ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:
ಹಿಂದಿನ ಲೇಖನದಲ್ಲಿ (https://acharyas.koyil.org/index.php/2015/08/17/introduction-2-kannada/) ನಾವು ಗುರು ಪರಂಪರೆಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿದ್ದೇವೆ.
ಈಗ ನಾವು ಓರಾಣ್ವಳಿ ಆಚಾರ್ಯ ಪರಂಪರೆಯಿಂದ ಆರಂಭಿಸೋಣ. ಒಬ್ಬರಿಂದ ಇನ್ನೊಬ್ಬರಿಗೆ ಕ್ರಮಾನುಗತವಾಗಿ ಜ್ಞಾನ ಪ್ರಸರಣವನ್ನು ಓರಾಣ್ವಳಿಯೆಂದು ಹೇಳುತ್ತಾರೆ. ಮೊದಲ ಲೇಖನದಲ್ಲಿ ಚರ್ಚಿಸಿದಂತೆ, ನಿಜವಾದ ಜ್ಞಾನ :ಆ) ರಹಸ್ಯತ್ರಯಸಾರದಲ್ಲಿ ವಿವರಿಸಲಾಗಿದೆ ಮತ್ತು ಆ) ನಮ್ಮ ಓರಾಣ್ವಳಿ ಗುರು ಪರಂಪರೆಯು ಈ ಜ್ಞಾನವನ್ನು ನಿಖರವಾಗಿ ಪ್ರಸರಣೆ ಮಾಡಿದೆ.
- ಪೆರಿಯ ಪೆರುಮಾಳ್
ತಿರು ನಕ್ಷತ್ರ: ಆವಣಿ, ರೋಹಿಣಿ
ರಚನೆಗಳು/ಸಂದೇಶ: ಭಗವದ್ಗೀತೆ, ಶೀಶೈಲೇಶ ದಯಾಪಾತ್ರಂ ತನಿಯನ್ ಇತ್ಯಾದಿ
ನಮ್ಮ ಓರಾಣ್ವಳಿ ಗುರುಪರಂಪರಾ, ಪೆರಿಯ ಪೆರುಮಾಳ್ ಇಂದ ಪ್ರಾರಂಭವಾಗುತ್ತದೆ. ನಾವು ಹಿಂದಿನ ಲೇಖನದಲ್ಲಿ ಗಮನಿಸದಂತೆ, ಎಂಪೆರುಮಾನ್ ತನ್ನ ಆಪಾರ ಕರುಣೆಯಿಂದ, ಪ್ರಥಮಾಚಾರ್ಯರ ಸ್ಥಾನವನ್ನು ತೆಗೆದುಕೊಳ್ಳುತ್ತಾನೆ. ಅವನು ರಹಸ್ಯತ್ರಯವನ್ನು ವಿಷ್ಣು ಲೋಕದಲ್ಲಿ ಪೆರಿಯ ಪಿರಾಟ್ಟಿಗೆ ಪ್ರಕಟಣೆ ಮಾಡುತ್ತಾನೆ.
ಎಂಪೆರುಮಾನ್ ಒಬ್ಬನೇ ಸ್ವತಂತ್ರನ್ (ವಿಮುಕ್ತ, ಅನಿರ್ಭಂಧಿತ) ಮತ್ತು ಶೇಷಿ (ನಾಯಕ). ಮತ್ತೆಲ್ಲರು ಪರತಂತ್ರರ್ (ಆಶ್ರಿತ) ಮತ್ತು ಶೇಷ (ಅಧೀನರು). ಅವನು ಪ್ರಥಮಾಚಾರ್ಯನ ಸ್ಥಾನವನ್ನು ಸ್ವಯಮಿಚ್ಛೆಯಿಂದ ತೆಗೆದುಕೊಳ್ಳುತ್ತಾನೆ. ಅವನು ಸರ್ವಜ್ಞನು, ಸರ್ವಶಕ್ತನು ಮತ್ತು ಸಾರ್ವವ್ಯಾಪ್ತನು. ಅವನ ಪ್ರಶ್ನಾತೀತ ಸಾಮರ್ಥ್ಯದಿಂದ ಜೀವಾತ್ಮಾಗಳಿಗೆ ಮೋಕ್ಷವನ್ನು ಕೊಡಬಲ್ಲ.
ಪೆರಿಯ ಪೆರುಮಾಳ್ (ಮೂಲತಃ ನಾರಾಯಣ ಎಂದು ಕರೆಯಲ್ಪಟ್ಟ) ಬ್ರಹ್ಮನ ತಪಸ್ಸಿಗೆ ಉತ್ತರಿಸಿ ಪರಮಪದದಿಂದ ಸತ್ಯಲೋಕಕ್ಕೆ ಶ್ರೀರಂಗ ವಿಮಾನದೊಡನೆ ಇಳಿದು ಬಂದರು. ನಂತರ, ಸತ್ಯ ಲೋಕದದಿಂದ ಇಕ್ಷ್ವಾಕು ರಾಜನ ವಿನಂತಿಯಿಂದ ಅಯೋಧ್ಯೆಗೆ ಇಳಿದು ಬಂದರು. ರಘುಕುಲ ರಾಜರು ಅವರ ಪೂಜೆ ಮಾಡಿದರು. ರಾಮನು ಪೆರಿಯ ಪೆರುಮಾಳನ್ನು ವಿಭೀಷಣಾಳ್ವಾನಿಗೆ ಉಡುಗೊರೆಯಾಗಿ ಕೊಟ್ಟರು. ಲಂಕೆಗೆ ಪ್ರಯಾಣಮಾಡುವ ಸಮಯದಲ್ಲಿ ವಿಭೀಷಣಾಳ್ವಾನ್ ಪೆರಿಯ ಪೆರುಮಾಳನ್ನು ಶ್ರೀರಂಗದಲ್ಲಿ ಇಡುತ್ತಾರೆ. ಶ್ರೀರಂಗದ ಸೌಂದರ್ಯವು ಇಷ್ಟವಾಗಿ ಎಂಪೆರುಮಾನ್ ಅಲ್ಲಿ ದಕ್ಷಿಣ ಎದುರಿಸುತ್ತ ಉಳಿಯಲು ತೀರ್ಮಾನಿಸಿದರು.
ಪೆರಿಯ ಪೆರುಮಾಳಿನ ತನಿಯನ್
ಶ್ರೀಸ್ತನಾಭರಣಂ ತೇಜಃ ಶ್ರೀರಂಗೇಶಯಮಾಶ್ರಯೇ |
ಚಿಂತಾಮಣಿಮಿವೋತ್ವಾನ್ತಂ ಉತ್ಸಂಗೇ ಅನಂತಭೋಗಿನಃ ||
- ಪೆರಿಯ ಪಿರಾಟ್ಟಿಯಾರ್
ತಿರುನಕ್ಷತ್ರ: ಪಂಗುನಿ, ಉತ್ತಿರಂ
ಎಂಪೆರುಮಾನ್ ದ್ವಯ ಮಾಹಾಮಂತ್ರವನ್ನು ವಿಷ್ನುಲೋಕದಲ್ಲಿ ಪೆರೆಯ ಪಿರಾಟ್ಟಿಗೆ ಪ್ರಕಟಿಸುತ್ತಾರೆ. ಪೆರಿಯ ಪಿರಾಟ್ಟಿಯು ಆಚಾರ್ಯನ್ನಲಿರುವ ಎಲ್ಲಾ ಗುಣಲಕ್ಷಣಗಳ ಸಾಕಾರ ರೂಪ.
ಆಚಾರ್ಯನಿಗೆ ಕೃಪೆ (ನರಳುತ್ತಿರುವ ಜೀವಾತ್ಮಗಳ ಮೇಲೆ ಕರುಣೆ ತೋರಿಸೋ ಗುಣ), ಪಾರತಂತ್ರಯಂ (ಎಂಪೆರುಮಾನ್ ಮೇಲೆ ಸಂಪೂರ್ಣ ಆಶ್ರಿತಸ್ಥಿತವಾಗಿರುವ ಗುಣ) ಮತ್ತು ಅನನ್ಯಾರ್ಹತ್ವಂ (ತನ್ನನು ಎಂಪೆರುಮಾನ್ ಒಬ್ಬನಿಗೇ ಸಂಪೂರ್ಣವಾಗಿ ಅರ್ಪಿಸುವ ಗುಣ) – ಮುಖ್ಯವಾಗಿ ಈ ಮೂರು ಗುಣಗಳು ಇರಬೇಕು. ಪಿರಾಟ್ಟಿಯು ಈ ಮೂರು ಗುಣಗಳ ಸಾಕಾರ ರೂಪವಾಗಿರುವುದರಿಂದ ನಮ್ಮ ಓರಾಣ್ವಳಿ ಗುರುಪರಂಪರೆಯ ಎರಡನೆ ಆಚಾರ್ಯರಾಗಿ, ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಪೆರಿಯ ಪಿರಾಟ್ಟಿಯ ಗುಣಲಕ್ಷಣಗಳು ಇತರ ಆಚಾರ್ಯರ ನಡತೆ ಮತ್ತು ನೀತಿಗೆ ಪ್ರೊತ್ಸಾಹ ಕೊಡುವಂತ್ತದ್ದು.
ಶ್ರೀ ವಚನ ಭೂಷಣದಲ್ಲಿ ಪಿಳ್ಳೈ ಲೋಕಾಚಾರ್ಯರು ಈ ಮೂರು ಗುಣಗಳನ್ನು ಮೂರು ಸಂಧರ್ಭಗಳಲ್ಲಿ ಸಿತಾಪಿರಾಟ್ಟಿಯಲ್ಲಿ ಕಾಣಬಹುದು ಎಂದು ವಿವರಿಸುತ್ತಾರೆ.
೧. ರಾವಣ ಸೀತೆಯನ್ನು ಬಲಾತ್ಕಾರವಾಗಿ ಲಂಕೆಗೆ ಕರೆದುಕೋಂಡುಹೋದಾಗ, ಸೀತೆಯು ಅವಳ ಪರಮ ಕೃಪೆಯಿಂದ ಇದರ ಅವಕಾಶ ಕೊಡುತ್ತಾಳೆ – ಏಕೆಂದರೆ ಅವಳು ಲಂಕೆಗೆ ಹೋಗದಿದ್ದರೆ, ದೇವಸ್ತ್ರೀಯರ ರಕ್ಷಣೆ ಆಗುವುದಿಲ್ಲ. ಲೋಕಮಾತೆಯಾಗಿರುವ ಕಾರಣದಿಂದ, ಅವಳು ರಾವಣನ ಮಾತೆಯಾಗುತ್ತಾಳೆ. ಅವಳ ಅಪಾರ ಮಮತೆಯಿಂದ ರಾವಣನ ದುರಾಚಾರಗಳನ್ನು ಸಹಿಸಿಕೊಳ್ಳುತ್ತಾಳೆ.
೨. ಯಾರೋ ಒಬ್ಬ ಪ್ರಜೆಯು ಸೀತೆಯ ನೆಪವಿಟ್ಟು ರಾಮನನ್ನು ದೂಷಿಸಿದಾಗ ಗರ್ಭಿಣಿಯಾಗಿರುವಾಗ ಸೀತೆ ರಾಜ್ಯವನ್ನು ಬಿಟ್ಟು ಕಾಡಲ್ಲಿದ್ದು ರಾಮನ ಆಜ್ಞೆಯನ್ನು ಪಾಲಿಸಿದಳು. ಇದರಲ್ಲಿ ಎಂಪೆರುಮಾನ್ ಮೇಲಿರುವ ಸಂಪೂರ್ಣ ಪರಾಧೀನವನ್ನು ಕಾಣಬಹುದು (ಪಾರತಂತ್ರ್ಯಂ).
೩. ವನವಾಸದಿಂದ ಬಂದು ಜನರ ಸಂದೇಹ ನಿವಾರಣೆಮಾಡಲು, ಶ್ರೀ ರಾಮನು ಸೀತೆಯ ಪತಿವ್ರತೆಯ ಬಗ್ಗೆ ಪ್ರಷ್ನಿಸಿದಾಗ, ಸೀತಾದೇವಿಯು ಭೂಮಿಯೊಳಕ್ಕೆ ಇಳಿದು ಹೋದಳು. ಶ್ರೀರಾಮನನ್ನು ಹೊರತು ಮತ್ತಾರನ್ನೂ ಮನಸ್ಸಿನಲ್ಲಿ ಚಿಂತಿಸಿಲ್ಲ ಎಂದು ನಿರೂಪಿಸಿದಳ್ (ಅನನ್ಯಾರ್ಹತ್ವಂ).
ಆಚಾರ್ಯನ ಮೂರು ಪ್ರಮುಖ್ಯ ಗುಣಗಳನ್ನು ಪೆರಿಯ ಪಿರಾಟ್ಟಿಯಲ್ಲಿ ಸುವ್ಯಕ್ತವಾಗಿ ಕಣಬಹುದು.
ಪೆರಿಯ ಪಿರಾಟ್ಟಿಯ ತಾನಿಯನ್:
ನಮಃ ಶ್ರ್ಹ್ರೀರಂಗ ನಾಯಕ್ಯೈ ಯತ್ ಭ್ರೋ ವಿಭ್ರಮ ಭೇದತಃ |
ಈಶೇಶಿತವ್ಯ ವೈಶಮ್ಯ ನಿಮ್ನೋನ್ನತ ಇದಂ ಜಗತ್ ||
ಮುಂದಿನ ಲೇಖನದಲ್ಲಿ ನಾವು ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೇ ಚರ್ಚೆ ಮಾಡೋಣಾ.
ಅಡಿಯೇನ್ ರಾಮಾನುಜನ್ ಮಧುರಕವಿ ರಾಮಾನುಜ ದಾಸನ್
ಮೂಲ: http://acharyas.koyil.org/index.php/2012/08/17/divya-dhampathi-english/
ರಕ್ಷಿತ ಮಾಹಿತಿ: https://acharyas.koyil.org/index.php
ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org
3 thoughts on “ದಿವ್ಯ ದಂಪತಿ”
Comments are closed.