ವಡಕ್ಕು ತಿರುವೀದಿಪಿಳ್ಳೈ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ  ನಾವು, ಹಿಂದಿನ ಲೇಖನದಲ್ಲಿ ನಮ್ಬಿಳ್ಳೈ (https://acharyas.koyil.org/index.php/2021/02/17/nampillai-kannada/) ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ವಡಕ್ಕು ತಿರುವೀದಿಪಿಳ್ಳೈ ಬಗ್ಗೆ  ನೋಡೋಣ.

ವಡಕ್ಕು ತಿರುವೀದಿಪಿಳ್ಳೈ – ಕಾಂಚೀಪುರಂ

ತಿರು ನಕ್ಷತ್ರ೦: ಆಣಿ ಸ್ವಾತಿ

ಅವತಾರ ಸ್ಥಳ೦: ಶ್ರೀರಂಗಂ

ಆಚಾರ್ಯರು:  ನಮ್ಪಿಳ್ಳೈ ಅವರು

ಶಿಷ್ಯರು: ಪಿಳ್ಳೈ ಲೋಕಾಚಾರ್ಯರು, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಮುಂತಾದವರು.

ಪರಮಪದ ಸ್ಥಳ೦: ಶ್ರೀರಂಗಂ

ಕೃತಿ: ಈಡು ೩೬೦೦೦ ಪಡಿ

ಅವರಿಗೆ ಶ್ರೀ ಕೃಷ್ಣ ಪಾದ ಎಂಬ ಹೆಸರಿತ್ತು, ತರುವಾತ ವಡಕ್ಕು ತಿರುವೀದಿಪಿಳ್ಳೈ ಎಂದು ಹೆಸರುವಾಸಿಯಾದರು. ಅವರು ನಮ್ಪಿಳ್ಳೈ ಯವರ ಪ್ರಮುಖ್ಯ ಶಿಷ್ಯರಾಗಿದ್ದರು.

ವಡಕ್ಕು ತಿರುವೀದಿಪಿಳ್ಳೈಯವರು ಆಚಾರ್ಯ ನಿಷ್ಠೆಯಿಂದ ಇದ್ದರು ಮತ್ತು ಗೃಹಸ್ಥಾಶ್ರಮವನ್ನು ಪ್ರಾರಂಭಿಸಿದರು. ಅವರಿಗೆ ಮಕ್ಕಳ ಬಗ್ಗೆ ಒಲವಿರಲಿಲ್ಲ. ಅವರ ನಡವಳಿಕೆಯಿಂದ ಚಿಂತೆಗೊಂಡು, ಅವರ ತಾಯಿ ನಮ್ಪಿಳ್ಳೈ ಹತ್ತಿರ ಮೊರೆಯಿಟ್ಟರು. ಇದನ್ನು ಕೇಳಿದ ನಮ್ಪಿಳ್ಳೈ ವಡಕ್ಕು ತಿರುವೀದಿಪಿಳ್ಳೈಯವರನ್ನು  ಅವರ ಸಹಧರ್ಮಿಣಿ ಸಮೇತ ಆಮಂತ್ರಿಸಿ, ಅವರಿಗೆ ಗೃಹಸ್ಥಾಶ್ರಮ ಧರ್ಮವನ್ನು ಮತ್ತು ದಾಂಪತ್ಯ ಜೀವನವನ್ನು ತೊಡಗಿಸಿಕೊಳ್ಳುವಂತೆ ಆಶೀರ್ವದಿಸಿದರು. ತಮ್ಮ ಆಚಾರ್ಯರ ಆದೇಶವನ್ನು ಸ್ವೀಕರಿಸಿ, ಶೀಘ್ರವೇ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರು.  ನಮ್ಪಿಳ್ಳೈ  ಅವರ  ಕೃಪೆಯಿಂದ ಜನಿಸಿದ   ಮಗುವಿಗೆ ಪಿಳ್ಳೈ ಲೋಕಾಚಾರ್ಯನ್ ಎಂದು ಹೆಸರಿಟ್ಟರು ಮಗುವಿನ ತಂದೆ ವಡಕ್ಕು ತಿರುವೀದಿ ಪಿಳ್ಳೈ ಅವರು.  ನಮ್ಪಿಳ್ಳೈ ಅವರು ಆ ಮಗುವಿಗೆ ಅೞಗಿಯ ಮಣವಾಳನ್ ಎಂದು ಹಸರಿಡಲು  ಅಪೇಕ್ಷಿಸಿದ್ದರು. ಇದನ್ನು ತಿಳಿದ ನಮ್ ಪೆರುಮಾಳ್, ವಡಕ್ಕು ತಿರುವೀದಿಪಿಳ್ಳೈಯವರಿಗೆ ಇನ್ನೊಂದು ಮಗುವಾಗುವಂತೆ ಆಶೀರ್ವದಿಸಿದರು.  ಅೞಗಿಯ ಮಣವಾಳನ್ (ನಮ್ ಪೆರುಮಾಳ್) ಅನುಗ್ರಹದಿಂದ  ಜನಿಸಿದ ಎರಡನೆಯ ಮಗುವಿಗೆ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಎಂದು ಹಸರಿಡಲಾಯಿತು. ಹೀಗೆ ವಡಕ್ಕು ತಿರುವೀದಿಪಿಳ್ಳೈಯವರು ಏರಡು ಮಹತ್ವದ ರತ್ನಗಳನ್ನು ನಮ್ಮ ಸಂಪ್ರದಾಯಕ್ಕೆ ಕೊಟ್ಟಿದ್ದಾರೆ.  ಅವರನ್ನು ಪೆರಿಯಾೞ್ವಾರಿಗೆ  ಹೋಲಿಸಬಹುದು.

  • ಪೆರಿ ಆಳ್ವಾರ್  ಮತ್ತು ವಡಕ್ಕು ತಿರುವೀದಿಪಿಳ್ಳೈಅವರು ಆಣಿ ಸ್ವಾತಿ ನಕ್ಷತ್ರದಲ್ಲಿ ಜನಿಸಿದರು.
  • ಪೆರಿ ಆಳ್ವಾರ್ ಅವರು ತಿರುಪ್ಪಲ್ಲಾಣ್ಡು ಮತ್ತು ಪೆರಿಯಾೞ್ವಾರ್ ತಿರುಮೊೞಿಯನ್ನು ಎಂಪೆರುಮಾನನ ಅನುಗ್ರಹದಿಂದ ರಚಿಸಿದರು ಮತ್ತು ವಡಕ್ಕು ತಿರುವೀದಿಪಿಳ್ಳೈಯವರು ಈಡು 36000 ಪಡಿಯನ್ನು ನಮ್ಪಿಳ್ಳೈಯವರ ಅನುಗ್ರಹದಿಂದ ರಚಿಸಿದರು.
  • ಪೆರಿಅೞ್ವಾರರು ನಮ್ಮ ಸಂಪ್ರದಾಯಕ್ಕೆ ಆಂಡಾಳ್ಳನ್ನು ಕೊಟ್ಟು ಮತ್ತು ಅವರಿಗೆ ಕೃಷ್ಣಾನುಭವವನ್ನು ಉಣ್ಣಿಸಿ ಬೆಳೆಸಿದುರು. ವಡಕ್ಕು ತಿರುವೀದಿಪಿಳ್ಳೈಯವರು ನಮಗೆ ಪಿಳ್ಳೈ ಲೋಕಾಚಾರ್ಯನ್ ಮತ್ತು ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರನ್ನು ಕೊಟ್ಟು, ಅವರಿಬ್ಬರಿಗೂ ಭಗವತ್   ಅನುಭವವನ್ನು ಉಣ್ಣಿಸಿ ಬೆಳೆಸಿದುರು.

ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ದಿನಗಳನ್ನು ನಮ್ಬಿಳ್ಳೈಯವರ ತಿರುವಾಯ್ಮೊೞಿ ಕಾಲಷೇಪವನ್ನು ಕೇಳಿ ಕಲಿಯುತ್ತಲೇ  ಕಳೆದರೆು ಹಾಗು  ಇಡೀ ರಾತ್ರಿ ಅದನ್ನು ತಾಳೆಗರಿಯಲ್ಲಿ ಬರೆಯುವುದನ್ನು ಬಳಕೆಯಾಗಿ ಇಟ್ಟುಕೊಂಡಿದ್ದರು. ಈ ಪ್ರಕಾರವಾಗಿ ಅವರು ಈಡು 36000 ಪಡಿಯನ್ನು ನಮ್ಬಿಳ್ಳೈಯವರ ಕಾಲಕ್ಷೇಪವನ್ನು ಕೇಳಿ ಅವರಿಗೆ ತಿಳಿಯದಂತೆ ಬರೆಯುತ್ತಿದ್ದರು. ಒಮ್ಮೆ ವಡಕ್ಕು ತಿರುವೀದಿಪಿಳ್ಳೈಯವರು ನಮ್ಬಿಳ್ಳೈಯವರನ್ನು ತಮ್ಮ ತಿರುಮಾಳಿಗೈಗೆ ತದಿಯಾರಾದನಕ್ಕೆ ಆಹ್ವಾನಿಸಿದರು. ನಮ್ಬಿಳ್ಳೈಯವರು ಆಹ್ವಾನವನ್ನು ಸ್ವೀಕರಿಸಿ ಅವರ ತಿರುಮಾಳಿಗೈಗೆ ಹೋದರು. ನಮ್ಬಿಳ್ಳೈಯವರು ತಿರುವಾರಾಧನಂ ಮಾಡುತ್ತಿದ್ದರು. ಆಗ, ನಮ್ಪಿಳ್ಳೈ ಅವರು ಕೊಯಿಲ್ ಆಳ್ಟಾರ್ ಬಳಿ   ಇದ್ದ ತಾಳೆಗರಿಯಲ್ಲಿ ಬರೆದಿದ್ದ ವ್ಯಾಖ್ಯಾನವನ್ನು ನೊಡಿದರು. ತುಂಬ ಆಸಕ್ತಿಯಿಂದ ಅವರು ಅದನ್ನು ಓದಲು  ಪ್ರಾರಂಭಿಸಿದರು. ಆಗ, ಅವರು ತಾಳೆಗರಿಯ ಬಗ್ಗೆ ವಡಕ್ಕು ತಿರುವೀದಿಪಿಳ್ಳೈಯವರನ್ನು ವಿಚಾರಿಸಿದರು. ವಡಕ್ಕು ತಿರುವೀದಿಪಿಳ್ಳೈಯವರು ತಾವು ನಮ್ಬಿಳ್ಳೈಯವರಿಂದ ಕೇಳಿದ ಕಾಲಕ್ಷೇಪವನ್ನು ತಾಳೆಗರಿಯಲ್ಲಿ ಬರೆದರೆಂದು ನಮ್ಬಿಳ್ಳೈಯವರಿಗೆ ವಿವರಿಸಿದರು. ನಮ್ಬಿಳ್ಳೈಯವರು ವಡಕ್ಕು ತಿರುವೀದಿಪಿಳ್ಳೈಯವರಿಗೆ ತಿರುವಾರಾಧನಂ ಮಾಡಲು ಹೇಳಿ, ಅವರು ತಾಳೆಗರಿಯನ್ನು ಓದಲು ಮುಂದುವರಿಸಿದರು. ನಮ್ಬಿಳ್ಳೈಯವರು ತಾಳೆಗರಿಯಲ್ಲಿ ಬರೆದಿರುವುದನ್ನು ಪೆರಿಯವಾಚಾನ್ ಪಿಳ್ಳೈಯವರಿಗೆ ಮತ್ತು ಈಯುಣ್ಣಿ ಮಾಧವ ಪೆರುಮಾಳ್  ಅವರಿಗೆ ಕೊಟ್ಟು ಪರಿಶೀಲಿಸುವಂತೆ ಹೇಳಿದರು. ಅವರಿಬ್ಬರೂ ಅದನ್ನು ಓದಿ, ತುಂಬ ಸಂತೋಷದಿಂದ ಪ್ರಶಂಸಿಸಿದರು. ನಮ್ಬಿಳ್ಳೈಯವರು ತಮ್ಮ ಅನುಮತಿ ಇಲ್ಲದೆ ಏಕೆ ಬರೆದರೆಂದು ವಡಕ್ಕು ತಿರುವೀದಿಪಿಳ್ಳೈಯವರನ್ನು ಕೇಳಿದರು. ಹಾಗು ಅವರು ಪೆರಿಯವಾಚಾನ್ ಪಿಳ್ಳೈಯವರ ವ್ಯಾಕ್ಯನಕ್ಕೆ ಪೈಪೊಟಿಗಾಗೆ ಬರೆದರಾ ಎಂದು ಕೇಳಿದಾಗ, ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಮೇಲೆ ಅಸಮಾಧಾನಗೊಂಡ ನಮ್ಬಿಳ್ಳೈಯವರ ಪಾದ ಕಮಲಕ್ಕೆ ಬಿದ್ದು, ಮುಂಬರುವ ಕಾಲದಲ್ಲಿ ಅವರು ಪರಾಮರ್ಶೆ ಮಾಡಲು ಬರೆದರೆಂದು ವಿವರಿಸಿದರು.  ಸಮಾಧಾನದಿಂದ ಮನ ಒಪ್ಪಿ, ನಮ್ಬಿಳ್ಳೈಯವರು ವ್ಯಾಖ್ಯಾನವನ್ನು ಪ್ರಶಂಸಿಸಿದರು.ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಕಾಲಕ್ಷೇಪವನ್ನು ಕೇಳಿ, ಯಾವ ವಿಷಯವನ್ನೂ ಬಿಡದೇ ಬರೆದಿರುವುದನ್ನು ನೊಡಿ, ಅವರನ್ನು ಅವತಾರ ವಿಷೇಶಂ ಎಂದು ಭಾವಿಸಿದರು.ಅವರು ಈ ವ್ಯಾಖ್ಯಾನವನ್ನು ಈಯುಣ್ಣಿ ಮಾಧವ ಪೆರುಮಾಳ್  ಅವರಿಗೆ (ನನ್ಜೀಯರ್  ಅವರ ಪೂರ್ವಾಶ್ರಮದ ಹೆಸರು ಮಾದವರ್) ಕೊಟ್ಟರು ಮತ್ತು ಅದನ್ನು ಈಯುಣ್ಣಿಯವರ ವಂಶಜರಿಗೆ ಬೋಧಿಸಿದರು. ಅಂತಿಮವಾಗಿ, ಮಣವಾಳ ಮಾಮುನಿಗಳಿಗೆ ಬರುವಂತೆ ಹಾಗೂ ಮಾಮುನಿಗಳಿಂದ ಎಲ್ಲರಿಗೂ ತಿಳಿಯಪಡಿಸುವಂತೆ ಮಾಡಲು ನಮ್ಬಿಳ್ಳೈಯವರು ವಡಕ್ಕು ತಿರುವೀದಿಪಿಳ್ಳೈಯವರಿಗೆ ಹೇಳಿದರು. ಎಂಪ್ಪೆರುಮಾನಿನ ಅನುಗ್ರಹದಿಂದ, ನಮ್ಬಿಳ್ಳೈಯವರಿಗೆ ಮಾಮುನಿಗಳ ರೂಪವನ್ನು ಮುಂಗಾಣುವ ಸಾಮರ್ಥ್ಯವಿತ್ತು. ಅವರು  ಈಯುಣ್ಣಿ ಮಾಧವ ಪೆರುಮಾಳ್  ಅವರ ವಂಶಜರ ಮುಖಾಂತರ ಮಾಮುನಿಗಳಿಗೆ ತಲುಪುವುದು,  ಹಾಗೇ ಅದನ್ನು ಪ್ರಪಂಚಕ್ಕೆ ಸರಿಯಾದ ಸಮಯಕ್ಕೆ ಪ್ರಕಟಿಸುತ್ತಾರೆಂಬ  ಮಾಹಿತಿಯನ್ನು ತಿಳಿಸಿದರು.

ನಮ್ಬಿಳ್ಳೈಯವರು ಪರಮಪದ ಹೊಂದಿದ ಮೇಲೆ ,ವಡಕ್ಕು ತಿರುವೀದಿಪಿಳ್ಳೈಯವರು, ನಮ್ಮ ಸಂಪ್ರದಾಯಕ್ಕೆ ಮುಖ್ಯಸ್ಥರಾದರು. ಅವರು ಪಿಳ್ಳೈ ಲೋಕಾಚಾರ್ಯನ್ ಮತ್ತು ಅೞಗಿಯ ಮಣವಾಳ ಪೆರುಮಾಳ್ ನಾಯನಾರವರಿಗೆ ತಾತ್ಪರ್ಯಗಳನ್ನು ಬೋಧಿಸಿದರು. ಶ್ರೀವಚನ ಭೂಶಣ ಎಂಬ ದಿವ್ಯ ಗ್ರಂಥದಲ್ಲಿ, ಪಿಳ್ಳೈ ಲೋಕಾಚಾರ್ಯರು ವಡಕ್ಕು ತಿರುವೀದಿಪಿಳ್ಳೈಯವರ ಬೋಧನೆಗಳನ್ನು ಕೆಲವು ಕಡೆ ಉಲ್ಲೇಖಿಸಿದ್ದಾರೆ:

  • ಸೂತ್ರ 77ರಲ್ಲಿ, ಯಾವಾಗಲೂ ನಾವು ಅಹಂಕಾರವನ್ನು ಬಿಟ್ಟು  ಆತ್ಮವನ್ನು  ಅಡಿಯಾನ್ ಎಂದಷ್ಟೇ ಕರೆಯಬೇಕೆಂದು  ಹೇಳಿದ್ದಾರೆ. “ಯತೀಂದ್ರ ಪ್ರವಣಂ ಪ್ರಭಾವದಲ್ಲಿ” ಇದನ್ನು ವಡಕ್ಕು ತಿರುವೀದಿಪಿಳ್ಳೈಯವರು ವಿವರಿಸಿದ್ದಾರೆ.
  • ಸೂತ್ರ 443ರಲ್ಲಿ, “ಯವಾಗಲೂ ಜೀವಾತ್ಮ ಈ ಸಂಸಾರದಲ್ಲಿ ಅನಾದಿ ಕಾಲದಿಂದಲೂ ಸ್ವ ಸ್ವಾತಂತ್ರಿಯದಿಂದ ಇದೆ, ಈ ಸಂಸಾರದಿಂದ ಜೀವಾತ್ಮ ವನ್ನು ಮುಕ್ತಿಗೊಳಿಸಲು ಸದಾಚಾರ್ಯರಲ್ಲಿ ಶರಣಾಗತಿ ಒಂದೇ ದಾರಿ ಎಂದು ವಡಕ್ಕು ತಿರುವೀದಿಪಿಳ್ಳೈಯವರು ಹೇಳಿದ್ದಾರೆಂದು” ಪಿಳ್ಳೈ ಲೋಕಾಚಾರ್ಯರು ವಿವರಿಸಿದ್ದಾರೆ.

ಸ್ವಲ್ಪ ಸಮಯದ ನಂತರ, ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಆಚಾರ್ಯರಾದ ನಮ್ಬಿಳ್ಳೈಯವರನ್ನು ಧ್ಯಾನಿಸುತ್ತಾ,  ತಮ್ಮ   ಚರ್ಮ ಶರೀರವನ್ನು ಬಿಟ್ಟು ಪರಮಪದ  ಹೊಂದರು.

ವಡಕ್ಕು ತಿರುವೀದಿಪಿಳ್ಳೈಯವರ ಪಾದ ಕಮಲಕ್ಕೆ ಬಿದ್ದು, ಎಂಪೆರುಮಾನಾರ್   ಮತ್ತು ನಮ್ಮ ಆಚಾರ್ಯರೊಂದಿಗೆ ನಮ್ಮ ಬಂಧನವನ್ನು    ವೃದ್ಧಿಪಡಿಸುಲು ಪ್ರಾರ್ಥಿಸೊಣ.

ವಡಕ್ಕು ತಿರುವೀದಿಪಿಳ್ಳೈ ತನಿಯನ್:

ಶ್ರೀ ಕೃಷ್ಣ ಪಾದ ಪಾದಾಬ್ಜೇ ನಮಾಮಿ ಶಿರಸಾ ಸದಾ |
ಯತ್ ಪ್ರಸಾದ ಪ್ರಭಾವೇನ ಸರ್ವ ಸಿಧ್ದಿರಬೂನ್ಮಮ ||

ಪಿಳ್ಳೈ ಲೋಕಾಚಾರ್ಯರ ವೈಭವನ್ನು ಮುಂದಿನ ಲೇಖನದಲ್ಲಿ ನೋಡೋಣ.

ಅಡಿಯೇನ್ ರಾಮಾನುಜ ದಾಸನ್, ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಸಂಗ್ರಹ – https://acharyas.koyil.org/index.php/2012/09/17/vadakku-thiruveedhi-pillai-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ ಬೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org