳೈ ತಮ್ಮ ಉಪನ್ಯಾಸಗಳಿಂದ ಜನರನ್ನು ಆಕರ್ಷಿಸುತ್ತಿದ್ದರು.

• ನಮ್ಪಿಳ್ಳೈ ಅವರ ನಮ್ರತೆಗೆ ಸಾಟಿಯಿಲ್ಲ. ನನ್ಜೀಯರ್ ಅವರಿಂದ ಕಲಿತ ಶ್ರೀವೈಷ್ಣವತ್ವದ ಉದಾಹರಣೆಯಾಗಿ ಬಾಳಿ ತೋರಿಸಿದರು ನಮ್ಪಿಳ್ಳೈ.
ಒಂದು ಬಾರಿ, ಮುದಲಿಯಾನ್ಡಾನ್ ಪರಂಪರೆಯಲ್ಲಿ ಬಂದ ಕಂದಾಡೈ ತೊಳಪ್ಪನ್ ನಮ್ಪಿಳ್ಳೈಯನ್ನು ಕಠಿಣವಾಗಿ ಮಾತನಾಡಿದರು. ನಮ್ಪಿಳ್ಳೈಯವರ ಶ್ರೇಷ್ಟತೆಯನ್ನು ಪ್ರಶಂಸಿಸಲಾರದೇ ಕಠಿಣ ವಾಕ್ಯಗಳನ್ನು ಹೊರಪಡಿಸಿದರು. ನಮ್ಪಿಳ್ಳೈ ಏನೂ ಹೇಳದೆ,ಅವಮಾನವನ್ನು ಸಹಿಸಿಕೊಂಡು ದೇವಸ್ಥಾನದಿಂದ ತಮ್ಮ ತಿರುಮಾಳಿಗೈಗೆ ಹಿಂದಿರುಗಿದರು. ತೋಳಪ್ಪರ್ ತಿರುಮಾಳಿಗೈಗೆ ಹೋದಾಗ, ಈ ವಿಷಯವನ್ನು ಆಗಲೇ ಜನರಿಂದ ಕೇಳಿದ ತೋಳಪ್ಪರ ಪತ್ನಿ ಅವರ ನಡವಳಿಕೆಯ ಬಗ್ಗೆ ಬಲವಾದ ಸಲಹೆಯನ್ನು ಕೊಟ್ಟು ನಮ್ಪಿಳ್ಳೈ ಅವರ ವೈಭವವನ್ನು ಹೇಳಿದರು. ನಮ್ಪಿಳ್ಳೈಯವರ ದಿವ್ಯ ಪಾದಗಳಿಗೆ ಬಿದ್ದು ಕ್ಷಮಾಪಣೆ ಕೇಳಿಕೊಳ್ಳಲು ಪತಿಯನ್ನು ನಿರ್ಬಂಧಿಸಿತು.ಕೊನೆಯಲ್ಲಿ, ತೋಳಪ್ಪರ್ ತನ್ನ ತಪ್ಪನ್ನು ತಿದ್ದಿಕೊಂಡು ಮಧ್ಯ ರಾತ್ರಿ ನಮ್ಪಿಳ್ಳೈಯವರ ತಿರುಮಾಳಿಗೈಗೆ ಹೋಗಲು ನಿರ್ಧರಿಸಿದರು. ಹೊರಡಲು ಬಾಗಿಲನ್ನು ತೆಗೆದಾಗ, ಮನೆಯ ಮುಂದೆ ಒಬ್ಬ ವ್ಯಕ್ತಿ ನಿಂತಿದ್ದರು.ಅದು ಬೇರಾರೂ ಅಲ್ಲ. ನಮ್ಪಿಳ್ಳೈ ತಾನೇ ತೋಳಪ್ಪರ ಮನೆಯ ಮುಂದೆ ನಿಂತಿದ್ದರು. ತೋಳಪ್ಪರನ್ನು ನೋಡಿದ ತಕ್ಷಣವೇ ನಮ್ಪಿಳ್ಳೈ ತೋಳಪ್ಪರ ಚರಣಗಳಿಗೆ ಬಿದ್ದು ತಾನು ಏನೋ ತಪ್ಪು ಮಾಡಿರುವ ಕಾರಣವೇ ,ತೋಳಪ್ಪರ ಮನಸ್ಸನ್ನು ನೊಂದಿಸಿದೆ ಎಂದು ಹೇಳಿದರು! , ನಮ್ಪಿಳ್ಳೈಯವರ ಶ್ರೇಷ್ಟತೆಯನ್ನು ನೋಡಿ ತೋಳಪ್ಪರ್ ಆಶ್ಚರ್ಯಗೊಂಡರು . ತಪ್ಪು ತೋಳಪ್ಪರದಾಗಿದ್ದರು ಕೂಡ, ನಮ್ಪಿಳ್ಳೈ ದೊಡ್ಡಸ್ತಿಕೆಯಿಂದ ಅಪವಾದವನ್ನು ತನ್ನ ಮೇಲೆ ಹೊರಿಸಿಕೊಂಡು ತೋಳಪ್ಪರನ್ನು ಕ್ಷಮೆ ಕೇಳಿಕೊಂಡರು.ತಕ್ಷಣವೇ ತೋಳಪ್ಪರು ನಮ್ಪಿಳ್ಳೈಯವರನ್ನು ನಮಸ್ಕರಿಸಿ, ಅವರಿಗೆ ‘ಲೋಕಾಚಾರ್ಯ’ ಎಂದು ಹೆಸರು ಮುಡಿಸಿದರು. ಒಂದು ಮಹಾನುಭಾವರು ಇಂತಹ ನಮ್ರತೆಯಿಂದ ಇರುವ ಕಾರಣ,ಲೋಕಾಚಾರ್ಯ ಎನ್ನುವ ಹೆಸರಿಗೆ ತಕ್ಕವರು ಎಂದು ಹೇಳಿದರು. ತೋಳಪ್ಪರ್ ನಮ್ಪಿಳ್ಳೈಯ ಬಳಿ ಇದ್ದ ದ್ವೇಷವನ್ನು ಬಿಟ್ಟು, ತನ್ನ ಪತ್ನಿಯೊಂದಿಗೆ ನಮ್ಪಿಳ್ಳೈಯವರ ಸೇವೆಯನ್ನು ಮಾಡಿಕೊಂಡು ಅವರಿಂದ ಶಾಸ್ತ್ರಗಳನ್ನು ಕಲಿತರು.
ಮಾಮುನಿಗಳು ಉಪದೇಶ ರತ್ತಿನಮಾಲೈನಲ್ಲಿ ಈ ಘಟನೆಯನ್ನು ಉಲ್ಲೇಖಿಸಿ, ನಮ್ಪಿಳ್ಳೈ ಮತ್ತು ತೋಳಪ್ಪರ ಶ್ರೇಷ್ಟತೆಯನ್ನು ವೈಭವೀಕರಿಸುತ್ತಾರೆ. ಇದರಿಂದ ನಮ್ಪಿಳ್ಳೈಯವರ ಪವಿತ್ರತೆಯನ್ನು ನಾವು ತಿಳಿದುಕೊಳ್ಳಬಹುದು. ನಮ್ಪಿಳ್ಳೈಯವರ ಸತ್ಸಂಗದಿಂದ ತೋಳಪ್ಪರ್ ಕೂಡ ಪವಿತ್ರವಾದರು.

• ಭಟ್ಟರ ತಿರುವಂಶದಿಂದ ಬಂದ ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್ ನಮ್ಪಿಳ್ಳೈಯ ವೈಭವವನ್ನು ಕಂಡು ಅಸೂಯೆ ಪಟ್ಟರು.ಒಂದು ದಿನ ಭಟ್ಟರು ರಾಜನ ಆಸ್ಥಾನಕ್ಕೆ ಪಿನ್ಬಳಗಿಯ ಜೀಯರನ್ನು ಆಹ್ವಾನಿಸಿ ಕರೆದುಕೊಂಡು ಹೋದರು.ರಾಜ ಇಬ್ಬರನ್ನೂ ಆಹ್ವಾನಿಸಿ,ಅವರಿಗೆ ಸಂಭಾವನೆಯನ್ನು ಕೊಟ್ಟು, ಅವರಿಗೆ ಒಳ್ಳೆಯ ಆಸನಗಳನ್ನು ಕೊಟ್ಟರು. ಭಟ್ಟರನ್ನು ರಾಜ ಶ್ರೀ ರಾಮಾಯಣದಿಂದ ಪ್ರಶ್ನೆ ಕೇಳಿದರು. ಪೆರುಮಾಳ್ ತನ್ನ ಪರಥ್ವವನ್ನು ಹೊರಪಡಿಸುವುದಿಲ್ಲ ಎಂದು ರಾಮಾಯಣದಲ್ಲಿ ಘೋಷಿಸಿದಾಗ, ಜತಾಯುಗೆ ಹೇಗೆ ಹೇಳಿದರು?(ಗಚ್ಚ ಲೋಕಾನ್ ಉತ್ತಮಾನ್) (ಎಲ್ಲದಿಕ್ಕಿಂತಲೂ ಎತ್ತರವಾದ ಪರಮಪದಕ್ಕೆ(?) ಹೋಗು) ಭಟ್ಟರಿಗೆ ಉತ್ತರ ತಿಳಿಯದೆ ,ತನ್ನ ಗೌರವದ ಬಗ್ಗೆ ಚಿಂತಿಸಿದಾಗ,ರಾಜನ ಗಮನ ಬೇರೆ ಕಡೆಗೆ ಹೋಯಿತು.ಆಗ, ಭಟ್ಟರ್, ಪಿನ್ಬಳಗಿಯ ಜೀಯರನ್ನು ಈ ಪ್ರಶ್ನೆಗೆ ನಮ್ಪಿಳ್ಳೈ ಏನು ಉತ್ತರ ಕೊಡುತ್ತಿದ್ದರು ಎಂದು ಕೇಳಿದಾಗ ಜೀಯರ್ ತಕ್ಷಣವೇ “ಸತ್ಯೇನ ಲೊಕಾನ್ ಜಯತಿ “(ಒಬ್ಬ ಪ್ರಾಮಾಣಿಕ ಎಲ್ಲಾ ಜಗತುಗಳನ್ನು ಜಯಿಸುತ್ತಾನೆ )ಎಂದು ನಮ್ಪಿಳ್ಳೈ ಉತ್ತರಿಸುತ್ತಿದ್ದರು ಎಂದು ಹೇಳಿದರು. ಭಟ್ಟರ್ ಈ ಶ್ಲೋಕವನ್ನು ಧ್ಯಾನಿಸಿ ಅದನ್ನು ಅರ್ಥ ಮಾಡಿಕೊಂಡು “ರಾಮನು ತನ್ನ ಪ್ರಾಮಾಣಿಕ ಗುಣದ ಕಾರಣದಿಂದ ,ಸತ್ಯಪರತೆಯ ಬಲದಿಂದ ಯಾರನ್ನೂ ಎಲ್ಲಿ ಬೇಕಿದ್ದರೂ ಸಂಕಲ್ಪಿಸಿ ಕಳುಹಿಸಬಲ್ಲನು”ಎಂದು ರಾಜನಿಗೆ ವಿವರಿಸುತ್ತಾರೆ. ರಾಜನು ಅತಿ ತೃಪ್ತಿ ಪಟ್ಟು ,ಭಟ್ಟರ ಜ್ಞಾನವನ್ನು ಪ್ರಶಂಸಿಸಿ,ಅವರಿಗೆ ಬೃಹತ್ತಾದ ಐಶ್ವರ್ಯವನ್ನು ಕೊಟ್ಟರು.

ಭಟ್ಟರ್ ತಕ್ಷಣವೇ ನಮ್ಪಿಳ್ಳೈಯವರ ಈ ಒಂದು ವಾಕ್ಯದ ಬಲವನ್ನು ಅರಿತು, ಕೂಡಲೇ ತನಗೆ ದೊರಕಿದ ಐಶ್ವರ್ಯವನ್ನು ತೆಗೆದುಕೊಂಡು ಹೋಗಿ ನಮ್ಪಿಳ್ಳೈಯವರ ದೈವಿಕ ಪಾದಗಳಲ್ಲಿ ಸಮರ್ಪಿಸಿ, ಶರಣಾಗತಿ ಮಾಡಿ,ಅವರಿಗೆ ಸದಾ ಕಾಲ ಸೇವೆ ಮಾಡಿದರು.

• ಒಂದು ಬಾರಿ,ನಮ್ಪಿಳ್ಳೈ ತಮ್ಮ ಶಿಷ್ಯರೊಂದಿಗೆ ದೋಣಿಯಲ್ಲಿ ತಿರುವೆಳ್ಳರೈಯಿಂದ ಹಿಂದಿರುಗುತ್ತಿದ್ದರು.ಆಗ,ಕಾವೇರಿ ಜೋರಾಗಿ ಹರಿಯಲು ಪ್ರಾರಂಭಿಸಿತು. ದೋಣಿಯನ್ನು ಸಾಗುತ್ತಿದ್ದ ವ್ಯಕ್ತಿ ಶಿಷ್ಯರಲ್ಲಿ ಒಬ್ಬರು ನದಿಗೆ ದುಮುಕಿ ದೋಣಿಯ ಸಮತೋಲನವನ್ನು ಯಾರ್ಪಡಿಸಿ , ನಮ್ಪಿಳ್ಳೈ ಯವರನ್ನು ಕಾಪಾಡಲು ವಿನಂತಿಸಿಕೊಂಡರು.ಆಗ, ಒಂದು ವೃದ್ಧ ಸ್ತ್ರೀ ತಕ್ಷಣವೇ ನೀರಿಗೆ ದುಮುಕಿದಳು. ನಮ್ಪಿಳ್ಳೈ ದುಃಖ ಪಟ್ಟರು. ನದಿಯನ್ನು ದಾಟಿದ ಮೇಲೆ,ಆ ಸ್ತ್ರೀಯ ಧ್ವನಿ ಕೇಳಿಸಿತು. ಸ್ತ್ರೀ ನಮ್ಪಿಳ್ಳೈ ಅವಳ ಮುಂದೆ ಪ್ರತ್ಯಕ್ಷವಾಗಿ ಅವಳನ್ನು ರಕ್ಷಿಸಿದರು ಎಂದು ಹೇಳಿದಳು. ಇದರಿಂದ, ಒಂದು ಶಿಷ್ಯ ತನ್ನ ಆಚಾರ್ಯರಿಗೆ ಜೀವ ಕೂಡ ಕೊಡಲು ತಯ್ಯಾರಾಗಿರಬೇಕು ಎಂದು ಸ್ತ್ರೀ ನಮಗೆ ತೋರಿಸಿದಳು.ಹಾಗೂ, ನಮ್ಪಿಳ್ಳೈ ಆಚಾರ್ಯ ತನ್ನ ಶಿಷ್ಯರನ್ನು ಭೀಕರ ಪರಿಸ್ಥಿತಿಯಲ್ಲಿ ಕೂಡ ರಕ್ಷಿಸುತ್ತಾರೆ ಎಂದು ತೋರಿಸಿದರು.

• ನಮ್ಪಿಳ್ಳೈಯ ತಿರುಮಾಳಿಗೈಯ ಪಕ್ಕದಲ್ಲಿದ್ದ ಗೃಹದ ಶ್ರೀವೈಷ್ಣವ ಸ್ತ್ರೀಯನ್ನು ಒಂದು ಶ್ರೀವೈಷ್ಣವ ಸಮೀಪಿಸಿ,ಅವಳ ಗೃಹವನ್ನು ನಮ್ಪಿಳ್ಳೈಗೆ ದಾನ ಮಾಡಿದರೆ, ನಮ್ಪಿಳ್ಳೈಯ ತಿರುಮಾಳಿಗೈಯನ್ನು ವಿಸ್ತರಿಸಬಹುದು.ಅದು ದೊಡ್ಡ ಘೋಷ್ಟಿ ನಿರ್ವಹಿಸಲು ಉಪಯೋಗವಾಗುತ್ತದೆ ಎಂದು ಹೇಳಿದಾಗ, ಮೊದಲು ಆ ಮಹಿಳೆ ಒಪ್ಪಲಿಲ್ಲ.ಆದರೆ ನಮ್ಪಿಳ್ಳೈಯನ್ನು ಸಮೀಪಿಸಿ, ತನ್ನ ಗೃಹವನ್ನು ದಾನ ಮಾಡಿದರೆ, ನಮ್ಪಿಳ್ಳೈ ಅವಳಿಗೆ ಪರಮಪದವನ್ನು ಕೊಡಬೇಕೆಂದು ವಿನಂತಿಸಿದಳು. ನಮ್ಪಿಳ್ಳೈ ಸಂತೋಷವಾಗಿ ಅವಳಿಗೆ ಪರಮಪದ ಪ್ರಾಪ್ತಿ ಎಂದು ಬರೆದು ಕೊಟ್ಟರು.ಸ್ವಲ್ಪ ದಿನಗಳ ನಂತರವೇ ಆ ಮಹಿಳೆ ತನ್ನ ಚರಮ ಶರೀರವನ್ನು ಬಿಟ್ಟು ಪರಮಪದವನ್ನು ಸೇರಿದಳು.

• ನಮ್ಪಿಳ್ಳೈ ಗೆ ಎರಡು ಪತ್ನಿಯರು. ತನ್ನ ಬಗ್ಗೆ ಅವರಿಬ್ಬರಿಗೂ ಏನು ಅಭಿಪ್ರಾಯ ಎಂದು ನಮ್ಪಿಳ್ಳೈ ಕೇಳಿದಾಗ, ಮೊದಲನೇ ಪತ್ನಿ ಅವರನ್ನು “ಎಂಪೆರುಮಾನಿನ ಅವತಾರ ಎಂದು ಭಾವಿಸುತ್ತೇನೆ”ಎಂದು ಹೇಳಿದರು.ನಮ್ಪಿಳ್ಳೈ ಬಹಳ ತೃಪ್ತಿ ಪಟ್ಟು,ಮೊದಲನೇ ಪತ್ನಿಯನ್ನು ಶ್ರೀವೈಷ್ಣವರಿಗೆ ತದಿಯಾರಾಧನೆ ತಯ್ಯಾರಿಸಲು ಹೇಳಿದರು.ಎರಡನೆಯ ಪತ್ನಿ,” ನನ್ನ ಪ್ರೀತಿಯ ಪತಿ ಎಂದು ಭಾವಿಸುತ್ತೇನೆ”ಎಂದು ಹೇಳಿದಾಗ, ನಮ್ಪಿಳ್ಳೈ ಎರಡನೆಯ ಪತ್ನಿಯನ್ನು ಆ ಶ್ರೀವೈಷ್ಣವ ಉಚ್ಚಿಷ್ಟವನ್ನು ತೆಗೆದುಕೊಳ್ಳಲು ಹೇಳಿದರು.ಶ್ರೀವೈಷ್ಣವರ ಸೇಶವನ್ನು ತೆಗೆದುಕೊಂಡರೆ,ಅವಳನ್ನು ಶುದ್ಧೀಕರಿಸಿ,ಅವಳ ನಿಷ್ಟೈಯ ಮಟ್ಟನ್ನು ಆಧ್ಯಾತ್ಮಿಕತೆಯ ಬಳಿ ಹೆಚ್ಚಿಸುತ್ತದೆ ಎಂದು ಹೇಳಿದರು.

• ಮಹಾಭಶ್ಯ ಭಟ್ಟರು ನಮ್ಪಿಳ್ಳೈ ಅವರ ಚೈತನ್ಯಂ (ಜ್ಞಾನ) ಅರಿತುಕೊಂಡ ನಂತರ ಶ್ರೀವೈಷ್ಣವರ ಆಲೋಚನೆ ಹೇಗಿರಬೇಕು ಎಂದು ವಿಚಾರಿಸಿದರು. ಅಂತಹ ಶ್ರೀವೈಷ್ಣವರು ಯಾವಾಗಲೂ ಎಂಪೇರುಮಾನರನ್ನು ಉಪಾಯಮ್ ಮತ್ತು ಉಪೇಯಮ್ ಎಂದು ಭಾವಿಸಬೇಕೆಂದು,ಸಂಸಾರಂನ ಅನಾದಿ ರೋಗವನ್ನು ಗುಣಪಡಿಸಿದ ಅಚಾರ್ಯರಿಗೆ ಕೃತಜ್ಞರಾಗಿರಬೇಕು, ಶ್ರೀಭಾಷ್ಯಮ್ ಮೂಲಕ ಸ್ಥಾಪಿಸಲಾದ ಎಂಪೆರುಮಾನ್ ನ ಸಿದ್ಧಾಂತಮ್ ಸತ್ಯವೆಂದು ಭಾವಿಸಬೇಕು, ಶ್ರೀ ರಾಮಾಯಣದ ಮೂಲಕ ಭಗವದ್ ಗುಣಾನುಸಂದಾನಂ ಮಾಡಬೇಕು ಮತ್ತು ನಮ್ಮ ಸಮಯವನ್ನು ಸಂಪೂರ್ಣವಾಗಿ ಆಳ್ವಾರುಗಳ ಅರುಳಿಚೆಯಲ್ಗಾಗಿ ಉಪಯೋಗಿಸಬೇಕು ಎಂದು ನಂಪಿಳ್ಳೈ ಉತ್ತರಿಸುತ್ತಾರೆ. ಅಂತಿಮವಾಗಿ ಅವರು ಈ ಜೀವನದ ಕೊನೆಯಲ್ಲಿ ನಾವು ಪರಮಪದವನ್ನು ನೋಡುತ್ತೇವೆ ಎಂಬ ದೃಡವಾದ ನಂಬಿಕೆಯನ್ನು ಹೊಂದಿರಬೇಕು ಎಂದು ಹೇಳುತ್ತಾರೆ.

• ಪಾಂಡ್ಯ ದೇಶದಿಂದ ಕೆಲವು ಶ್ರೀವೈಷ್ಣವರು ಬಂದು ನಮ್ಪಿಳ್ಳೈಯನ್ನು ನಮ್ಮ ಸಂಪ್ರದಾಯದ ಸಾರವನ್ನು ನೀಡಲು ಕೇಳಿದರು. ಆಗ ನಮ್ಪಿಳ್ಳೈ ಅವರನ್ನು ಸಮುದ್ರದ ತೀರವನ್ನು ಜ್ಞಾಪಿಸಿಕೊಳ್ಳಲು ಹೇಳುತ್ತಾರೆ.ಆಗ ಆ ಶ್ರೀವೈಷ್ಣವರಿಗೆ ನಮ್ಪಿಳ್ಳೈ ಏಕೆ ಹೀಗೆ ಹೇಳುತ್ತಾರೆ ಎಂದು ತಿಳಿಯಲಿಲ್ಲ. ಆಗ ನಮ್ಪಿಳ್ಳೈ ಹೇಳಿದರು, ಚಕ್ರವರ್ತಿ ತಿರುಮಗನ್ ರಾವಣನೊಂದೆ ಯುದ್ಧ ಮಾಡುವ ಮೊದಲು,ಸಮುದ್ರದ ತೀರದಲ್ಲಿ ವಾಸಿಸುತ್ತಿದ್ದಾಗ,ವಿಶ್ರಾಮ ಮಾಡುವ ಸಮಯ ಕಪಿಗಳು ಕಾವಲು ಕಾಯುತ್ತಿದ್ದರು. ಅತಿ ಆಯಾಸದಿಂದ ಆ ಕಪಿಗಳು ನಿದ್ರೆ ಹೋದರು.ಆಗ, ಎಂಪೆರುಮಾನ್ ತಾನೇ ಕಾವಲು ಇದ್ದು ಕಪಿಗಳು ರಕ್ಷಿಸಿದನು.ಎಂಪೆರುಮಾನ್ ನಾವು ನಿದ್ದೆಯಲ್ಲಿರುವಾಗ, ಮತ್ತು ಎಚ್ಚರವಾಗಿ ಇರುವಾಗ ಕೂಡ ನಮ್ಮನ್ನು ರಕ್ಷಿಸುತ್ತಾನೆ.ಆದುದರಿಂದ, ನಾವು ಸ್ವ ರಕ್ಷಣೆ ಸ್ವ ಅನ್ವಯಂ ಅನ್ನು ತ್ಯಜಿಸಬೇಕು( ನಾವು ನಮ್ಮನ್ನು ರಕ್ಷಿಸಿಕೊಳ್ಳುವ ಯೋಚನೆ) ಎಂದು ನಮ್ಪಿಳ್ಳೈ ಹೇಳುತ್ತಾರೆ.

• ದೇವತಾಂತರ ಭಜನೆಯ ಬಗ್ಗೆ ನಮ್ಪಿಳ್ಳೈ ಅದ್ಭುತವಾದ ವಿವರಣೆ ನೀಡುತ್ತಾರೆ. ಒಂದು ಶ್ರೀವೈಷ್ಣವರು “ನೀವು ಏಕೆ ವರುಣ,ಅಗ್ನಿ, ಸೂರ್ಯ ಮುಂತಾದ ದೇವತಾಂತರರನ್ನು ಗೃಹದಲ್ಲಿ ಪೂಜಿಸುತ್ತೀರಿ ಆದರೆ ಆ ದೇವತಾಂತರ ಗುಡಿಗಳಿಗೆ ಹೋಗಿ ಪೂಜಿಸುವುದಿಲ್ಲ?” ಎಂದು ನಮ್ಪಿಳ್ಳೈಯನ್ನು ಕೇಳಿದಾಗ, ನಮ್ಪಿಳ್ಳೈ , “ಅಗ್ನಿಯನ್ನು ಯಜ್ಞದಲ್ಲಿ ಪೂಜಿಸುತ್ತೀರಿ,ಆದರೆ ಸ್ಮಶಾನದಲ್ಲಿ ಇರುವ ಅಗ್ನಿಯಿಂದ ಏಕೆ ದೂರ ಇರುತ್ತೀರಿ?! ಹಾಗೆಯೇ, ಶಾಸ್ತ್ರಗಳು ವಿಧಿಸುವಂತೆ ಎಂಪೆರುಮಾನ್ ಅಂತರ್ಯಾಮಿಯಾಗಿ ಎಲ್ಲಾ ದೇವತಾಂತರಗಳಲ್ಲಿ ಇದ್ದಾನೆ.ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು , ನಿತ್ಯ ಕರ್ಮಗಳನ್ನು ಭಗವದ್ ಆರಾಧನೆಯಾಗಿ ನಿರ್ವಹಿಸಬೇಕು.ಅದೇ ಶಾಸ್ತ್ರವು ಎಂಪೆರುಮಾನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸಬಾರದು ಎಂದು ಕೂಡ ಹೇಳುತ್ತದೆ.ಆದುದರಿಂದ ಬೇರೆ ದೇವಾಲಯಗಳಿಗೆ ನಾವು ಹೋಗುವುದಿಲ್ಲ. ಈ ದೇವತಾಂತರಗಳು ದೇವಾಲಯಗಳಲ್ಲಿ ಸ್ಥಾಪಿಸಲ್ಪಟ್ಟಾಗ , ಅವರಿಗೆ ರಜೋ ಗುಣ ಹೆಚ್ಚಾಗಿ,ತಾವೇ ಸರ್ವೋಚ್ಚ ಎನ್ನುವ ಭಾವನೆ ಉಂಟಾಗುತ್ತದೆ. ನಾವೆಲ್ಲ ಶ್ರೀವೈಷ್ಣವರಾಗಿ ಸತ್ತ್ವ ಗುಣದಲ್ಲಿ ಇರುವುದರಿಂದ, ರಜೋ ಗುಣ ಹೊಂದಿರುವ ದೆವತಾಂತರಗಳನ್ನು ಪೂಜಿಸುವುದಿಲ್ಲ”. ಎಂದು ತಕ್ಷಣವೇ ಅದ್ಭುತವಾಗಿ ಉತ್ತರಿಸಿದರು.ದೇವತಾಂತರ ಭಜನೆಯಿಂದ ದೂರ ಇರಲು,ನಮಗೆ ಇದಿಕ್ಕಿಂತಲೂ ಸ್ಪಷ್ಟವಾದ ವಿವರಣೆ ಬೇಕೆ?!

• ಒಂದು ಶ್ರೀವೈಷ್ಣವರು ನಮ್ಪಿಳ್ಳೈ ಮೊದಲಿಗಿಂತಲೂ ತೆಳ್ಳವಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದಾಗ, ನಮ್ಪಿಳ್ಳೈ ,ಆತ್ಮ ಬೆಳೆದಾಗ ಶರೀರ ತೆಳ್ಳದಾಗಿ ಆಗಿಬಿಡುತ್ತದೆ ಎಂದು ಹೇಳಿದರು.

• ಮತ್ತೊಂದು ಶ್ರೀವೈಷ್ಣವರು ನಮ್ಪಿಳ್ಳೈಯನ್ನು “ಏಕೆ ನೀವು ಪುಷ್ಟಿಯಾಗಿ ಬಲಶಾಲಿಯಾಗಿ ಇಲ್ಲ?” ಎಂದು ಕೇಳಿದಾಗ, ನಮ್ಪಿಳ್ಳೈ
“ಎಂಪೆರುಮಾನನ್ನು ಪೂಜಿಸಲು ನನಗೆ ಶಕ್ತಿ ಇದೆ.ಬಲಶಾಲಿಯಾಗಿರಲು ,ನಾನು ಯಾವ ಯುದ್ಧವನ್ನೂ ಮಾಡಲು ಹೊರಟಿಲ್ಲ!”ಎಂದು ಹೇಳಿದರು. ಶ್ರೀವೈಷ್ಣವರು ತಮ್ಮ ಶರೀರ ಬಲದ ಬಗ್ಗೆ ಚಿಂತಿಸಬಾರದು ಎಂದು ತಿಳಿದುಕೊಳ್ಳೋಣ.

• ಒಂದು ಶ್ರೀವೈಷ್ಣವರು ನಮ್ಪಿಳ್ಳೈಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದರು.ಆಗ ನಮ್ಪಿಳ್ಳೈ ನೋವು ಪಡುವುದು ಉತ್ತಮ,ಏಕೆಂದರೆ, ನೋವು ಪಟ್ಟರೆ, ಎಂಪೆರುಮಾನಿಗೆ ಸಂಪೂರ್ಣವಾಗಿ ಶರಣಾಗತರಾಗುತ್ತೇವೆ ಮತ್ತು ಮೃತ್ಯು ದೇವತೆಯನ್ನು ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಶಾಸ್ತ್ರ ಹೇಳಿದೆ” ಎಂದು ವಿವರಿಸಿದರು.

• ಆ ಸಮಯದಲ್ಲಿ ಕೆಲವು ಶ್ರೀವೈಷ್ಣವರು ನಮ್ಪಿಳ್ಳೈಯವರ ಬಳಿ ಪ್ರೀತಿ ಇರುವುದರ ಕಾರಣ,ಅವರನ್ನು ವ್ಯಾಧಿಯಿಂದ ಗುಣಪಡಿಸಲು,ರಕ್ಷೆಯನ್ನು ಕಟ್ಟಬೇಕು ಎಂದು ಹೇಳಿದಾಗ,ಎಂಗಳಾಳ್ವಾನ್ ಅವರ ಆಜ್ಞೆಯ ಪ್ರಕಾರ, ರಕ್ಷೆಯನ್ನು ನಿರಾಕರಿಸಿದರು.ಆಗ ಆ ಶ್ರೀವೈಷ್ಣವ ಭಾಗವತರು “ ಒಬ್ಬ ಶ್ರೀವೈಷ್ಣವ ತನ್ನ ಬಗ್ಗೆ ಚಿಂತನೆ ಮಾಡದಿದ್ದರೆ ತಪ್ಪು ಏನು ಇಲ್ಲ ಹಾಗು ಇತರ ಶ್ರೀವೈಷ್ಣವರ ಆರೋಗ್ಯದ ಬಗ್ಗೆ ಯೋಚಿಸುವುದು ಕೂಡ ತಪ್ಪಿಲ್ಲ ಅಲ್ಲವೇ ?! ಎಂದು ನಮ್ಪಿಳ್ಳೈಯವರನ್ನು ಕೇಳಿದರು. ಆಗ ನಮ್ಪಿಳ್ಳೈ,” ನಮ್ಮ ವ್ಯಾಧಿಯನ್ನು ನಾವೇ ಗುಣಪಡಿಸುಲು ಪ್ರಯತ್ನಿಸಿದರೆ, ಆಗ ಎಂಪೆರುಮಾನಿನ ಮೇಲೆ ಮಾತ್ರವೇ ಸಂಪೂರ್ಣವಾಗಿ ಅವಲಂಬಿತವಾಗಿರುವ ನಮ್ಮ ಜೀವಾತ್ಮ ಸ್ವರೂಪವನ್ನು ನಾವು ಇನ್ನೂ ಸರಿಯಾಗಿ ತಿಳಿದುಕೊಳ್ಳಲು ಎಂದು ಅರ್ಥ.ಮತ್ತು ಇತರರನ್ನು ವ್ಯಾಧಿಯಿಂದ ಗುಣಪಡಿಸಲು ನಾವು ಪ್ರಯತ್ನಿಸಿದರೆ,ಆಗ ಎಂಪೆರುಮಾನಿನ ಜ್ಞಾನ ಮತ್ತು ಶಕ್ತಿಯನ್ನು ನಾವು ಇನ್ನೂ ಸರಿಯಾಗಿ ತಿಳಿದುಕೊಳ್ಳಲಿಲ್ಲ ಎಂದು ಅರ್ಥ. ಭಕ್ತರನ್ನು ಗುಣಪಡಿಸಲು ನಾವು ಎಂಪೆರುಮಾನಿನ ಮೇಲೆ ಆಶ್ರತರಾಗಿರಬೇಕು” ಎಂದು ಹೇಳಿದರು. ನಮ್ಪಿಳ್ಳೈ ತನ್ನ ಈ ನಿಷ್ಟೈಯ ಪ್ರಕಾರ ಬಾಳಿದರು. ಮಾರನೇರಿ ನಂಬಿ ಅಳವಂದಾರ್ ಅವರಿಗೆ ಆರೈಕೆ ನೀಡಿದಂತೆ,ನಾವು ಕೂಡ ಶ್ರೀವೈಷ್ಣವರು ಕಷ್ಟದಲ್ಲಿದ್ದಾಗ, ಅವರಿಗೆ ಕಾಳಜಿ ವಹಿಸಬೇಕು.ಅದೇ ನಮ್ಮ ಕರ್ತವ್ಯ.

• ನಮ್ಪಿಳ್ಳೈ ಅವರಿಗೆ ಅನೇಕ ಆಚಾರ್ಯ ಪುರುಷರ ಕುಟುಂಬಗಳಿಂದ ಉತ್ತಮವಾದ ಶಿಷ್ಯರಿದ್ದರು ಮತ್ತು ಶ್ರೀರಂಗದಲ್ಲಿ ಅವರ ಸಮಯವನ್ನು ಎಲ್ಲರೂ ನಲ್ಲಡಿಕ್ಕಂ (ಅತ್ಯುತ್ತಮ ಸಮಯ) ಎಂದು ವೈಭವೀಕರಿಸುತ್ತಾರೆ. ಅದರಲ್ಲಿ, ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್ ೧೨೦೦೦ ಪಡಿ, ವಡಕ್ಕು ತಿರುವೀದಿ ಪಿಳ್ಳೈ ೩೬೦೦೦ ಪಡಿ ವ್ಯಾಖ್ಯಾನವನ್ನು ತಿರುವಾಯ್ಮೊಳಿಗೆ ಬರೆದರು. ಮೊದಲನೆಯ (೧೨೦೦೦ ಪಡಿ) ವ್ಯಾಖ್ಯಾನ ಅತಿ ದೊಡ್ಡದಾಗಿ, ವಿವರವಾಗಿದ್ದ ಕಾರಣ, ನಮ್ಪಿಳ್ಳೈ ಅದನ್ನು ನಾಶ ಮಾಡಿದರು. ೩೬೦೦೦ ಪಡಿ ವ್ಯಾಖ್ಯಾನವನ್ನು ತೆಗೆದು, ಇದನ್ನು ಭವಿಷ್ಯದಲ್ಲಿ ಜಗತ್ತಿಗೆ ಅಳಗಿಯ ಮಣವಾಳ ಮಾಮುನಿಗಳು ನೀಡಬೇಕು ಎನ್ನುವ ಕಾರಣದಿಂದ ಈಯುಣ್ಣಿ ಮಾಧವ ಪೆರುಮಾಳ್ ಅವರಿಗೆ ಕೊಟ್ಟರು. ಪೆರಿಯವಾಚ್ಚಾನ್ ಪಿಳ್ಳೈಯನ್ನು ತಿರುವಾಯ್ಮೊಳಿಗೆ ವ್ಯಾಖ್ಯಾನ ಬರೆಯಲು ಸೂಚನೆ ನೀಡಿದರು. ಪೆರಿಯವಾಚ್ಚಾನ್ ಪಿಳ್ಳೈ ೨೪೦೦೦ ಪಡಿ ವ್ಯಾಖ್ಯಾನವನ್ನು ಬರೆದು ತನ್ನ ಆಚಾರ್ಯರ ಇಚ್ಚಿಯನ್ನು ಪೂರೈಸಿದರು. ನಮ್ಪಿಳ್ಳೈ ಆ ವ್ಯಾಖ್ಯಾನವನ್ನು ಪ್ರಶಂಸಿಸಿದರು.

• ಪೆರಿಯ ಕೋಯಿಲ್ ವಳ್ಳಲಾರನ್ನು ನಮ್ಪಿಳ್ಳೈ”ಕುಲಂ ತರುಮ್” ಎನ್ನುವುದಕ್ಕೆ ಅರ್ಥ ಏನೆಂದು ಕೇಳಿದಾಗ, ವಳ್ಳಲಾರ್” ನನ್ನ ಕುಲ ನಾನು ಜನಿಸಿದ ಕುಲದಿಂದ ನಂಬೂರ್ ಕುಲಕ್ಕೆ ಬದಲಾಗುವುದೇ “ಕುಲಂ ತರುಮ್” ಎಂದು ಅರ್ಥ ಎಂದು ಹೇಳಿದರು.
ಪೆರಿಯಾಳ್ವಾರ್ ಶ್ರೀ ಸೂಕ್ತಿಯಲ್ಲಿ ಪಂಡೈ ಕುಲಂ( ಜನಿಸಿದ ಕುಲದಿಂದ) ತೊಂಡೈ ಕುಲಂ( ಆಚಾರ್ಯ ಕುಲ ಮತ್ತು ಕೈಂಕರ್ಯಶ್ರೀ) ಎನ್ನುವುದಕ್ಕೂ ಅದೇ ಅರ್ಥ.ನಮ್ಪಿಳ್ಳೈ ಅಂತಹ ಶ್ರೇಷ್ಠತೆಯುಳ್ಳವರು.

ಮುಕ್ತಾಯವಾಗಿ, ಪೆರಿಯವಾಚ್ಚಾನ್ ಪಿಳ್ಳೈ ಯೇಳೈ ಯೇದಲನ್ ಪದಿಗಂ ಓದುಂ ವಾಯ್ಮೈಯುಂ ಪಾಸುರದಲ್ಲಿ ( ಪೆರಿಯ ತಿರುಮೊಳಿ 5.8.7 ) ನಮ್ಪಿಳ್ಳೈಯ ಬಗ್ಗೆ ಏನು ಹೇಳುತ್ತಾರೆಂದು ನೋಡೋಣ. “ಅಂದಣನ್ ಒರುವನ್” ( ಅಪುರೂಪವಾದ ಪಂಡಿತ) ಎನ್ನುವುದನ್ನು ವಿವರಿಸುವಾಗ, ಪೆರಿಯವಾಚ್ಛಾನ್ ಪಿಳ್ಳೈ ಆ ಅವಕಾಶವನ್ನು ಉಪಯೋಗಿಸಿ, ತನ್ನ ಆಚಾರ್ಯನನ್ನು ಜಗತ್ತಿನಲ್ಲೇ ಅಪುರೂಪವಾದ ಪಂಡಿತ ಎಂದು ಪ್ರಶಂಸಿಸಿ ,ಈ ಮಾತುಗಳನ್ನು ಹೇಳುತ್ತಾರೆ” ಮುರ್ಪಡ ದ್ವಯತ್ತೈಕ್ ಕೇಟ್ಟು ಇತಿಹಾಸ ಪುರಾಣಂಗಳೈಯುಮ್ ಅಧಿಗರಿತ್ತು ಪರಪಕ್ಷ ಪ್ರತ್ಕ್ಷೇಪತ್ತುಕ್ಕುಡಲಾಗ ನ್ಯಾಯ ಮೀಮಾಂಸೈಗಳುಮ್ ಅಧಿಗರಿತ್ತು ಪೋದು ಪೋಕ್ಕುಮ್ ಅರುಳಿಚೆಯ್ಯಲಿಲೀಯಾಮ್ಪಡಿ ಪಿಳ್ಳೈಯಪ್ಪೂಲೇ ಅಧಿಗರಿಪ್ಪಿಕ್ಕ ವಲ್ಲವನೈಯಿರೇ ಒರುವನ್ ಎನ್ಬದು”,
ಸರಳ ವಿವರಣೆ: ನಮ್ಪಿಳ್ಳೈಯಂತೆ ದ್ವಯವನ್ನು ಮೊದಲು ಕೇಳಿ, ಬಾಹ್ಯ ಕುದೃಷ್ಟಿಗಳನ್ನು ಸೋಲಲು ಇತಿಹಾಸ ಪುರಾಣ,ನ್ಯಾಯ ಮೀಮಾಂಸಗಳನ್ನು ಕಲಿತು, ಅರುಳಿಚೆಯ್ಯಲ್ಗಳನ್ನು ಕಲಿತು ಹೇಳಿಕೊಡುವುದರಲ್ಲಿಯೇ ತನ್ನ ಜೀವನವನ್ನು ಕಳೆಯುವಂತವರೆ ಅಪುರೂಪವಾದ ಪಂಡಿತ. (ಇಲ್ಲಿ ಪೆರಿಯವಾಚ್ಚಾನ್ ಪಿಳ್ಳೈ, ನಮ್ಪಿಳ್ಳೈಯನ್ನು ಸಾಂದೀಪಣಿ ಮುನಿಗೆ ಹೋಲಿಸುತ್ತಾರೆ. ನಮ್ಪಿಳ್ಳೈ ಸಾಂದೀಪಣಿಗಿಂತಲೂ ವಿಶಿಷ್ಟ ಏಕೆಂದರೆ, ನಮ್ಪಿಳ್ಳೈ ಸದಾ ಭಾಗವತ್ ವಿಷಯದಲ್ಲಿ ಮುಳುಗಿದ್ದರು ಹಾಗು ಸಾಂದೀಪಣಿ ಕೃಷ್ಣನು ಮೋಕ್ಷವನ್ನೇ ಕೊಡ ಬಲ್ಲನು ಎಂದು ತಿಳಿದು ಕೂಡ, ತನ್ನ ಮೃತಪಟ್ಟ ಮಗನನ್ನು ಪುನಃ ಬದುಕಿಸಲು ಕೇಳಿಕೊಂಡರು)
ತಮಿಳು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಆಳವಾದ ಜ್ಞಾನ ಪಡೆದಿದ್ದ ಕಾರಣ, ನಮ್ಪಿಳ್ಳೈ ತಮ್ಮ ಸಾಹಿತ್ಯಗಳ ಮೂಲಕ ಪ್ರೇಕ್ಷಕರನ್ನು ಸಮ್ಮೋಹಿಸುತ್ತಿದ್ದರು. ನಮ್ಪಿಳ್ಳೈಯಿಂದಲೇ ತಿರುವಾಯ್ಮೊಳಿ ಹೊಸ ಎತ್ತರಕ್ಕೆ ಪ್ರಚಾರವಾಯಿತು. ಆರುಳಿಚ್ಚೆಯ್ಯಲ್ಗಳನ್ನು ಜನರು ಸುಲಭವಾಗಿ ಅರ್ಥ ಮಾಡಿಕೊಂಡರು.
ತಿರುವಾಯ್ಮೊಳಿಯ ೬೦೦೦ ಪಡಿ ವ್ಯಾಖ್ಯಾನ ಬಿಟ್ಟು ಮಿಕ್ಕ ೪ ವ್ಯಾಖ್ಯಾನಗಳಿಗೆ ನಮ್ಪಿಳ್ಳೈಯವರ ಸಂಬಂಧವಿದೆ.
• ೯೦೦೦ ಪಡಿ ವ್ಯಾಖ್ಯಾನವನ್ನು ನನ್ಜೀಯರ ಬರೆದಿದ್ದರು ಕೂಡ, ನಮ್ಪಿಳ್ಳೈ ಅದನ್ನು ಪುನಃ ವಿಶಿಷ್ಟ ಒಳನೋಟಗಳು ಮತ್ತು ಅರ್ಥಗಳೊಂದಿಗೆ ಬರೆದಿದ್ದಾರೆ. •೨೪೦೦೦ ಪಡಿಯನ್ನು ಪೆರಿಯವಾಚ್ಚಾನ ಪಿಳ್ಳೈ ನಮ್ಪಿಳ್ಳೈಯ ಭೋಧನೆ ಮತ್ತು ಸೂಚನೆಯ ಪ್ರಕಾರ ಬರೆದರು.
•೩೬೦೦೦ ಪದಿಯನ್ನು ವಡಕ್ಕು ತಿರುವೀದಿ ಪಿಳ್ಳೈ ನಮ್ಪಿಳ್ಳೈಯವರ ಬೋಧನೆಯ ಪ್ರಕಾರ ಬರೆದರು.
•೧೨೦೦೦ ಪಡಿಯನ್ನು ಪೆರಿಯವಾಚ್ಚಾನ ಪಿಳ್ಳೈಯ ಶಿಷ್ಯ ವಾದಿ ಕೇಸರಿ ಆಳಗಿಯ ಮಣವಾಳ ಜೀಯರ್ ಬರೆದರು.

• ಅವರು ಬರೆದ ವ್ಯಾಖ್ಯಾನದ ಅರ್ಥಗಳಿಂದ ,ಅವರು ನಮ್ಪಿಳ್ಳೈಯ ೩೬೦೦೦ ಪಡಿಯನ್ನು ನಿಕಟವಾಗಿ ಅನುಸರಿಸಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಅದಲ್ಲದೆ, ನಮ್ಪಿಳ್ಳೈ ಎಲ್ಲೆ ಇಲ್ಲದ ಕರುಣೆಯಿಂದ ನಮ್ಮ ಸಂಪ್ರದಾಯಕ್ಕೆ ಪಿಳ್ಳೈ ಲೋಕಾಚಾರ್ಯ ಮತ್ತು ಅಳಗಿಯ ಮಣವಾಳ ಪೆರುಮಾಳ್ ನಾಯನಾರನ್ನು ಎರಡು ಮಹಿಮಾನ್ವಿತರಾದ ಸ್ತಂಭಗಳಾಗಿ ಅಡಿಪಾಯ ಹಾಕಿದರು. ಪಿಳ್ಳೈ ಲೋಕಾಚಾರ್ಯ ‘ಶ್ರೀ ವಚನ ಭೂಷಣ’ ಮತ್ತು ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ‘ಆಚಾರ್ಯ ಹೃದಯ’ ಎನ್ನುವ ಅದ್ಭುತ ಗ್ರಂಥಗಳನ್ನು ತಮ್ಮ ಪೂರ್ವಾಚಾರ್ಯರಿಂದ ಪಡೆದ ಜ್ಞಾನದ ಆಧಾರಿತ ನಮ್ಮ ಸಂಪ್ರದಾಯಕ್ಕೆ ನೀಡಿದರು.ಈ ಚರಿತ್ರವನ್ನು ನಾವು ನಮ್ಮ ಮುಂದಿನ ಲೇಖನದಲ್ಲಿ ( ವಡಕ್ಕು ತಿರುವೀದಿ ಪಿಳ್ಳೈ ವೈಭವಮ್) ನೋಡೋಣ.

nampillai-pinbhazakiya-perumal-jeer-srirangam
ಪಿಂಬಳಗರಾಂ ಪೆರುಮಾಳ್ ಜೀಯರ್ ಜೊತೆ ನಂಪಿಳ್ಳೈ , ಶ್ರೀರಂಗಂ

ನಮ್ಪಿಳ್ಳೈ ತಮ್ಮ ಚರಮ ದೇಹವನ್ನು ಬಿಟ್ಟು ಶ್ರೀ ರಂಗದಲ್ಲಿ ಪರಮಪದ ಸೇರಿದರು. ಆಗ,ಅವರ ಶಿಷ್ಯ ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್ ತಮ್ಮ ತಲೆಯನ್ನು ಕ್ಷೌರ ಮಾಡಿಕೊಂಡರು.(ಸಾಮಾನ್ಯವಾಗಿ ತಂದೆ ಅಥವಾ ಆಚಾರ್ಯ ಪರಮಪದ ಸೇರಿದರೆ, ಅವರ ಪುತ್ರರು /ಶಿಷ್ಯರು ಕ್ಷೌರ ಮಾಡಿಕೊಳ್ಳುತ್ತಾರೆ) ಇದನ್ನು ಕಂಡ ಭಟ್ಟರ ಸಹೋದರ ನಂಪೆರುಮಾಳ್ ಬಳಿ ಹೋಗಿ, “ ಕೂರ ಕುಲದಲ್ಲಿ ಜನಿಸಿ ಹೀಗೆ ಮಾಡುವುದು ಸರಿ ಇಲ್ಲ” ಎಂದು ಭಟ್ಟರ ಮೇಲೆ ದೂರು ಹೇಳುತ್ತಾರೆ.ಆಗ ನಂಪೆರುಮಾಳ್ ಭಟ್ಟರನ್ನು ಕರೆಸಿ ವಿಚಾರಿಸಿದರು. ಆಗ ಭಟ್ಟರು ತಮ್ಮ ಕುಟುಂಬಕ್ಕಿಂತಲೂ ಹೆಚ್ಚಾಗಿ ತನ್ನ ಆಚಾರ್ಯರನ್ನು ಭಾವಿಸುತ್ತಾರೆ ಎಂದು ಹೇಳಿದರು.ಅದನ್ನು ನಂಪೆರುಮಾಳ್ ಬಹಳ ಮೆಚ್ಚಿದರು.
ನಮಗೂ ಅಂತಹ ಆಚಾರ್ಯ ಪ್ರೀತಿ ಮತ್ತು ಭಕ್ತಿ ಬರಲಿ ಎಂದು ನಮ್ಪಿಳ್ಳೈಯವರ ಪಾದ ಕಮಲದಲ್ಲಿ ಬೇಡಿಕೊಳ್ಳೋಣ!

ನಮ್ಪಿಳ್ಳೈ ತನಿಯನ್

ವೇದಾಂತ ವೇದ್ಯ ಅಮೃತ ವಾರಿರಾಸೇರ್
ವೆದಾರ್ಥ ಸಾರ ಅಮೃತ ಪೂರ್ಣಮಗ್ರ್ಯಂ
ಆದಾಯ ವರ್ಶಂತಂ ಅಹಂ ಪ್ರಪದ್ಯೇ
ಕಾರುಣ್ಯ ಪೂರ್ಣಂ ಕಲಿವೈರಿದಾಸಂ

ನಮ್ಮ ಮುಂದಿನ ಲೇಖನದಲ್ಲಿ ವಡಕ್ಕು ತಿರುವೀದಿ ಪಿಳ್ಳೈ ವೈಭವವನ್ನು ನೋಡೋಣ.

ಅಡಿಯೇನ್ ರಾಮಾನುಜ ದಾಸಿ ರೂಪ

ಸಂಗ್ರಹ – https://acharyas.koyil.org/index.php/2012/09/16/nampillai-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org