ಪಿಳ್ಳೈ ಲೋಕಾಚಾರ್ಯರು

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:

ಶ್ರೀ ವೈಷ್ಣವ ಗುರುಪರಂಪರೆ:
ಪಿಳ್ಳೈ ಲೋಕಾಚಾರ್‍ಯರು:
ಈ ಹಿಂದಿನ ಲೇಖನದಲ್ಲಿ ನಾವು ವಡಕ್ಕು ತಿರುವೀಧಿ ಪಿಳ್ಳೈಯವರ ಬಗ್ಗೆ ತಿಳಿದೆವು. ಈಗ ನಾವು ಓರಾಣ್ ವಾೞಿ ಗುರುಪರಂಪರೆಯ ಮುಂದಿನ ಆಚಾರ್‍ಯರ ಬಗ್ಗೆ ಚರ್ಚಿಸೋಣ.
ಪಿಳ್ಳೈ ಲೋಕಾಚಾರ್‍ಯರು:
ತಿರುನಕ್ಷತ್ರಮ್ : ಐಪ್ಪಸಿ, ತಿರುವೋಣಮ್
ಆಚಾರ್‍ಯರು : ವಡಕ್ಕು ತಿರುವೀಧಿ ಪಿಳ್ಳೈ
ಅವತಾರ ಸ್ಥಳ : ಶ್ರೀರಂಗಮ್
ಶಿಷ್ಯರು : ಕೂರ ಕುಲೋತ್ತಮ ದಾಸರ್, ವಿಳಾನ್ ಚೋಲೈ ಪಿಳ್ಳೈ, ತಿರುವಾಯ್‍ಮೊೞಿ ಪಿಳ್ಳೈ, ಮಣಪ್ಪಾಕ್ಕತ್ತು ನಂಬಿ, ಕೋಟ್ಟುರ್ ಅಣ್ಣರ್, ತಿರುಪುಟ್ಕುೞಿ ಜೀಯರ್, ತಿರುಕಣ್ಣಂಗುಡಿ ಪಿಳ್ಳೈ, ಕೊಳ್ಳಿ ಕಾವಲದಾಸರ್ ಮುಂತಾದವರು.
ಪರಮಪದವನ್ನು ಸೇರಿದ ಸ್ಥಳ : ಜ್ಯೋತಿಷ್ಕುಡಿ (ಮಧುರೈ ಹತ್ತಿರ)
ಬರೆದಿರುವ ಗ್ರಂಥಗಳು : ಯಾದ್ರಿಚಿಕ ಪಡಿ, ಮುಮುಕ್ಷುಪಡಿ, ಶ್ರೀಯಃ ಪತಿ ಪಡಿ, ಪರಂಥ ಪಡಿ, ತನಿ ಪ್ರಣವಮ್, ತನಿ ದ್ವಯಮ್, ತನಿ ಚರಮಮ್, ಅರ್ಥ ಪಂಚಕಮ್, ತತ್ತ್ವ ತ್ರಯಮ್, ತತ್ತ್ವ ಶೇಖರಮ್, ಸಾರ ಸಂಗ್ರಹಮ್, ಅರ್ಚಿರಾಧಿ, ಪ್ರಮೇಯ ಶೇಖರಮ್, ಸಂಸಾರ ಸಾಮ್ರಾಜ್ಯಮ್, ಪ್ರಪನ್ನ ಪರಿತ್ರಾಣಮ್, ನವರತ್ನ ಮಾಲೈ, ನವ ವಿಧ ಸಂಬಂಧಮ್, ಶ್ರೀ ವಚನ ಭೂಶಣಮ್ ಮತ್ತು ಮುಂತಾದುವುಗಳು.

ಪಿಳ್ಳೈ ಲೋಕಾಚಾರ್‍ಯರು ಶ್ರೀರಂಗದಲ್ಲಿ ವಡಕ್ಕು ತಿರುವೀಧಿ ಪಿಳ್ಳೈ ಅವರಿಗೆ ನಂಪಿಳ್ಳೈಯವರ ಅನುಗ್ರಹದಿಂದ ಜನಿಸಿದರು. ನಾವು ಈಗಾಗಲೇ ವಡಕ್ಕು ತಿರುವೀಧಿ ಪಿಳ್ಳೈ ಅವರ ಐದಿಹ್ಯವನ್ನು ಈ ಕೆಳಕಂಡ ಯು. ಆರ್. ಎಲ್. ನಲ್ಲಿ ನೋಡಿದ್ದೇವೆ. ( https://acharyas.koyil.org/index.php/2012/09/17/vadakku-thiruveedhi-pillai-english/) ಪಿಳ್ಳೈ ಲೋಕಾಚಾರ್‍ಯರು ಮತ್ತು ಅವರ ತಮ್ಮನಾದ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರು ಶ್ರೀರಂಗದಲ್ಲಿ ಹೇಗೆ ಬೆಳೆದರು ಎಂದರೆ ಅಯೋಧ್ಯೆಯಲ್ಲಿ ರಾಮ, ಲಕ್ಷ್ಮಣರಂತೆಯೂ, ಗೋಕುಲದಲ್ಲಿ ಕಣ್ಣನ್ ಮತ್ತು ನಂಬಿ ಮೂತ್ತ ಪಿರಾನ್‍ರಂತೆಯೂ ಬೆಳೆದರು. ಅವರಿಬ್ಬರಿಗೂ ನಮ್ಮ ಸಂಪ್ರದಾಯದ ಶ್ರೇಷ್ಠ ಆಚಾರ್‍ಯರಾದ ನಂಪಿಳ್ಳೈ , ಪೆರಿಯ ವಾಚಾನ್ ಪಿಳ್ಳೈ, ವಡಕ್ಕು ತಿರುವೀಧಿ ಪಿಳ್ಳೈ ಮುಂತಾದವರ ಕಟಾಕ್ಷವೂ, ಆಶೀರ್ವಾದವೂ ಮತ್ತು ಮಾರ್ಗದರ್ಶನವೂ ಎಲ್ಲವೂ ಒಂದೇ ಸಮಯದಲ್ಲಿ ದೊರಕಿತು. ಅವರು ನಮ್ಮ ಸಂಪ್ರದಾಯವನ್ನು ತಮ್ಮ ತಂದೆಯವರಾದ ವಡಕ್ಕು ತಿರುವೀಧಿ ಪಿಳ್ಳೈಯವರ ಪಾದಕಮಲಗಳಲ್ಲಿ ಕಲಿತರು. ಮತ್ತು ಒಂದು ಅನನ್ಯವಾದ ಗುಣ ಈ ಇಬ್ಬರು ಆಚಾರ್‍ಯ ಸಿಂಹಗಳಲ್ಲಿ ಇದ್ದದ್ದು ಎಂದರೆ ಅವರಿಬ್ಬರೂ ನೈಷ್ಟಿಕ ಬ್ರಹ್ಮಚರ್‍ಯದ ಶಪಥವನ್ನು ಕೈಗೊಂಡು ಅದರಂತೆ ಜೀವನ ಪೂರ್ತಿ ಪಾಲಿಸಿದರು.
ಪಿಳ್ಳೈ ಲೋಕಾಚಾರ್‍ಯರು ಈ ಸಂಸಾರದಲ್ಲಿ ನರಳುವ ಜೀವಾತ್ಮಗಳಿಗಾಗಿ ಮತ್ತು ಪೆರಿಯ ಪೆರುಮಾಳ್ ತಮ್ಮ ಕನಸಿನಲ್ಲಿ ಬಂದು ಆಜ್ಞಾಪಿಸಿದ್ದರಿಂದ ಅನೇಕ ಗ್ರಂಥಗಳನ್ನು ಬರೆದರು. ಅವುಗಳು ನಮ್ಮ ಸಂಪ್ರದಾಯದ ಅತ್ಯಂತ ಅಮೂಲ್ಯವಾದ ಅರ್ಥಗಳನ್ನು ಬಹಿರಂಗಪಡಿಸುತ್ತವೆ. ಅದನ್ನು ವಿಶೇಷವಾಗಿ ಆಚಾರ್‍ಯರು ತಮ್ಮ ಶಿಷ್ಯರಿಗೆ ಪ್ರತ್ಯೇಕವಾಗಿ ಹೇಳಿ ಕೊಡುವಂತಹುದು.
ಪಿಳ್ಳೈ ಲೋಕಾಚಾರ್‍ಯರು ನಮ್ಮ ಸಂಪ್ರದಾಯದ ನಾಯಕರಾದವರು. ಅವರು ತಮ್ಮ ಶಿಷ್ಯರಿಗೆ ಶ್ರೀರಂಗದಲ್ಲಿ ದಿನವೂ ಪಾಠವನ್ನು ಹೇಳಿಕೊಡುತ್ತಿದ್ದರು. ಒಬ್ಬ ಶ್ರೀವೈಷ್ಣವರಾದ ಮಣಪ್ಪಾಕ್ಕತ್ತು ನಂಬಿ ಎಂಬವರು ದಿನವೂ ದೇವ ಪೆರುಮಾಳ್ ಹತ್ತಿರ ಹೋಗಿ ಅವರಿಂದ ನಮ್ಮ ಸಂಪ್ರದಾಯದ ಮೂಲ್ಯವಾದ ನಿಯಮಗಳನ್ನು ಪಡೆಯುತ್ತಿದ್ದರು. ಆದರೆ ದೇವ ಪೆರುಮಾಳ್ ಪೂರ್ತಿಯಾಗಿ ಅವರಿಗೆ ಹೇಳಿ ಕೊಡದೇ , ನಂಬಿಯನ್ನು ಶ್ರೀರಂಗಕ್ಕೆ ತೆರಳಬೇಕೆಂದು ಮತ್ತು ಅಲ್ಲಿಯೇ ಅವರಿಗೆ ಮಿಕ್ಕಿದ್ದನ್ನು ಮುಂದುವರೆಸಿ ಹೇಳಿ ಕೊಡುವುದಾಗಿ ಹೇಳಿದರು. ನಂಬಿಯವರು ಶ್ರೀರಂಗಕ್ಕೆ ಬಂದು , ಕಾಟ್ಟೞಗಿಯ ಸಿಂಘರ್ ಗುಡಿಯ ಬಳಿ ಬಂದಾಗ, ಅವರು ಪಿಳ್ಳೈ ಲೋಕಾಚಾರ್‍ಯರ ಕಾಲಕ್ಷೇಪ ಗೋಷ್ಠಿಯನ್ನು ನೋಡಿದರು. ಅವರು ಒಂದು ಕಂಭದ ಹಿಂದೆ ಅಡಗಿ, ಪಿಳ್ಳೈ ಲೋಕಾಚಾರ್‍ಯರು ಹೇಳುತ್ತಿರುವುದನ್ನು ಕೇಳಿಸಿಕೊಂಡರು. ಮತ್ತು ಅವರು ಕೇಳಿಸಿಕೊಳ್ಳುತ್ತಿರುವುದು ಮುಂದುವರೆಸಲ್ಪಟ್ಟ ದೇವ ಪೆರುಮಾಳ್ ಹೇಳಿಕೊಟ್ಟಿರುವ ಸಂಪ್ರದಾಯದ ವಿಷಯವನ್ನೇ ಎಂದು ತಿಳಿದು ಆಶ್ಚರ್‍ಯಚಕಿತರಾದರು. ಅವರು ತಾವು ಅಡಗಿದ್ದ ಸ್ಥಳದಿಂದ ಹೊರಗೆ ಬಂದು ಪಿಳ್ಳೈ ಲೋಕಾಚಾರ್‍ಯರ ಪಾದಕಮಲಗಳಿಗೆ ಬಿದ್ದು ಕೇಳಿದರು, ‘ನೀವು ಅವರೇನಾ’ ಎಂದು ಅದಕ್ಕೆ ಪಿಳ್ಳೈ ಲೋಕಾಚಾರ್‍ಯರು ‘ಹೌದು, ಆದರೇನು?’ . ಆದ್ದರಿಂದ ಪಿಳ್ಳೈ ಲೋಕಾಚಾರ್‍ಯರೇ ಸ್ವತಃ ದೇವ ಪೆರುಮಾಳ್ ಎಂದು ತಿಳಿದುಕೊಳ್ಳಬಹುದು.


ಇನ್ನೊಂದು ಘಟನೆಯು ಯತೀಂದ್ರ ಪ್ರವಣ ಪ್ರಭಾವಂ ನಲ್ಲಿ ಉಲ್ಲೇಖಿಸಿರುವಂತೆ, ಪಿಳ್ಳೈ ಲೋಕಾಚಾರ್‍ಯರೇ ಸ್ವತಃ ದೇವ ಪೆರುಮಾಳ್ ಎಂದು ಖಚಿತಪಡಿಸುವುದಕ್ಕೆ.
ಪಿಳ್ಳೈ ಲೋಕಾಚಾರ್‍ಯರು ತಮ್ಮ ಅಂತಿಮ ದಿನಗಳಲ್ಲಿ ಜ್ಯೋತಿಷ್ಕುಡಿಯಲ್ಲಿ , ನಾಲೂರ್ ಪಿಳ್ಳೈಗೆ ಆಜ್ಞಾಪಿಸುತ್ತಾರೆ ‘ತಿರುಮಲೈ ಆೞ್ವಾರ್ (ತಿರುವಾಯ್‍ಮೊೞಿ ಪಿಳ್ಳೈ) ಯವರಿಗೆ ವ್ಯಾಖ್ಯಾನವನ್ನು ಹೇಳಿಕೊಡೂವಂತೆ. ತಿರುಮಲೈ ಆೞ್ವಾರರು ದೇವ ಪೆರುಮಾಳನ್ನು ಮಂಗಳಾಶಾಸನಕ್ಕಾಗಿ ದರ್ಶಿಸಿದ್ದಾಗ , ದೇವ ಪೆರುಮಾಳರು ಪಕ್ಕದಲ್ಲಿ ಇದ್ದ ನಾಲೂರ್ ಪಿಳ್ಳೈಗೆ ನೇರವಾಗಿ ಕೇಳುತ್ತಾರೆ. ‘ನಾನು ಜ್ಯೊತಿಷ್ಕುಡಿಯಲ್ಲಿ ಹೇಳಿದ ಪ್ರಕಾರ ನೀನು ತಿರುಮಲೈ ಆೞ್ವಾರರಿಗೆ ಅರುಳಿಚೆಯ್ಯಲ್‍ನಲ್ಲಿರುವ ಎಲ್ಲಾ ಆರ್ಥಗಳನ್ನು ಹೇಳಿಕೊಡಬೇಕು’ ಎಂದು.
ಪಿಳ್ಳೈ ಲೋಕಾಚಾರ್‍ಯರು ಮುಮುಕ್ಷುಗಳನ್ನು (ಯಾರು ಭಗವತ್ ಕೈಂಕರ್‍ಯ ಮೊಕ್ಷವನ್ನು ಆಶಿಸುತ್ತಾರೋ) ಉಜ್ಜೀವನ ಮಾಡಲು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರು 18 ರಹಸ್ಯ ಗ್ರಂಥಗಳನ್ನು ನಮ್ಮ ಸಂಪ್ರದಾಯದಲ್ಲಿರುವ ಮುಖ್ಯಾಂಶಗಳನ್ನು ಬಹಿರಂಗಪಡಿಸಲು ಬರೆದಿದ್ದಾರೆ. ಅವುಗಳು ರಹಸ್ಯ ತ್ರಯಮ್, ತತ್ತ್ವ ತ್ರಯಮ್, ಅರ್ಥ ಪಂಚಕಮ್, ಮತ್ತು ಆಳವಾದ ಒಳಾರ್ಥಗಳನ್ನು ಒಳಗೊಂಡ ತಿರುವಾಯ್‍ಮೊೞಿಗೆ ಅರ್ಥವನ್ನು ಬರೆದಿದ್ದಾರೆ. ಅವುಗಳಲ್ಲಿ ಈ ಗ್ರಂಥಗಳು ಅತ್ಯಂತ ಮಹತ್ವಪೂರ್ಣ ಎನಿಸಿವೆ.
• ಮುಮುಕ್ಷುಪಡಿ :- ಈ ಗ್ರಂಥದಲ್ಲಿ ರಹಸ್ಯ ತ್ರಯಮನ್ನು ಬಹಳ ಚೆನ್ನಾಗಿ ಅರ್ಥೈಸಿದ್ದಾರೆ. ಮಾಮುನಿಗಳು ಈ ಗ್ರಂಥವನ್ನು ಸವಿವರವಾಗಿ ವ್ಯಾಖ್ಯಾನವನ್ನು ಕೊಟ್ಟಿದ್ದಾರೆ. ಈ ಗ್ರಂಥವು ಒಬ್ಬ ಶ್ರೀವೈಷ್ಣವನ ಮೂಲಭೂತ ಗ್ರಂಥವಾಗಿದೆ. ಇದನ್ನು ಬಿಟ್ಟರೆ ತಿರುಮಂತ್ರಮ್, ಧ್ವಯಮ್, ಮತ್ತು ಚರಮಶ್ಲೋಕಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
• ತತ್ತ್ವ ತ್ರಯಮ್: – ಇದನ್ನು ‘ಕುಟ್ಟಿ ಭಾಶ್ಯಮ್’ (ಚಿಕ್ಕದಾದ ಶ್ರೀ ಭಾಶ್ಯಮ್) ಎಂದೂ ಕರೆಯುತ್ತಾರೆ. ಪಿಳ್ಳೈ ಲೋಕಾಚಾರ್‍ಯರು ನಮ್ಮನ್ನು ಮೂರು ಪದಾರ್ಥಗಳಾದ ಚಿತ್, ಅಚಿತ್ ಮತ್ತು ಈಶ್ವರನ್ ಎಂಬುದರ ಬಗ್ಗೆ ಶ್ರೀ ಭಾಶ್ಯಮಿನ ಮೂಲಕ ಪೂರ್ತಿಯಾಗಿ ವಿವರಿಸಿ ಕರೆದೊಯ್ಯುತ್ತಾರೆ. ಮತ್ತೆ ಹೇಳುವುದೇನೆಂದರೆ , ಮಾಮುನಿಗಳ ವ್ಯಾಖ್ಯಾನದ ಸಹಾಯವಿಲ್ಲದಿದ್ದರೆ ಈ ಗ್ರಂಥಗಳ ವೈಭವವನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.
• ಶ್ರೀವಚನಭೂಶಣ ದಿವ್ಯ ಶಾಸ್ತ್ರಮ್:- ಆೞ್ವಾರರ ಮತ್ತು ಆಚಾರ್‍ಯರ ಮಾತುಗಳನ್ನು ಈ ಗ್ರಂಥವು ಒಳಗೊಂಡಿದೆ. ಈ ಗ್ರಂಥವು ಬಹಳ ಮಹತ್ವಪೂರ್ಣವಾಗಿದ್ದು, ಸತ್ ಸಂಪ್ರದಾಯದ ಅರ್ಥವನ್ನು ವಿವರಿಸಿದೆ. ಇದನ್ನು ಮಾಮುನಿಗಳು ತಮ್ಮ ವ್ಯಾಖ್ಯಾನದಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ತಿರುನಾರಾಯಣಪುರತ್ತು ಆಯಿಯವರೂ ಈ ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾರೆ.

ಶ್ರೀವೈಷ್ಣವರು ನಮ್ಮ ಸಂಪ್ರದಾಯವನ್ನು ತಿಳಿಯಲು ಮತ್ತು ಕೊಂಡಾಡಲು ಈ ಗ್ರಂಥಗಳನ್ನು ಕಾಲಕ್ಷೇಪಕ್ಕಾಗಿ ಒಂದು ಸಲವಾದರೂ ತಮ್ಮ ಜೀವನಾವಧಿಯಲ್ಲಿ ಕೇಳಬೇಕು.


ಪಿಳ್ಳೈ ಲೋಕಾಚಾರ್‍ಯರ ಶ್ರೇಷ್ಠತೆ ಏನೆಂದರೆ , ಅವರು ಈ ಗ್ರಂಥಗಳನ್ನು ಸರಳವಾದ ತಮಿೞ್ (ಮಣಿ ಪ್ರವಾಳಮ್) ಭಾಷೆಯಲ್ಲಿ ಬರೆದಿದ್ದಾರೆ. ಇದನ್ನು ಇಚ್ಛೆಯುಳ್ಳವರು ಅರ್ಥಮಾಡಿಕೊಳ್ಳಬಹುದು. ಮುಮುಕ್ಷುಗಳು ನಮ್ಮ ಪುನೀತವಾದ ಸಂಪ್ರದಾಯದ ಅರ್ಥಗಳನ್ನು ಅರ್ಥೈಸಿಕೊಳ್ಳಲು ಕಷ್ಟಪಡುತ್ತಿದ್ದರಿಂದ ಅವರು ಕರುಣೆಯಿಂದ ಅವರ ಆಚಾರ್‍ಯರು ಹೇಳಿಕೊಟ್ಟದ್ದನ್ನು ದಾಖಲಿಸಿಕೊಂಡರು. ಈ ಗ್ರಂಥದಲ್ಲಿ ಎಲ್ಲಾ ಅರ್ಥಗಳೂ ಇದ್ದು ಅವುಗಳನ್ನು ನಮ್ಮ ಪೂರ್ವಾಚಾರ್‍ಯರ (ಪಿಳ್ಳೈ ಲೋಕಾಚಾರ್‍ಯರಿಗೆ ಮೊದಲಿನ ಆಚಾರ್‍ಯರು) ಗ್ರಂಥಗಳಲ್ಲೂ ನೋಡಬಹುದಾಗಿದೆ. ಉದಾಹರಣೆಗೆ ಈಡು 36000 ಪಡಿ ಮತ್ತು ಇತರ ಪೂರ್ವಾಚಾರ್‍ಯರ ವ್ಯಾಖ್ಯಾನಗಳು. ಅವರು ಅಪಾರವಾದ ಕರುಣೆಯಿಂದ ಇದೆಲ್ಲವನ್ನೂ ಕ್ರೂಢೀಕರಿಸಿ ಮತ್ತು ಇದನ್ನು ಸರಳವಾದ ಗ್ರಂಥವನ್ನಾಗಿ ಮಾಡಿ, ಸರಳವಾದ ಮತ್ತು ತೀಕ್ಷ್ಣವಾದ ಭಾಷೆಯಲ್ಲಿ ಕೊಟ್ಟಿದ್ದಾರೆ. ಆದ್ದರಿಂದ ಅವರೇ ಮುಖ್ಯವಾದ ಆಚಾರ್‍ಯರು. ಅವರು ಪ್ರಮಾಣ ರಕ್ಷಣೆಯನ್ನು ಮಾಡಿದ್ದಾರೆ. (ಜ್ಞಾನವಿಕಾಸಕ್ಕೆ ರಕ್ಷಣೆ ಮತ್ತು ಪೋಷಣೆ) . ಪ್ರಮಾಣ ರಕ್ಷಣೆ ಮಾತ್ರವಲ್ಲದೇ ಪ್ರಮೇಯ ರಕ್ಷಣೆಯನ್ನೂ (ರಕ್ಷಣೆ ಮತ್ತು ಪೋಷಣೆ ಎಂಪೆರುಮಾನರಿಗೇ) ಮಾಡಿದ್ದಾರೆ. ಶ್ರೀರಂಗದಲ್ಲಿ ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ , ತಕ್ಷಣ ಮುಸಲ್ಮಾನರ ಅನಧಿಕೃತ ಪ್ರವೇಶ ಕಾಳ್ಗಿಚ್ಚಿನಂತೆ ಹಬ್ಬಿತು. ಎಲ್ಲರಿಗೂ ಬಹಳ ಚಿಂತೆಯಾಯಿತು. ಏಕೆಂದರೆ ಮುಸಲ್ಮಾನ ರಾಜರಿಗೆ ಗುಡಿಗಳನ್ನು ತಮ್ಮ ಗುರಿಯಾಗಿ ಇಟ್ಟುಕೊಂಡು ಆ ಗುಡಿಗಳಲ್ಲಿರುವ ಅಪಾರ ಸಂಪತ್ತನ್ನು ಲೂಟಿಮಾಡಲು ಹೊಂಚು ಹಾಕ ುವರೆಂದು.
ಆದ್ದರಿಂದ , ತಕ್ಷಣವೇ ಪಿಳ್ಳೈ ಲೋಕಾಚಾರ್‍ಯರು ಅತ್ಯಂತ ಹಿರಿಯ ಆಚಾರ್‍ಯರಾಗಿದ್ದರಿಂದ ಆ ಪರಿಸ್ಥಿತಿಯನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಂಡರು. ಅವರು ಶ್ರೀವೈಷ್ಣವರಿಗೆ ಪೆರಿಯ ಪೆರುಮಾಳಿನ ಮುಂಭಾಗದಲ್ಲಿ ಒಂದು ಗೋಡೆಯನ್ನು ಕಟ್ಟಲು ಹೇಳಿ, ಅವರು ನಂಪೆರುಮಾಳ್ ಮತ್ತು ಉಭಯ ನಾಚ್ಚಿಯಾರ್‌ಗಳನ್ನು ತೆಗೆದುಕೊಂಡು ದಕ್ಷಿಣ ಭಾರತದ ಕಡೆಗೆ ಹೊರಟರು. ಅವರು ಆ ಸಮಯದಲ್ಲಿ ವೃದ್ಧರಾಗಿದ್ದರೂ , ತಮ್ಮ ಬಗ್ಗೆ ಕಾಳಜಿ ವಹಿಸದೆ ನಂಪೆರುಮಾಳಿನ ಜೊತೆ ಪ್ರಯಾಣ ಬೆಳೆಸಿದರು. ಅವರು ಕಾಡಿನ ಪ್ರದೇಶದಲ್ಲಿ ಹೋಗುತ್ತಿದ್ದಾಗ ಕೆಲವು ಕಳ್ಳರು ಬಂದು ನಂಪೆರುಮಾಳರ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಹೋದರು. ಪಿಳ್ಳೈ ಲೋಕಾಚಾರ್‍ಯರು ಎಲ್ಲರಿಗಿಂತಾ ಮುಂದೆ ಹೋಗುತ್ತಿದ್ದವರು , ಈ ವಿಷಯವನ್ನು ಕೇಳಿ ಮತ್ತೆ ತಿರುಗಿ ಬಂದು ಆ ಕಳ್ಳರಿಗೆ ಉಪದೇಶಿಸಿದರು. ಆಗ ಕಳ್ಳರ ಮನಃ ಪರಿವರ್ತನೆಯಾಗಿ , ಅವರಿಗೆ ಶರಣಾಗತರಾಗಿ ಆಭರಣಗಳನ್ನು ಹಿಂತಿರುಗಿ ಕೊಟ್ಟುಬಿಟ್ಟರು.

ಈ ಪ್ರಸಂಗದ ನಂತರ , ಅವರು ಒಂದು ಸ್ಥಳಕ್ಕೆ ಬಂದರು. ಆ ಸ್ಥಳದ ಹೆಸರು ಜ್ಯೋತಿಷ್ಕುಡಿ. (ಮಧುರೈ ಹತ್ತಿರ, ಆನೈಮಲೈಯ ಹಿಂಭಾಗದಲ್ಲಿ ) ಪಿಳ್ಳೈ ಲೋಕಾಚಾರ್‍ಯರು ತಮ್ಮ ವೃದ್ಧ ವಯಸ್ಸಿನಿಂದ ಅನಾರೋಗ್ಯವನ್ನು ಹೊಂದಿ , ಪರಮಪದವನ್ನು ಸೇರುವ ನಿರ್ಧಾರವನ್ನು ಕೈಗೊಂಡರು. ಅವರು ತಮ್ಮ ಶಿಷ್ಯರೊಬ್ಬರಾದ ತಿರುಮಲೈ ಆೞ್ವಾರ್ (ತಿರುವಾಯ್‍ಮೊೞಿ ಪಿಳ್ಳೈ) ಅವರನ್ನು ನೆನೆದು, ಅವರನ್ನು ಸಂಪ್ರದಾಯದ ಮುಂದಿನ ನಾಯಕರನ್ನಾಗಿ ಮಾಡಲು ಸಿದ್ಧಪಡಿಸಬೇಕೆಂದು ತೀರ್ಮಾನಿಸಿ, ಅವರು ತಮ್ಮ ಇನ್ನೊಬ್ಬ ಶಿಷ್ಯರಾದ ಕೂರಕುಲೋತ್ತಮ ದಾಸರಿಗೆ ತಿರುಮಲೈ ಆೞ್ವಾರರನ್ನು ಸಧ್ಯದ ಕೆಲಸವಾದ ಆಡಳಿತದಿಂದ ಮುಕ್ತಿಗೊಳಿಸಿ, ಅವರನ್ನು ನಮ್ಮ ಧರಿಸನ ಪ್ರವರ್ತಕರನ್ನಾಗಿ ಮಾಡಬೇಕೆಂದು ಆಜ್ಞಾಪಿಸಿದರು. ಅವರು ಅಂತ್ಯದಲ್ಲಿ ತಮ್ಮ ಚರಮ ತಿರುಮೇನಿಯನ್ನು ಬಿಟ್ಟು ಪರಮಪದವನ್ನು ಅಲ್ಲಿಯೇ ಹೊಂದಿದರು. (ಸೇರಿದರು).

ಜ್ಯೋತಿಷ್ಕುಡಿ – ಪಿಳ್ಳೈ ಲೋಕಾಚಾರ್‍ಯರು ಪರಮಪದವನ್ನು ಸೇರಿದ ಸ್ಥಳ .

ಮಣವಾಳ ಮಾಮುನಿಗಳು ಪಿಳ್ಳೈ ಲೋಕಾಚಾರ್‍ಯರನ್ನು ಮತ್ತು ಅವರ ಶ್ರೀವಚನಭೂಷಣ ದಿವ್ಯ ಶಾಸ್ತ್ರವನ್ನು ವೈಭವೀಕರಿಸಲು ಉಪದೇಶ ರತ್ತಿನ ಮಾಲೈಯನ್ನು ಬರೆದಿರುತ್ತಾರೆ. ಅವರು ಆೞ್ವಾರರ ಅವತಾರವನ್ನು, ಆಚಾರ್‍ಯರ ಅವತಾರವನ್ನು , ನಮ್ಮ ಸಂಪ್ರದಾಯವನ್ನು ಯಾರು ಆಶಿಸುತ್ತಾರೋ ಎಲ್ಲರಿಗೂ ಹೇಳಿಕೊಡುವಂತೆ ಎಂಪೆರುಮಾನರ ಕೃಪೆಯನ್ನು, ತಿರುವಾಯ್‍ಮೊೞಿ ವ್ಯಾಖ್ಯಾನ ಅವತಾರವನ್ನು , ಮುಂತಾದುವುಗಳನ್ನು ವಿವರಿಸಿದ್ದಾರೆ. ಅವರು ಪಿಳ್ಳೈ ಲೋಕಾಚಾರ್‍ಯರ ಅವತಾರವನ್ನು ಮತ್ತು ಶ್ರೀವಚನಭೂಷಣ ದಿವ್ಯ ಶಾಸ್ತ್ರದ ವೈಭವವನ್ನೂ ಮತ್ತು ಆ ಗ್ರಂಥದಲ್ಲಿ ಉಪಸ್ಥಿತವಿರುವ ಅರ್ಥವನ್ನು ಹೇಳಿದ್ದಾರೆ. ಮತ್ತು ಕೊನೆಯಲ್ಲಿ ಹೇಳುತ್ತಾರೆ, ‘ನಾವು ಆ ಅರ್ಥಗಳಲ್ಲಿ ಬಾಳಬೇಕು ಮತ್ತು ಆ ರೀತಿ ಬದುಕಿದರೆ ನಾವು ಎಂಪೆರುಮಾನಾರರ ಕೃಪೆಗೆ ಸತ್ ಪಾತ್ರರಾಗುತ್ತೇವೆ. ಅವರು ಹೇಳುತ್ತಾರೆ, ‘ ಪೂರ್ವಾಚಾರ್‍ಯರ ಜ್ಞಾನದಲ್ಲಿ ಮತ್ತು ಅನುಷ್ಠಾನದಲ್ಲಿ (ಆದೇಶಗಳು ಮತ್ತು ಶುದ್ಧ ಜೀವನ) ನಂಬಿಕೆ ಇಡದೆ, ನಾವು ನಮ್ಮದೇ ಆದ ಅರ್ಥಗಳನ್ನು ನಾವು ಅರ್ಥಮಾಡಿಕೊಂಡ ರೀತಿಯಲ್ಲಿ , ನಮ್ಮದೇ ತತ್ತ್ವಗಳನ್ನು ಒಳಗೂಡಿಸಿಕೊಂಡು ಮಾಡಿದರೆ, ನಮ್ಮಷ್ಟು ಮೂರ್ಖರು ಇನ್ನು ಯಾರೂ ಇರುವುದಿಲ್ಲ. ಮಾಮುನಿಗಳು ಎಲ್ಲೂ ಅಪಶಬ್ದವನ್ನು ಉಪಯೋಗಿಸದವರು ಇಲ್ಲಿ ತೀಕ್ಷ್ಣವಾದ ಶಬ್ದವಾದ ‘ಮೂರ್ಖರು’ ಎಂದು ತಿಳಿಸಿರುವುದಕ್ಕೆ ಅದು ಆ ಕ್ರಿಯೆಯ ಕ್ರೌರ್ಯವನ್ನು ನಮ್ಮ ಪೂರ್ವಾಚಾರ್‍ಯರನ್ನು ನಂಬದಿರುವುದನ್ನು ಸೂಚಿಸುತ್ತದೆ. ಇದೇ ಶ್ರೀ ವಚನಭೂಷಣ ದಿವ್ಯ ಶಾಸ್ತ್ರದ ಸಾರ, ಮಾಮುನಿಗಳು ತಮ್ಮ ಅದ್ಭುತವಾದ ಉಪದೇಶ ರತ್ತಿನ ಮಾಲೈಯಲ್ಲಿ ಬರೆದಿರುವ ಹಾಗೆ.

ವೇದಾಂತಾಚಾರ್‍ಯರು (ನಿಗಮಾಂತ ಮಹಾ ದೇಶಿಕನ್) ಪಿಳ್ಳೈ ಲೋಕಾಚಾರ್‍ಯರ ವೈಭವವನ್ನು ಹೊಗಳುತ್ತಾ ಅದ್ಭುತವಾದ ಪ್ರಭಂಧವಾದ ‘ಲೋಕಾಚಾರ್‍ಯ ಪಂಚಾಸಠ್ ಅನ್ನು ಬರೆದಿರುತ್ತಾರೆ. ವೇದಾಂತಾಚಾರ್‍ಯರು ಕನಿಷ್ಠ್ 50 ವರ್ಷಗಳಷ್ಟಾದರೂ ಪಿಳ್ಳೈ ಲೋಕಾಚಾರ್‍ಯರಿಗಿಂತಾ ಕಿರಿಯವರು. ಮತ್ತು ಪಿಳ್ಳೈ ಲೋಕಾಚಾರ್‍ಯರ ಮೇಲೆ ಅತಿಯಾದ ಮೆಚ್ಚುಗೆಯನ್ನು ಹೊಂದಿದ್ದರು. ಈ ಗ್ರಂಥದಿಂದ ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇದನ್ನು ತಿರುನಾರಾಯಣಪುರದಲ್ಲಿ ದಿನವೂ ಪಠಿಸುತ್ತಾರೆ. ಸರಳವಾದ ಆಂಗ್ಲ ಅನುವಾದವನ್ನು ಶ್ರೀ ಯು.ವೇ.ಟಿ.ಸಿ.ಎ. ವೆಂಕಟೇಶನ್ ಸ್ವಾಮಿಯವರು ಶ್ರೀ ಯು.ವೇ. ರಾಮಾನುಜಮ್ ಸ್ವಾಮಿಯವರ ಬರಹದ ಅಧಾರದ ಮೇಲೆ ಇದನ್ನು ಬರೆದಿರುತ್ತಾರೆ. ಅದನ್ನು ಈ ಕೆಳಕಂಡ ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
(http://acharya.org/books/eBooks/vyakhyanam/LokacharyaPanchasatVyakhyanaSaram-English.pdf.)

ಆದ್ದರಿಂದ ನಾವು ಪಿಳ್ಳೈಲೋಕಾಚಾರ್‍ಯರ ಅಮಿತವಾದ ವೈಭವವನ್ನು ಅವರು ತಮ್ಮ ಜೀವನವನ್ನು ಪ್ರಮಾಣ ರಕ್ಷಣೆ ಮತ್ತು ಪ್ರಮೇಯ ರಕ್ಷಣೆಗಾಗಿ ಮುಡುಪಾಗಿ ಇಟ್ಟಿದ್ದನ್ನು ಅರ್ಥ ಮಾಡಿಕೊಳ್ಳಬಹುದು. ಯಾರು ತಮ್ಮನ್ನು ತಾವು ಶ್ರೀವೈಷ್ಣವನೆಂದು ಕರೆದುಕೊಳ್ಳುತ್ತಾರೋ ಅವರು ಪಿಳ್ಳೈ ಲೋಕಾಚಾರ್‍ಯರ ಉಪಕಾರ ಸ್ಮೃತಿಯನ್ನು ಹೊಂದಬೇಕು. ಏಕೆಂದರೆ ಪಿಳ್ಳೈಲೋಕಾಚಾರ್‍ಯರು ಇಲ್ಲದಿದ್ದರೆ ನಾವು ನಂಪೆರುಮಾಳನ್ನು ನೋಡುತ್ತಿರಲಿಲ್ಲ ಮತ್ತು ಎಂಪೆರುಮಾನಾರರ ದರಿಸನಮ್ ಬಗ್ಗೆ ಆಳವಾದ ಅರ್ಥವೂ ಆಗುತ್ತಿರಲಿಲ್ಲ.
ನಾವೆಲ್ಲರೂ ಪಿಳ್ಳೈ ಲೋಕಾಚಾರ್‍ಯರ ಪಾದಕಮಲಗಳನ್ನು ವಂದಿಸೋಣ ನಮಗೂ ಎಂಪೆರುಮಾನಾರರ ಬಗ್ಗೆ ಮತ್ತು ನಮ್ಮ ಆಚಾರ್‍ಯರ ಬಗ್ಗೆ ಅಂತಹ ಒಂದು ವಿಶ್ವಾಸ ಬೆಳೆಯಲಿ ಎಂದು.

ಪಿಳ್ಳೈ ಲೋಕಾಚಾರ್‍ಯರ ತನಿಯನ್:
ಲೋಕಚಾರ್‍ಯ ಗುರುವೇ ಕೃಷ್ಣ ಪಾದಸ್ಯ ಸೂನವೇ
ಸಂಸಾರ ಭೋಗಿ ಸಂತಷ್ಟ ಜೀವ ಜೀವಾತವೇ ನಮಃ

ಮಂಗಳಾಶಾಸನಮ್ ಪಿಳ್ಳೈ ಲೋಕಾಚಾರ್‍ಯರಿಗೂ ಮತ್ತು ಅವರ ಗೋಷ್ಠಿಗೂ
ವಾೞಿ ಉಲಗಾಸಿರಿಯನ್ ವಾೞಿ ಅವನ್ ಮನ್ನು ಕುಲಮ್
ವಾೞಿ ಮುಡುಂಬೈ ಎನ್ನು ಮಾನಗರಮ್
ವಾೞಿ ಮನಮ್ ಚೂೞ್‍ನ್ದ ಪೇರಿನ್ಬ ಮಲ್ಗುಮಿಗು ನಲ್ಲಾರ್
ಇನಮ್ ಚೂೞ್‍ನ್ದು ಇರುಕ್ಕುಮ್ ಇರುಪ್ಪು

ನಮ್ಮ ಮುಂದಿನ ಲೇಖನದಲ್ಲಿ ತಿರುವಾಯ್‍ಮೊೞಿ ಪಿಳ್ಳೈಯವರ ವೈಭವವನ್ನು ನೋಡೋಣ.

ಅಡಿಯೇನ್ ಕುಮುದವಲ್ಲಿ ರಾಮಾನುಜ ದಾಸಿ

ಸಂಗ್ರಹ – https://acharyas.koyil.org/index.php/2012/09/18/pillai-lokacharyar-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org

2 thoughts on “ಪಿಳ್ಳೈ ಲೋಕಾಚಾರ್ಯರು”

Comments are closed.