ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಲಕ್ಶ್ಮೀನಾಥ ಸಮಾರಂಭಾಂ ನಾಥಯಾಮುನ ಮಧ್ಯಮಾಂ | ಅಸ್ಮದಾಚಾರ್ಯ ಪರ್ಯನ್ತಾಂ ವಂದೇ ಗುರುಪರಂಪರಾಂ|| ಶ್ರಿಯಃಪತಿಯಾದ ಲಕ್ಶ್ಮೀನಾರಾಯಣನಿಂದ ಶುರುವಾಗುವ – ನಾಥಮುನಿಗಳು ಮತ್ತು ಯಾಮುನಾಚಾರ್ಯರು ಮಧ್ಯದಲ್ಲಿ ಇರುವ – ಸ್ವಾಚಾರ್ಯರಿಂದ ಸಮಾಪ್ತವಾಗುವ – ಗುರುಪರಂಪರೆಯನ್ನು ವಂದಿಸುತ್ತೇನೆ ಈ ದಿವ್ಯ ಶ್ಲೋಕವನ್ನು ಕೂರತ್ತಾಳ್ವಾನ್ ನಮ್ಮ ಗುರುಪರಂಪರೆಯನ್ನು ವೈಭವೀಕರಿಸಲು ರಚಿಸಿದ್ದಾರೆ. ಎಂಬೆರುಮಾನಾರ್, ಅವರ ಆರ್ಚಾರ್ಯರಾಗಿದ್ದ ಕಾರಣದಿಂದ, ಅವರ ಪ್ರಕಾರ “ಅಸ್ಮದಾಚಾರ್ಯ” ಎಂದರೆ “ಎಂಬೆರುಮಾನಾರ್”. … Read more