ಮಣಕ್ಕಾಲ್ ನಂಬಿ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಉಯ್ಯಕ್ಕೊಣ್ಡಾರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ಮುಂದೆ ಮಣಕ್ಕಾಲ್ ನಂಬಿ ಬಗ್ಗೆ ನೊಡೋಣ .

(https://acharyas.koyil.org/index.php/2018/01/23/uyyakkondar-kannada/)

ಮಣಕ್ಕಾಲ್ ನಂಬಿ – ಮಣಕ್ಕಾಲ್

ತಿರು ನಕ್ಷತ್ರ೦: ಮಾಸಿ, ಮಖಮ್

ಅವತಾರ ಸ್ಥಳ೦:  ಮಣಕ್ಕಾಲ್ (ಕಾವೇರಿ ನದಿಯ ದಡದಲ್ಲಿ ಇರುವ ಒಂದು ಗ್ರಾಮ, ಶ್ರೀರಂಗದ ಹತ್ತಿರ)

ಆಚಾರ್ಯರು: ಉಯ್ಯಕ್ಕೊಣ್ಡಾರ್

ಶಿಷ್ಯರು: ಆಳವಂದಾರ್, ತಿರುವರಂಗ ಪೆರುಮಾಳ್ ಅರಯರ್ ( ಆಳವಂದಾರರ ಮಗ), ದೈವದುಕ್ಕರಸು ನಂಬಿ, ಪಿಳ್ಳೈ ಅರಸು ನಂಬಿ, ಸಿರು ಪುಳ್ಳುರುಡೈಯಾರ್ ಪಿಳ್ಳೈ, ತಿರುಮಾಲಿರುಂಚೋಲೈ ದಾಸರ್, ವಂಗಿಪುರತು ಆಯ್ಚಿ.

ಶ್ರೀ ರಾಮ ಮಿಸ್ರರ್ ಮಣಕ್ಕಾಲ್ ಎಂಬ ಗ್ರಾಮದಲ್ಲಿ ಜನಿಸಿದರು. ಕಾಲ ಕ್ರಮೇಣ ಅವರು ಮಣಕ್ಕಾಲ್ ನಂಬಿ ಎಂದು ಜನಪ್ರಿಯವಾದರು.

ಅವರು ತಮ್ಮ ಆಚಾರ್ಯರಾದ ಉಯ್ಯಕೊಂಡಾರರ ಜೊತೆಗೆ ಇದ್ದು ೧೨ ವರ್ಷಗಳ ಕಾಲ ಸೇವೆ ಮಾಡಿದರು. ಅ ಸಮಯದಲ್ಲಿ ಉಯ್ಯಕ್ಕೊಂಡಾರರ  ಧರ್ಮ ಪತ್ನಿ ಪರಮಪದಿಸಿದರು , ಮಣಕ್ಕಾಲ್ ನಂಬಿ ಆಚಾರ್ಯರ ಗೃಹವನ್ನು ಮತ್ತು ಅವರ ಮಕ್ಕಳ ಜವಾಬ್ದಾರಿಯನ್ನು ವಹಿಸಿ ಕೊಳುತ್ತಾರೆ. ಓಮ್ಮೆ, ತಮ್ಮ ಆಚಾರ್ಯರ ಮಕ್ಕಳು ಕಾವೇರಿ ನದಿಯಿಂದ ಹಿಂದಿರುಗುವಾಗ, ಕೆಸರುಗುಂಡಿಯನ್ನು ದಾಟಲು ಹಿಂದುಮುಂದು ನೋಡಿದರು. ಅವಾಗ ನಂಬಿ ಕೆಸರುಗುಂಡಿ ಮೇಲೆ ಬೀದ್ದು, ಅವರನ್ನು ದಾಟಿಹೊಗಲು ಹೇಳಿದರು. ಇದನ್ನು ಕೇಳಿದ, ಉಯ್ಯಕ್ಕೊಂಡಾರರು ತುಂಬ ಸಂತುಷ್ಟಗೊಂಡರು ಮತ್ತು ತಮ್ಮ ತಿರುವಡಿಯನ್ನು ನಂಬಿಯ ತಿರುಮುಡಿಯ ಮೇಲೆ ಇಟ್ಟರು. ಅವರು ನಂಬಿಯ ಬೇಡಿಕೆಯನ್ನು ಕೇಳಿದರು, ಅಗ ನಂಬಿಯವರು ಆಚಾರ್ಯರ ಸೇವೆಯನ್ನು ಬೇಡಿದರು. ಉಯ್ಯಕೊಂಡಾರರು ತಮ್ಮ ಶಿಷ್ಯನ ಮಾತು ಕೇಳಿ ಅತ್ಯಂತ ಸಂತುಷ್ಟಗೊಂಡರು, ಮತ್ತು ದ್ವಯ ಮಹಾ ಮಂತ್ರೋಪದೇಶವನ್ನು   ಮತ್ತೊಮ್ಮೆ  ಮಾಡಿದರು.

ಉಯ್ಯಕೊಂಡಾರರು ಪರಮಪದಕ್ಕೆ ಹೊಗುವ ಮುನ್ನ ನಂಬಿಯನ್ನು ತಮ್ಮ  ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ ಮತ್ತು ಈಶ್ವರ ಮುನಿಯ ಮಗನನ್ನು ನಮ್ಮ ಸಂಪ್ರದಾಯದ ಮುಖ್ಯಸ್ಥರನ್ನಾಗಿಸಲು ಶಿಕ್ಷಣ ಕೊಡುವಂತೆ ಆದೇಶಿಸುತ್ತಾರೆ. ಈಶ್ವರ ಮುನಿಯ ಮಗನಾಗಿ ಯಮುನೈತುರೈವನ್ ಜನ್ಮಿಸಿದರು ಮತ್ತು ಅವರ ಪಂಚ ಸಂಸ್ಕಾರವನ್ನು ನಂಬಿ ಮಾಡುತ್ತಾರೇ (ಆ ಕಾಲದಲ್ಲಿ,ಮಗು ಹುಟ್ಟಿ ೧೧ದಿನ ನಾಮಕರಣ ಮಾಡುವಾಗ ಶಂಖ ಚಕ್ರ ಲಾಂಚನ ಮಾಡುವುದು ವಾಡಿಕೆಯಾಗಿತ್ತು – ಶಿಷ್ಯನು ತಿರುಮಂತ್ರದ ಅರ್ಥ ಉಪದೇಶವನ್ನು ಮತ್ತು ತಿರುವಾರಾದನ ಮಾಡುವ ವಿಧಾನವನ್ನು ಪರಿಪಕ್ವತೆ ಪಡೆದ ನಂತರ ಕಲಿತ್ತುಕೊಳುತ್ತಾರೆ).

ಯಮುನೈತುರೈವರು ತುಂಬ ಬುದ್ಧಿವಂತರು , ಆಳವಂದಾರ್ ಎಂದು ಹೆಸರುವಾಸಿಯಾದರು, ಅವರಿಗೆ ಅರ್ಧ ರಾಜ್ಯ ಸಿಗುತ್ತದೇ . ಅವರು ರಾಜ್ಯದ ಕೆಲಸದಲ್ಲಿ ಮಗ್ನರಾದರು. ನಂಬಿ ಆಳವಂದಾರನ್ನು ಭೇಟಿಯಾಗಳು ಪ್ರಯತ್ನಿಸುತ್ತಾರೆ, ಅದರೆ ಕಾವಲುಗಾರ ಬಿಡಲಿಲ್ಲ.

ನಂಬಿಯವರು ಆಳವಂದಾರನ್ನು ಸುಧಾರಿಸುವ ಕೆಲಸವನ್ನು ತೆಗೆದುಕೊಳ್ಳುತ್ತಾರೇ. ತಮ್ಮ ಶಿಷ್ಯನನ್ನು ಪುನಃ ನಮ್ಮ ಸಂಪ್ರದಾಯಕ್ಕೇ ಆಕರ್ಷಿಸಲು, ಅವರು ತೂದುವಳೈ (ಕಕಮುಂಜಿ, ಅಂಬುಸಂದೆಬಲ್ಲಿ) ಎಂಬ ಸೊಪ್ಪನ್ನು ದಿನವು ಅರಮನೆ ಅಡಿಗೆಮನೆಯ ಕೈಂಕರ್ಯಪರಿಗೆ ಕೊಡುತ್ತಾರೇ. ಆಳವಂದಾರು ಅದನ್ನು ತುಂಬ ಇಷ್ಟಪಡುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಸೊಪ್ಪು  ಬರುವುದು ನಿಂತುಹೊಯಿತು, ಕೈಂಕರ್ಯಪರನ್ನು ಎನಾಯಿತೆಂದು ಕೇಳುತ್ತಾರೆ. ಅವರು ಒಬ್ಬ ಶ್ರೀವೈಷ್ಣವರು ದಿನವು ಸೊಪ್ಪನ್ನು ಕೊಡುತ್ತಿದ್ದರು  ಮತ್ತು ಈಗ ಸೊಪ್ಪು  ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ತಿಳಿಸುತ್ತಾರೇ. ಆಳವಂದಾರರಿಗೆ ಅ ಶ್ರೀವೈಷ್ಣವರು ಮಣಕ್ಕಾಲ್ ನಂಬಿ ಎಂದು ತಿಳಿದಕೂಡಲೆ, ಅವರನ್ನು ಅರಮನೆಗೆ ಆಹ್ವಾನಿಸಿ ಗೌರವಿಸುತ್ತಾರೆ. ಅವರಿಗೆ ಯಾವ ಸಂಪತ್ತು ಬೇಕೆಂದು ಕೇಳುತ್ತಾರೇ. ತಮ್ಮ ನಿಜವಾದ ಸಂಪತ್ತು (ಶ್ರೀವೈಷ್ಣವಶ್ರಿ) ನಾಧಮುನಿಗಳು ರಚಿಸಿರುವರು ಮತ್ತು ಅದನ್ನು ಆಳವಂದಾರರಿಗೆ ಕೊಡಲು ಬಯಸುತ್ತಾರೇ ಎಂದು ಮಣಕ್ಕಾಲ್ ನಂಬಿ ಹೇಳುತ್ತಾರೇ. ಇದನ್ನು ಕೇಳಿದ ಆಳವಂದಾರರು, ಕಾವಲುಗಾರರಿಗೆ ಯಾವಾಗ ನಂಬಿಯವರು ಬಂದರು ಒಳಗೇ ಬಿಡುವಂತೆ ಆದೇಶನೀಡುತ್ತಾರೇ.

ಮಣಕ್ಕಾಲ್ ನಂಬಿ ಆಳವಂದಾರರಿಗೆ ಭಗವತ್ ಗೀತೆಯ ಪರಿಪೂರ್ಣ  ಅರ್ಥವನ್ನು ಉಪದೇಶ ಮಾಡುತ್ತಾರೆ . ಇದರಿಂದ ಆಳವಂದಾರರು ನಿಧಾನವಾಗಿ  ಪರಿವರ್ತಿಸುತ್ತಾರೇ. ಆಳವಂದಾರರು ಬದಲಾದ ಮೇಲೆ, ಭಗವತ್ ಸಾಕ್ಷಾತ್ಕಾರಕ್ಕೆ  ಗೀತೆಯ ಸಾರಾಂಶವನ್ನು ತಿಳಿದುಕೊಳ್ಳು ಆಸೆ ವ್ಯಕ್ತಪಡಿಸುತ್ತಾರೆ. ಅಗ ನಂಬಿಯವರು ಚರ್ಮ ಶ್ಲೋಕದ ಅರ್ಥವನ್ನು ವಿವರವಾಗಿ ಹೇಳುತ್ತಾರೆ . ಅವರು ಆಳವಂದಾರನ್ನು ಶ್ರೀರಂಗಕ್ಕೆ ಕರೆದುಕೊಂಡು ಬಂದು ಪೆರಿಯ ಪೆರುಮಾಳ್ಳಿನ ಸೇವೆ ಮಾಡಿಸುತ್ತಾರೆ. ಆಳವಂದಾರರು ಪೆರಿಯ ಪೆರುಮಾಳ್ಳಿನ ಸೌಂದರ್ಯಕ್ಕೆ ಸಮ್ಮೋಹನಗೊಂಡು ತಮ್ಮ ಎಲ್ಲ ಲೌಕಿಕ ಮಮತೆಯನ್ನು ಬಿಡುತ್ತಾರೆ.

ನಾಥಮುನಿಗಳ ಆಸೆಯನ್ನು ಪೂರೈಸಿದ ಮೇಲೆ ಮಣಕ್ಕಾಲ್ ನಂಬಿಯವರು ಪರಮಪದಕ್ಕೆ ಸಂತೋಷದಿಂದ  ಹೊರಡುತ್ತಾರೆ. ಅವರು ಆಳವಂದಾರರಿಗೆ ನಾಥಮುನಿಗಳ ಆಸೆ, ನಮ್ಮ ಸಂಪ್ರದಾಯವನ್ನು ರಕ್ಷಿಸು ಮತ್ತು ಪ್ರಚಾರ ಮಾಡಲು ಹೇಳುತ್ತಾರೆ ಹಾಗು ತಮ್ಮ ಹಾಗೆ ನಮ್ಮ ಸಂಪ್ರದಾಯವನ್ನು ಮುಂದೆ ನೆಡೆಸಲು ಒಬ್ಬರನ್ನು ಗುರುತುಹಿಡಿದು ಆಶೀರ್ವದಿಸಲು ಹೇಳುತ್ತಾರೆ. ಹೀಗೆ ಆಳವಂದಾರರ ಆಶೀರ್ವಾದದಿಂದ ರಾಮಾನುಜರು ನಮ್ಮ ಸಂಪ್ರದಾಯದ ಪ್ರವರ್ತಕರಾಗುತ್ತಾರೆ.

ಮಣಕ್ಕಾಲ್ ನಂಬಿಯ ತನಿಯನ್:

ಅಯತ್ನತೋ ಯಾಮುನಂ ಆತ್ಮ ದಾಸಂ ಅಲರ್ಕ್ಕ ಪತ್ರಾರ್ಪ್ಪಣ ನಿಶ್ಕ್ರಯೇಣ  |
ಯಃ ಕ್ರೀತವಾನ್ ಆಸ್ತಿತ ಯೌವರಾಜ್ಯಂ ನಮಾಮಿತಂ ರಾಮಮೇಯ ಸತ್ವಂ ||

ಆಳವಂದಾರ್ ಬಗ್ಗೆ ಮುಂದಿನ ಲೇಖನದಲ್ಲಿ ನೊಡೋಣ.

ಅಡಿಯೇನ್ ರಾಮಾನುಜ ದಾಸನ್,

ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಸಂಗ್ರಹ – http://acharyas.koyil.org/index.php/2012/08/25/manakkal-nambi-english/

ರಕ್ಷಿತ ಮಾಹಿತಿ:  https://acharyas.koyil.org/index.php

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org